ಗಾಂಜಾ ಮಾರಾಟ ಯತ್ನ, ಯುವಕನಿಗೆ ಸಾರ್ವಜನಿಕರಿಂದ ಧರ್ಮದೇಟು

ಮಂಗಳೂರು,ಎಪ್ರಿಲ್ 26: ಗಾಂಜಾ ವ್ಯವಹಾರ ಮತ್ತು ಮೊಬೈಲ್ ಕಳ್ಳತನ ನಡೆಸುತ್ತಿದ್ದ ಯುವಕನೋರ್ವ ಸಾರ್ವಜನಿಕರ ಕೈಗೆ ಸಿಕ್ಕಿ ಬಿದ್ದು ಧರ್ಮದೇಟು ತಿಂದಿದ್ದಾನೆ.

ಧರ್ಮಸ್ಥಳ ಮಂಜುನಾಥೇಶ್ವರ ಕ್ಷೇತ್ರದ ಆಸುಪಾಸಿನಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಈ ಯುವಕನನ್ನು ಸ್ಥಳೀಯರು ಪ್ರಶ್ನಿಸಿದ ಸಂದರ್ಭದಲ್ಲಿ ಯುವಕನ ಬಳಿ ಗಾಂಜಾ ಪ್ಯಾಕೆಟ್ ,ಮೂರು ಮೊಬೈಲ್, ನಾಲ್ಕು ವಾಹನದ ಕೀ ದೊರೆತಿದೆ.
ಧರ್ಮಸ್ಥಳ ಪರಿಸರದಲ್ಲಿ ಗಾಂಜಾ ಮಾರಾಟ ನಡೆಸುತ್ತಿರುವುದರ ಹಿಂದೆ ಈ ಯುವಕನ ಕೈವಾಡವಿದೆ ಎನ್ನುವುದರ ಬಗ್ಗೆ ಮಾಹಿತಿ ಪಡೆದ ಸ್ಥಳೀಯರು ಈತನಿಗೆ ಧರ್ಮದೇಟು ನೀಡಿ ಪೋಲೀಸರಿಗೆ ಒಪ್ಪಿಸಿದ್ದಾರೆ.
ಸ್ಥಳೀಯರ ಕೈಗೆ ಸಿಕ್ಕಿಬಿದ್ದ ಯುವಕನನ್ನು ತಲಪಾಡಿ ನಿವಾಸಿ ಸಮೀರ್ ಎಂದು‌ ಗುರುತಿಸಲಾಗಿದೆ.
ಸ್ಥಳೀಯರು ಯುವಕನಿಗೆ ಧರ್ಮದೇಟು ನೀಡುತ್ತಿರುವ ವಿಡಿಯೋದಲ್ಲಿ ಹಿಂದೂ ಧಾರ್ಮಿಕ ಕ್ಷೇತ್ರದಲ್ಲಿ ಈತನಿಗೆ ಏನು ಕೆಲಸ ಎನ್ನುವುದನ್ನೂ ಸಾರ್ವಜನಿಕರು ಪ್ರಶ್ನಿಸುತ್ತಿರುವುದು ಕಂಡು ಬಂದಿದೆ.