KARNATAKA
ಮಾಟಮಂತ್ರದ ಆಕರ್ಷಣೆಗೆ ಮನೆ ಬಿಟ್ಟ 17 ವರ್ಷದ ಬಾಲಕಿ
ಬೆಂಗಳೂರು:ಮಾಟ ಮಂತ್ರಗಳ ಬಗ್ಗೆ ಆಕರ್ಷಣೆಗೆ ಒಳಗಾದ 17ರ ಅಪ್ರಾಪ್ತ ಬಾಲಕಿಯೊಬ್ಬಳು ಮನೆಯಿಂದ ನಾಪತ್ತೆಯಾದ ಘಟನೆ ಬೆಂಗಳೂರಿನಲ್ಲಿ ಅಕ್ಟೋಬರ್ 31 ರಂದು ನಡೆದಿದ್ದು, ಬಾಲಕಿ ಪೋಷಕರು ಮಗಳ ಪತ್ತೆಗಾಗಿ ಸಾಮಾಜಿಕ ಜಾಲತಾಣಗಳ ಮೊರೆ ಹೋಗಿದ್ದಾರೆ.
17 ವರ್ಷದ ಬಾಲಕಿ ಅನುಷ್ಕ ವರ್ಮ ಕಳೆದ ಅಕ್ಟೋಬರ್ 31ರಂದು ಬೆಳಗ್ಗೆ 8.30ಕ್ಕೆ ಮನೆಬಿಟ್ಟು ಹೋದವಳು ಇದುವರೆಗೆ ಹಿಂತಿರುಗಿಲ್ಲ. ಪೊಲೀಸರು ಇಷ್ಟು ದಿನ ತೀವ್ರ ಹುಡುಕಾಟ ನಡೆಸಿದರೂ ಕೂಡ ಇನ್ನೂ ಆಕೆಯ ಸುಳಿವು ಸಿಕ್ಕಿಲ್ಲ. ಸುಬ್ರಹ್ಮಣ್ಯನಗರ ಪೊಲೀಸ್ ಠಾಣೆಯಲ್ಲಿ ಆಕೆಯ ಪೋಷಕರು ದೂರು ದಾಖಲಿಸಿದ್ದು ಸೋಷಿಯಲ್ ಮೀಡಿಯಾ ಮೂಲಕ ಕೂಡ ತಮ್ಮ ಮಗಳನ್ನು ಯಾರಾದರೂ ಹುಡುಕಿಕೊಡಿ ಎಂದು ಮೊರೆಯಿಟ್ಟಿದ್ದಾರೆ.
ಈ ಕುರಿತಂತೆ ಮಾಹಿತಿ ನೀಡಿರುವ ಬಾಲಕಿ ತಂದೆ ತಮ್ಮ ಮಗಳು ಮಾಟ-ಮಂತ್ರಿ ಅಭಿಚಾರದ ಪ್ರಭಾವಕ್ಕೆ ಒಳಗಾಗಿದ್ದಳು. ಆಕೆಗೆ ಕೆಲವು ಸಂಘ-ಸಂಸ್ಥೆಗಳು ಮತ್ತು ವ್ಯಕ್ತಿಗಳ ಪರಿಚಯ, ಬೆಂಬಲವಿತ್ತು. ಮಗಳು ಕಾಣೆಯಾದ ದಿನದಿಂದ ನಮ್ಮ ಜೀವನ ನರಕವಾಗಿಬಿಟ್ಟಿದೆ ಎಂದರು. Shamanism (ಆತ್ಮಗಳ ಜೊತೆ ಸಂಭಾಷಣೆ) ಮಾದರಿಯನ್ನು ಕಲಿಯಲು ಅನುಷ್ಕಾ ಬಯಸಿದ್ದಳು. ಆದರೆ ಪೋಷಕರು ಮನೆಯಲ್ಲಿಯೇ ಕಲಿಯುವಂತೆ ಹೇಳಿದ್ದರು. ಆದರೆ ಎರಡು ತಿಂಗಳಿನಿಂದ ಆಕೆ ನಾಪತ್ತೆಯಾಗಿದ್ದು ಇದರ ಹಿಂದೆ Shamanism ಆಕರ್ಷಣೆ ಇರಬಹುದು ಎಂದು ಶಂಕಿಸಲಾಗಿದೆ.