Connect with us

DAKSHINA KANNADA

ಪುತ್ತೂರು : ಇಷ್ಟೊಂದು ಉದ್ದದ ದೈತ್ಯ ಕಾಳಿಂಗ ಸರ್ಪ ನೀವು ನೋಡಲು ಸಾಧ್ಯನೇ ಇಲ್ಲ..!!!

ಕಡಬ: ದಕ್ಷಿಣ ಕನ್ನಡದ ಕಡಬ ಕೋಡಿಂಬಾಳ ಗ್ರಾಮದಲ್ಲಿ ಭಾರಿ ಗಾತ್ರದ ಕಾಳಿಂಗ ಸರ್ಪವನ್ನು ಗ್ರಾಮಸ್ಥರು ಸೆರೆ ಹಿಡಿದಿದ್ದು ಉದ್ದದ ವಿವಾರದಲ್ಲಿ ಈ ದೈತ್ಯ ಕಾಳಿಂಗ ದಾಖಲೆ ಬರೆದಿದೆ.  ಈ ಪ್ರದೇಶದಲ್ಲಿ ಕಳೆದ ದಿನಗಳಿಂದ ದೈತ್ಯ ಹಾವೊಂದು ಓಡಾಟ ಮಾಡುತ್ತಿರುವ ಬಗ್ಗೆ ಸುದ್ದಿ ಹರಡಿತ್ತು.

ಮಾ.23 ರಂದು ರಬ್ಬರ್ ಟ್ಯಾಪಿಂಗ್ ಮಾಡುತ್ತಿದ್ದ ಕಾರ್ಮಿಕರೊಬ್ಬರಿಗೆ ಹಾವೊಂದು ಬುಸುಗುಟ್ಟುವ ಸದ್ದು ಕೇಳಿದೆ. ಮಾಹಿತಿ ಪಡೆದ ಸ್ಥಳೀಯರು ಹೆಬ್ಬಾವು ಇರಬಹುದೆಂದು ಬಾವಿಸಿ ಅಟ್ಟಿಸಿಕೊಂಡು ಹೋಗಿದ್ದಾರೆ ಬಳಿಕವೇ ಅದು ದೈತ್ಯ ಕಾಳಿಂಗಸರ್ಪವೆಂದು ಅರಿವಿಗೆ ಬಂದಿದೆ. ಉರಗ ರಕ್ಷಕ ಸುಬ್ರಹ್ಮಣ್ಯದ ಗೋಪಾಲದ ನೆರವಿನೊಂದಿಗೆ ಸತತ 7 ಗಂಟೆಗಳ ಕಾಲನಿರಂತರ ಶ್ರಮದಿಂದ ಈ ದೈತ್ಯ ಕಾಳಿಂಗವನ್ನು ಸೆರೆ ಹಿಡಿಯುವಲ್ಲಿ ಸಫಲರಾಗಿದ್ದಾರೆ. ಒಂದೆರಡು ಬಾರಿ ಜನರ ಮೇಲೆಯೇ ಕಾಳಿಂಗ ದಾಳಿ ಮಾಡಲು ಯತ್ನಿಸಿದ ಘಟನೆಯೂ ನಡೆದಿದೆ. ಸೆರೆ ಸಿಕ್ಕ ಈ ದೈತ್ಯ ಕಾಳಿಂಗ ಬರೋಬ್ಬರಿ 13 ಅಡಿಗಳಷ್ಟು ಉದ್ದವಿದ್ದು ಅದನ್ನು ನೋಡಲು ಜನ ಸಾಗರವೇ ಅಲ್ಲಿ ನೆರೆದಿತ್ತು.. ಆಹಾರ ಹುಡುಕಾಟದಲ್ಲಿ ಪ್ರಾಣಿಯೊಂದನ್ನು ಬೆನ್ನಟ್ಟುತ್ತಾ ಈ ಕಾಳಿಂಗ ಸರ್ಪ ಬಂದಿರುವುದಾಗಿ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಸದ್ಯ ಬೃಹತ್ ಗಾತ್ರದ ಹಾವನ್ನು ಸುರಕ್ಷಿತವಾಗಿ ಸುಬ್ರಹ್ಮಣ್ಯ ಸಮೀಪದ ದಟ್ಟ ಕಾಡಿನಲ್ಲಿ ಬಿಡಲಾಗಿದೆ ಎಂದು ತಿಳಿದು ಬಂದಿದೆ.


ಭಯಂಕರ ವಿಷಕಾರಿ ಈ ಕಾಳಿಂಗ ಸರ್ಪ:
ಕಾಳಿಂಗ ಸರ್ಪ ಭಯಾನಕ ಮತ್ತು ಅಪಾಯಕಾರಿಯಾಗಿ ಕಚ್ಚಿ ಕೊಲ್ಲುವ ಹಾವಾಗಿದ್ದರೂ, ಇದು ನಾಚಿಕೆ ಸ್ವಭಾವ ಮತ್ತು ಏಕಾಂಗಿತನ ಬಯಸುವ ಪ್ರಾಣಿಯಾಗಿದೆ. ಆದಷ್ಟು ಮನುಷ್ಯರೊಂದಿಗೆ ಮುಖಾಮುಖಿಯಾಗುವುದನ್ನು ಸಾಧ್ಯವಾದಷ್ಟು ತಪ್ಪಿಸಿಕೊಳ್ಳಲು ಯತ್ನಿಸುವುದು’ಕರ್ನಾಟಕದ ಆಗುಂಬೆಯ ಸೋಮೇಶ್ವರ ಕಾಡು ಅತಿ ಹೆಚ್ಚು ಕಾಳಿಂಗ ಸರ್ಪಗಳನ್ನು ಹೊಂದಿದೆ.ಕಾಳಿಂಗ ಸರ್ಪದ ನಿಧಾನಗತಿಯ ಚಯಾಪಚಯಿ(ಜೀರ್ಣ) ಕ್ರಿಯೆಯಿಂದಾಗಿ, ಒಂದು ಬಾರಿ ದೊಡ್ಡ ಪ್ರಮಾಣದಲ್ಲಿ ಆಹಾರ ಸೇವಿಸಿದ ನಂತರ, ಹಲವು ತಿಂಗಳವರೆಗೆ ಅದಕ್ಕೆ ಆಹಾರದ ಅಗತ್ಯವಿರು ವುದಿಲ್ಲಕಾಳಿಂಗ ಸರ್ಪಗಳು ಇತರ ಜಾತಿಯ ಹಾವುಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ವಿಷ ಹೊರಸೂಸುತ್ತವೆ. ಕಾಳಿಂಗ ಸರ್ಪವು ಒಂದು ಬಾರಿಗೆ 380 ರಿಂದ 600 mgಯಷ್ಟು ವಿಷವನ್ನು ಶರೀರದೊಳಗೆ ಸೇರಿಸುವ ಶಕ್ತಿ ಹೊಂದಿವೆ. ಈ ವಿಷ ಸುಮಾರು 40 ಜನರನ್ನು ಕೊಲ್ಲುವ ಶಕ್ತಿ ಹೊಂದಿದೆ.ಇಷ್ಟೊಂದು ಪ್ರಮಾಣದ ವಿಷವು ಆನೆಯನ್ನು 3 ಗಂಟೆಗಳೊಳಗೆ ಕೊಲ್ಲಲು ಸಾಕಾಗುವುದೆಂದು ಹೇಳಲಾಗುತ್ತದೆ.
ಒಂದು ಬಾರಿ ಕಾಳಿಂಗ ಸರ್ಪ ಕಚ್ಚಿದಲ್ಲಿ, ಅದರ ವಿಷದ ಭೀಕರ ಪ್ರಮಾಣದಿಂದಾಗಿ ಮನುಷ್ಯ 15 ನಿಮಿಷಗಳೊಳಗೆ ಸಾವನ್ನಪ್ಪುವನು. ಕಾಳಿಂಗ ಸರ್ಪ ಕಡಿತದ ಚಿಕಿತ್ಸೆಗಾಗಿ, ವಿಶೇಷವಾಗಿ ತಯಾರಿಸಿದ ಎರಡು ವಿಧದ ವಿಷ ನಿರೋಧಕಗಳು ಸದ್ಯ ಲಭ್ಯವಿವೆ. ಒಂದನ್ನು ಥೈಲ್ಯಾಂಡ್‌ ರೆಡ್‌ ಕ್ರಾಸ್‌ ಸಂಸ್ಥೆಯು ಸಿದ್ದಪಡಿಸಿದರೆ, ಇನ್ನೊಂದನ್ನು ಭಾರತದ ಸೆಂಟ್ರಲ್‌ ರಿಸರ್ಚ್‌ ಇನ್‌ಸ್ಟಿಟ್ಯುಟ್‌ ತಯಾರಿಸುವುದು; ಆದರೂ ಇವುಗಳೆರಡು ಚಿಕ್ಕ ಪ್ರಮಾಣದಲ್ಲಿ ಉತ್ಪಾದನೆಯಾಗುವುದರಿಂದ ಲಭ್ಯತೆ ಕೂಡಾ ತುಂಬಾ ಕಡಿಮೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *