LATEST NEWS
ಕರ್ಟನ್ ಸರಿ ಮಾಡಲು ಹೋಗಿ 5ನೇ ಮಹಡಿಯಿಂದ ಕೆಳಗೆ ಬಿದ್ದು ಬಾಲಕಿ ಸಾವು…!!

ಮಂಗಳೂರು ಜೂನ್ 16: ಅಪಾರ್ಟ್ ಮೆಂಟ್ ಒಂದರ ಪ್ಲ್ಯಾಟ್ ನಲ್ಲಿ ಬಾಲ್ಕನಿಯ ಕರ್ಟನ್ ಸರಿ ಮಾಡಲು ಹೋಗಿ ಬಾಲಕಿಯೊಬ್ಬಳು ಆಯತಪ್ಪಿ 5ನೇ ಮಹಡಿಯಿಂದ ಕೆಳಗೆ ಬಿದ್ದು ಸಾವನಪ್ಪಿರುವ ಘಟನೆ ಮಂಗಳೂರಿನ ಕಂಕನಾಡಿಯಲ್ಲಿ ನಡೆದಿದೆ.
ಮೃತ ಬಾಲಕಿಯನ್ನು ಸೆಹರ್ ಇಮ್ತಿಯಾಜ್(15) ಎಂದು ಗುರುತಿಸಲಾಗಿದೆ. ಕಂಕನಾಡಿಯಲ್ಲಿರುವ ವಿಶ್ವಾಸ್ ಕ್ರೌನ್ ಎಂಬ ಅಪಾರ್ಟ್ ಮೆಂಟ್ ನಲ್ಲಿ ಈ ಘಟನೆ ನಡೆದಿದೆ.
ಬಾಲಕಿ ನಿನ್ನೆ ಸಂಜೆ 4.30ರ ಸುಮಾರಿಗೆ ತಮ್ಮ ಫ್ಲ್ಯಾಟ್ನ ಬಾಲ್ಕನಿಯ ಸೈಡ್ ಕರ್ಟನ್ ಅನ್ನು ಕುರ್ಚಿಯ ಮೇಲೆ ಹತ್ತಿ ಸರಿಪಡಿಸುತ್ತಿದ್ದ ಸಂದರ್ಭದಲ್ಲಿ ಆಯತಪ್ಪಿ 5ನೇ ಮಹಡಿಯಿಂದ ಕೆಳಗೆ ಬಿದ್ದಿದ್ದಾಳೆ. ಕೂಡಲೇ ಪೋಷಕರು ಗಾಯಗೊಂಡ ಬಾಲಕಿಯನ್ನು ಕಂಕನಾಡಿ ಆಸ್ಪತ್ರೆಗೆ ದಾಖಲಿಸಿದರಾದರೂ ಆಕೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ.
