LATEST NEWS
ಗಾಂಜಾ ಪ್ರಕರಣ – ಮತ್ತೆ ಇಬ್ಬರು ಡಾಕ್ಟರ್ ಸೇರಿದಂತೆ ..7 ಮಂದಿ ವಿದ್ಯಾರ್ಥಿಗಳು ಪೊಲೀಸ್ ಬಲೆಗೆ

ಮಂಗಳೂರು ಜನವರಿ 21: ಇಡೀ ರಾಜ್ಯವೇ ಬೆಚ್ಚಿ ಬಿಳಿಸಿದ್ದ ವೈದ್ಯಕೀಯ ವಿಧ್ಯಾರ್ಥಿಗಳ ಗಾಂಜಾ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮತ್ತೆ ಇಬ್ಬರು ವೈದ್ಯರು ಸೇರಿದಂತೆ ಏಳು ಮಂದಿ ವೈದ್ಯಕೀಯ ವಿಧ್ಯಾರ್ಥಿಗಳನ್ನು ಬಂಧಿಸಲಾಗಿದ್ದು, ಇದರೊಂದಿಗೆ ಈ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 24ಕ್ಕೆ ಏರಿಕೆಯಾಗಿದೆ.
ಮಾಧ್ಯಮಗಳಿಗೆ ಮಾಹಿತಿ ನೀಡಿದ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಅವರು, ವೈದ್ಯರಾದ ಉತ್ತರ ಪ್ರದೇಶದ ಡಾ. ವಿದುಶ್ ಕುಮಾರ್ (27), ಕರ್ನಾಟಕದ ಡಾ.ಸುಧೀಂದ್ರ(34), ವೈದ್ಯ ವಿದ್ಯಾರ್ಥಿಗಳಾದ ಡಾ.ಸಿದ್ದಾರ್ಥ ಪಾವಸ್ಕರ್(29) ದಿಲ್ಲಿಯ ಡಾ.ಶರಣ್ಯ(23), ಕೇರಳದ ಡಾ.ಸೂರ್ಯಜೀತ್‌ದೇವ್(20), ಡಾ.ಆಯಿಷಾ ಮುಹಮ್ಮದ್(23), ತೆಲಂಗಾಣದವರಾದ ಡಾ.ಪ್ರಣಯ್ ನಟರಾಜ(24), ಡಾ.ಚೈತನ್ಯ ಆರ್ ತುಮುಲುರಿ(23) ಮತ್ತು ಉತ್ತರ ಪ್ರದೇಶ ಮೂಲದ ಡಾ. ಇಶಾ ಮಿಡ್ಡಾ(27) ಎಂಬವರನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ಹೇಳಿದರು.

ಜನವರಿ 7ರಂದು ವೈದ್ಯರ ಮತ್ತು ವೈದ್ಯಕೀಯ ವಿದ್ಯಾರ್ಥಿಗಳ ಗಾಂಜಾ ಪ್ರಕರಣ ಪತ್ತೆಯಾದ ಬಳಿಕ ಈ ಪ್ರಕರಣದಲ್ಲಿ ಬಂಧಿತರ ಒಟ್ಟು ಸಂಖ್ಯೆ 24ಕ್ಕೆ ಏರಿದೆ ಎಂದು ಎನ್. ಶಶಿಕುಮಾರ್ ತಿಳಿಸಿದ್ದಾರೆ.