LATEST NEWS
ನೀರಿನಲ್ಲಿ ಕೊಚ್ಚಿ ಹೋದ ವಿಧ್ಯಾರ್ಥಿನಿ ಮೃತ ದೇಹ ಪತ್ತೆ
ನೀರಿನಲ್ಲಿ ಕೊಚ್ಚಿ ಹೋದ ವಿಧ್ಯಾರ್ಥಿನಿ ಮೃತ ದೇಹ ಪತ್ತೆ
ಪಡುಬಿದ್ರಿ ಮೇ 30: ಉಡುಪಿಯಲ್ಲಿ ಸುರಿದ ಭಾರಿ ಮಳೆಯ ಹಿನ್ನಲೆಯಲ್ಲಿ ಸೇತುವೆ ಮೆಲೆ ಹರಿದ ನೀರಿನಲ್ಲಿ ಕೊಚ್ಚಿ ಹೋಗಿದ್ದ ನಿಧಿ ಆಚಾರ್ಯ ಅವರ ಮೃತದೇಹ ಪತ್ತೆಯಾಗಿದೆ.
ಪಾದೆಬೆಟ್ಟುವಿನ ಉಮೇಶ್ ಆಚಾರ್ಯ – ಆಶಾ ದಂಪತಿ ಪುತ್ರಿಯಾಗಿರುವ ನಿಧಿ ಮತ್ತು ನಿಶಾ ಪಡುಬಿದ್ರಿಯ ಎಸ್ ಬಿವಿಪಿ ಹಿರಿಯ ಪ್ರಾರ್ಥಮಿಕ ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿದ್ದು, ನಿಧಿ ನಾಲ್ಕನೆ ತರಗತಿ ವಿಧ್ಯಾರ್ಥಿನಿಯಾಗಿದ್ದಳು. ನಿನ್ನೆ ಉಡುಪಿಯಲ್ಲಿ ಸುರಿದ ಭಾರಿ ಮಳೆಯಿಂದಾಗಿ ಶಾಲೆ 3 ಗಂಟೆಗೆ ಬಿಟ್ಟಿತ್ತು. ಈ ಹಿನ್ನಲೆಯಲ್ಲಿ ಶಾಲೆಯಿಂದ ಮನೆಗೆ ಸೈಕಲ್ ನಲ್ಲಿ ವಾಪಾಸಾಗುತ್ತಿರುವ ಸಂದರ್ಭ ಎರ್ಮಾಳು ತೆಂಕಪಾದೆಬೆಟ್ಟು ಅಲಡೆ ಬಳಿಯ ಪಟ್ಲ ಕಿರುಸೇತುವೆ ದಾಟುತ್ತಿದ್ದಾಗ ಸೇತುವೆ ಮೇಲೆ ಹರಿದ ನೀರು ಇವರಿಬ್ಬರನ್ನು ಕೊಚ್ಚಿಕೊಂಡು ಹೋಗಿದೆ.
ಈ ವೇಳೆ ನಿಧಿ ನೀರುಪಾಲಾಗಿದ್ದು, ನಿಶಾ ಅಲ್ಲಿಯೇ ಕೈಗೆ ಸಿಕ್ಕ ಹುಲ್ಲು ಕಡ್ಡಿಗಳನ್ನು ಹಿಡಿದು ಬೊಬ್ಬೆ ಹಾಕುತ್ತಿದ್ದಳು. ಈ ಹುಡುಗಿಯ ಬೊಬ್ಬೆ ಕೇಳಿದ ಸ್ಥಳೀಯರು ಬಂದು ಆಕೆಯನ್ನು ರಕ್ಷಿಸಿದ್ದಾರೆ.
ಆದರೆ ನಿಧಿ ಮಾತ್ರ ನೀರಿನಲ್ಲಿ ಕೊಚ್ಚಿಹೊಗಿದ್ದಳು, ನಿನ್ನೆ ಇಡೀ ದಿನ ಅಗ್ನಿಶಾಮಕದಳ ಮತ್ತು ಸ್ಥಳೀಯರು ಬಾಲಕಿಗಾಗಿ ಶೋಧ ಕಾರ್ಯ ನಡೆಸಿದ್ದರು. ಇಂದು ಸೇತುವೆ 100 ಮೀಟರ್ ಅಂತರದಲ್ಲಿ ವಿಧ್ಯಾರ್ಥಿನಿಯ ಮೃತ ದೇಹ ಪತ್ತೆಯಾಗಿದೆ.
ಈ ಸಂಬಂಧ ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಾಲಕಿ ಮೃತದೇಹವನ್ನು ಪಡುಬಿದ್ರೆ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ
ಭಾರಿ ಮಳೆ ಹಿನ್ನಲೆಯಲ್ಲಿ ಉಡುಪಿ ಜಿಲ್ಲಾಡಳಿತ ನಿನ್ನೆ ಮತ್ತು ಇಂದು ಶಾಲೆ ಹಾಗೂ ಕಾಲೇಜುಗಳಿಗೆ ರಜೆ ಘೋಷಿಸಿದೆ.
ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಪ್ರಾನ್ಸಿಸ್ ನಿಧಿ ಕುಟುಂಬಕ್ಕೆ 4 ಲಕ್ಷ ರೂ ಪರಿಹಾರ ನೀಡಿದ್ದಾರೆ.