LATEST NEWS
ಮಂಗಳೂರಿನಲ್ಲಿ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್‌ನ ಬಾಲಕಿ ಭಾರ್ಗವಿ ನಾಪತ್ತೆ….!! ಪತ್ತೆಗಾಗಿ ಮನವಿ

ಮಂಗಳೂರು ಅಕ್ಟೋಬರ್ 19: ಬೆಂಗಳೂರಿನಿಂದ ಮಂಗಳೂರಿಗೆ ಬಂದ ಬಾಲಕಿಯೊಬ್ಬಳು ನಾಪತ್ತೆಯಾಗಿದ್ದು, ಆಕೆಯ ಪತ್ತೆಗಾಗಿ ಪೋಷಕರು ಸಾರ್ವಜನಿಕರ ಸಹಾಯ ಯಾಚಿಸಿದ್ದಾರೆ.
ನಾಪತ್ತೆಯಾದ ಬಾಲಕಿಯನ್ನು ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್‌ನ ಬಾಲಕಿ ಭಾರ್ಗವಿ (14). ಭಾರ್ಗವಿ ಅವರು ಸೋಮವಾರ ಮುಂಜಾನೆ 3 ಗಂಟೆಗೆ ಮಂಗಳೂರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಬಂದ ನಂತರ ನಾಪತ್ತೆಯಾಗಿದ್ದಾರೆ.

ಬಳಿಕ ಆಟೋ ಬಾಡಿಗೆಗೆ ಪಡೆದು ಮುಕ್ಕಾ ಬೀಚ್, ಕದ್ರಿ ಪಾರ್ಕ್ ಪ್ರವಾಸ ಮಾಡಿದ್ದಳು ಎನ್ನಲಾಗಿದ್ದು, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ತಲುಪಿದ ಬಳಿಕ ಆಟೋ ಚಾಲಕನೊಬ್ಬನಿಗೆ ತನ್ನ ಚಿಕ್ಕಮ್ಮನ ಮನೆಗೆ ಹೋಗುವುದಾಗಿ ಹೇಳಿದ್ದಾಳೆ ಎಂದು ತಿಳಿದುಬಂದಿದೆ. ಆದರೆ ಆಕೆ ಎಲ್ಲಿದ್ದಾಳೆ ಎಂಬುದು ಇನ್ನೂ ತಿಳಿದುಬಂದಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದ ಕಾರಣ ಮಂಗಳೂರಿಗೆ ಬಂದಿರುವುದಾಗಿ ರಿಕ್ಷಾ ಚಾಲಕನ ಬಳಿ ತಿಳಿಸಿದ್ದಾಳೆ. ಆ ಬಳಿಕ ಬಾಲಕಿ ಯಾವ ಕಡೆ ಹೋಗಿದ್ದಾಳೆಂದು ಮಾಹಿತಿ ಲಭಿಸಿಲ್ಲ. ಈ ಬಾಲಕಿಯ ಬಗ್ಗೆ ಮಾಹಿತಿ ದೊರೆತಲ್ಲಿ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಲು ಪೊಲೀಸರು ತಿಳಿಸಿದ್ದಾರೆ.