DAKSHINA KANNADA
ಜೆರೋಸಾ ಶಾಲಾ ಪ್ರಕರಣ, 2 ನೇ ದಿನವೂ ಮುಂದುವರೆದ ವಿಚಾರಣೆ – ಪೋಷಕರು,ವಿದ್ಯಾರ್ಥಿಗಳಿಂದ ಹೇಳಿಕೆ ದಾಖಲು..!
ಮಂಗಳೂರು : ಮಂಗಳೂರು ಜೆರೋಸಾ ಶಾಲೆಯಲ್ಲಿ ಶಿಕ್ಷಕಿಯಿಂದ ಹಿಂದೂ ಧರ್ಮಕ್ಕೆ ಅವಹೇಳನ ಆರೋಪದ ಪ್ರಕರಣದಲ್ಲಿ ಎರಡನೇ ದಿನವು ಡಿಡಿಪಿಐ ಕಛೇರಿಯಲ್ಲಿ ಐಎಎಸ್ ಅಧಿಕಾರಿ ಆಕಾಶ್ ಶಂಕರ್ ವಿಚಾರಣೆ ಮುಂದುವರೆಸಿದರು.
ಈ ಪ್ರಕ್ರಿಯೆಯಲ್ಲಿ ಕೆಲವೊಂದು ಮಾಹಿತಿ, ದಾಖಲೆ, ಪುರಾವೆಗಳನ್ನು ಪಡೆದುಕೊಂಡು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಈಗಾಗಲೇ ವಿಚಾರಣಾಧಿಕಾರಿ ಆಕಾಶ್ ಶಂಕರ್ ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳು, ಪೋಷಕರೊಂದಿಗೆ ಮಾತುಕತೆ ನಡೆಸಿದ್ದಾರೆ. ಜೊತೆಗೆ ಎಲ್ಲಾರಿಗೂ ಮುಕ್ತವಾದ ಅವಕಾಶ ನೀಡಲಾಗಿದೆ.ಎಲ್ಲರು ಬಂದಿದ್ದಾರೆ ಅವರೊಂದಿಗೆ ಮುಕ್ತವಾಗಿ ಚರ್ಚೆ ನಡೆಸಿದ್ದೇನೆ ಎಂದು ತನಿಖೆ ಬಳಿಕ ಮಾಧ್ಯಮಗಳಿಗೆ ಆಕಾಶ್ ಶಂಕರ್ ಹೇಳಿಕೆ ನೀಡಿದ್ದಾರೆ. ಪ್ರಕರಣದ ಬಗ್ಗೆ ಪ್ರಾಥಮಿಕ ವರದಿ, ಪ್ರಾಥಮಿಕ ತನಿಖೆ ನಡೆದಿದೆ. ನಮ್ಮ ಅಧಿಕಾರಿಗಳ ಜೊತೆ ಚರ್ಚೆ ನಡೆಸಿ ಮಾಹಿತಿ ಪಡೆಯಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದ ಎಲ್ಲರಿಗೂ ನೋಟಿಸ್ ನೀಡಿ ತನಿಖೆ ನಡೆಸಲಾಗಿದೆ.ಇನ್ನೂ ಕೆಲವೊಂದು ಮಾಹಿತಿ ಕಲೆ ಹಾಕಬೇಕಿದ್ದು, ವಿಚಾರಣೆಯನ್ನು ಎರಡು ದಿನದಲ್ಲಿ ಮುಗಿಸಬಹುದು ಎಂದು ಅನಿಸಿದ್ದೇನೆ. ಆದ್ರೆ ಇನ್ನೂ ಕೆಲವು ಮಾಹಿತಿ ಕಲೆ ಹಾಕಬೇಕಿದೆ. ಆ ಬಳಿಕ ಸರ್ಕಾರಕ್ಕೆ ತನಿಖೆಯ ಸಂಪೂರ್ಣ ವರದಿಯನ್ನು ಆದಷ್ಟು ಬೇಗ ಸಲ್ಲಿಸುತ್ತೇನೆ. ಈಗಾಗಲೇ ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳು, ಪೋಷಕರೊಂದಿಗೆ ಮಾತುಕತೆ ನಡೆಸಿದ್ದೇನೆ. ಎಲ್ಲಾರಿಗೂ ಮುಕ್ತವಾದ ಅವಕಾಶ ನೀಡಲಾಗಿದೆ ಎಂದು ಪ್ರತಿಕ್ರೀಯಿಸಿದ್ದಾರೆ.