Connect with us

    LATEST NEWS

    ಚೆನ್ನೈ-ಮಂಗಳೂರು ಎಕ್ಸ್‌ಪ್ರೆಸ್‌ನಲ್ಲಿ ಜಿಲೆಟಿನ್ ಕಡ್ಡಿ ಸಾಗಾಟ: ಮಹಿಳೆ ಬಂಧನ

    ತಿರುವನಂತಪುರಂ, ಫೆಬ್ರವರಿ 26: ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳಾ ಯೊಬ್ಬರ ಬಳಿ 100 ಜಿಲೆಟಿನ್ ಕಡ್ಡಿ ಹಾಗೂ 350  ಡಿಟೋನೇಟರ್‌ಗಳನ್ನು ಆರ್‌ಪಿಎಫ್ ಪೊಲೀಸರು ವಶ ಪಡಿಸಿಕೊಂಡಿರುವ ಘಟನೆ ಕೇರಳದಲ್ಲಿ ನಡೆದಿದೆ.ತಮಿಳುನಾಡು ಮೂಲದ ರಮಣಿ ಸ್ಫೋಟಕಗಳನ್ನು ರೈಲಿನಲ್ಲಿ ಸಾಗಿಸುತ್ತಿದ್ದಳು. ಮಹಿಳೆ ಚೆನ್ನೈ-ಮಂಗಳೂರು ಎಕ್ಸ್‌ಪ್ರೆಸ್‌ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದಳು ಎಂದು ತಿಳಿದು ಬಂದಿದೆ. ಕೋಯಿಕೋಡ್ ರೈಲ್ವೆ ನಿಲ್ದಾಣದಲ್ಲಿ ರೈಲ್ವೆ ಪ್ರೊಟೆಕ್ಷನ್ ಫೋರ್ಸ್, ಆರ್‌ಪಿಎಫ್ ಪೊಲೀಸರು ಮಹಿಳೆಯಿಂದ ಭಾರೀ ಪ್ರಮಾಣದ ಸ್ಫೋಟಕ ವಸ್ತುಗಳನ್ನು ವಶಪಡೆದಿದ್ದಾರೆ.

    ಕಟ್ಟಾಡಿಯಿಂದ ತಲಸ್ಸೆರಿಗೆ ಈ ಸ್ಫೋಟಕಗಳನ್ನು ತೆಗೆದುಕೊಂಡು ಹೋಗುತ್ತಿದ್ದರು ಎಂದು ತಿಳಿದು ಬಂದಿದೆ. ಮಹಿಳೆ 100 ಜಿಲೆಟಿನ್ ಕಡ್ಡಿ ಹಾಗೂ 350 ಡಿಟೋನೇಟರ್‌ಗಳನ್ನು ಯಾರಿಗೂ ತಿಳಿಯದಂತೆ ರೈಲಿನಲ್ಲಿ ಸಾಗಿಸುತ್ತಿದ್ದರು. ಬ್ಯಾಗ್‍ನಲ್ಲಿ ಈ ಸ್ಫೋಟಕಗಳನ್ನು ಹಾಕಿ ಸೀಟ್ ಕೆಳಗಡೆ ಇಟ್ಟು ಸಾಗಿಸುತ್ತಿದ್ದರು ಎನ್ನಲಾಗಿದೆ. ಮಹಿಳೆಯನ್ನು ಸ್ಫೋಟಕ ವಸ್ತುಗಳ ಸಮೇತ ಆರ್‌ಪಿಎಫ್ ಪೊಲೀಸರು ವಶಕ್ಕೆ ಪಡೆದಿದ್ದಾರೆ.ವಿಚಾರಣೆ ವೇಳೆ ಮಹಿಳೆ ಬಾವಿ ತೋಡಲು ಜಿಲೆಟಿನ್ ಕಟ್ಟಿಗಳನ್ನು ತೆಗೆದುಕೊಂಡು ಹೋಗುತ್ತಿದ್ದೆ ಎಂದು ಹೇಳಿದ್ದಾಳೆ ಎಂದು ವರದಿಯಾಗಿದೆ. ಪೊಲೀಸರು ಈ ಸಂಬಂಧ ಪ್ರಕರಣವನ್ನು ದಾಖಲಿಸಿ ತನಿಖೆ ನಡೆಸುವುದಾಗಿ ಹೇಳಿದ್ದಾರೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *