KARNATAKA
ಹಾಸ್ಟೆಲ್ ,ಪಿಜಿಗಳಲ್ಲಿರುವ ಹೆಣ್ಮಕ್ಕಳೇ ಬಿ ಕೇರ್ ಫುಲ್, ಹಾಸ್ಟೆಲ್ ವಾಶ್‌ರೂಂಗಳ ವಿಡಿಯೋಗಳು ಮಾರಾಟ್ಟಕಿವೆ..!
ವಿಜಯವಾಡ : ಲೇಡಿಸ್ ಹಾಸ್ಟೆಲ್, ಪಿಜಿಗಳಲ್ಲಿರುವ ಹೆಣ್ಣಕ್ಕಳ ವಾಶ್‌ರೂಮ್‌ಗಳಲ್ಲಿನ (Hidden camera) ವಿಡಿಯೋ ರೆಕಾರ್ಡ್ ಮಾಡಿ ಮಾರಾಟ ಮಾಡುವ ನೀಚ ದಂಧೆ ಜೋರಾಗಿದೆ.
ಆಂಧ್ರ ಪ್ರದೇಶದಲ್ಲಿ ಇಂತಹುದೇ ಅಘಾತಕಾರಿ ಪ್ರಕರಣಗಳು ಬಯಲಿಗೆ ಬಂದಿವೆ. ಕೃಷ್ಣಾ ಜಿಲ್ಲೆಯ ಗುಡಿವಾಡದಲ್ಲಿರುವ ಖಾಸಗಿ ಇಂಜಿನಿಯರಿಂಗ್ ಕಾಲೇಜಿನ ಹುಡುಗಿಯರ ಹಾಸ್ಟೆಲ್ ವಾಶ್ ರೂಂನಲ್ಲಿ ಹಿಡನ್ ಕ್ಯಾಮೆರಾಗಳನ್ನು ವಿದ್ಯಾರ್ಥಿಗಳೇ ಪತ್ತೆ ಹಚ್ಚಿದ್ದಾರೆ. ಅಂತಿಮ ವರ್ಷದ ಬಿ.ಟೆಕ್ ವಿದ್ಯಾರ್ಥಿಯೊಬ್ಬ ಮತ್ತೊಬ್ಬ ವಿದ್ಯಾರ್ಥಿಯ ನೆರವಿನೊಂದಿಗೆ ಹಿಡನ್ ಕ್ಯಾಮೆರಾಗಳಲ್ಲಿ ಸೆರೆಹಿಡಿದ ವಿಡಿಯೋಗಳನ್ನು ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ.
ಪೊಲೀಸ್ ಮಾಹಿತಿ ಪ್ರಕಾರ ಇದುವರೆಗೆ 300ಕ್ಕೂ ಅಧಿಕ ವಿಡಿಯೋಗಳನ್ನು ರೇಕಾರ್ಡ್ ಮಾಡಿ ಮಾರಾಟ ಮಾಡಲಾಗಿದೆ ಎಂಬ ಅಘಾತಕಾರಿ ಅಂಶ ಬಯಲಾಗಿದೆ. ಈ ಬಗ್ಗೆ ಅಲ್ಲಿನ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ಹಾಸ್ಟೆಲ್ ಆವರಣದಲ್ಲಿ ಗುಂಪು ಸೇರಿದ ಪ್ರತಿಭಟನಾನಿರತ ವಿದ್ಯಾರ್ಥಿಗಳು, ಬಾಲಕಿಯರ ವಾಶ್ ರೂಂನಲ್ಲಿ ಹಿಡನ್ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಎಂದು ಆರೋಪಿಸಿದ್ದಾರೆ.
ಸ್ಥಳಕ್ಕೆ ಧಾವಿಸಿ ಬಂದ ಪೊಲೀಸರು ಮಧ್ಯಪ್ರವೇಶಿಸಿ ವಿದ್ಯಾರ್ಥಿಯೊಬ್ಬನಿಂದ ಲ್ಯಾಪ್‌ಟಾಪ್ ಮತ್ತು ಮೊಬೈಲ್ ಅನ್ನು ವಶಪಡಿಸಿಕೊಂಡಿದ್ದು ತನಿಖೆ ಆರಂಭಿಸಿದ್ದಾರೆ. ಎನ್ನಲಾಗಿದೆ.