LATEST NEWS
ಕುಂದಾಪುರ – ಗಾಂಜಾ ಮಾರಾಟಕ್ಕೆ ಯತ್ನ – ಆರೋಪಿ ಆರೆಸ್ಟ್

ಉಡುಪಿ ಜೂನ್ 29: ಉಡುಪಿ ಜಿಲ್ಲೆ ಬೈಂದೂರು ತಾಲೂಕು ನಾವುಂದ ಗ್ರಾಮದಲ್ಲಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಆರೋಪಿಯನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಯನ್ನು 42 ವರ್ಷ ಪ್ರಾಯದ ಜಾಫರ್ ಸಾದಿಕ್ ಎಂದು ಗುರುತಿಸಲಾಗಿದೆ.
ನಿನ್ನೆ ಸಂಜೆ ಐದು ಗಂಟೆ ಸುಮಾರಿಗೆ, ಅರೆಹೊಳೆ ಬೈಪಾಸ್ ನಿಂದ ಹೇರೂರಿನ ರೈಲ್ವೇ ಮೇಲು ಸೇತುವೆಯ ಬಳಿ ಈತ ದ್ವಿಚಕ್ರ ವಾಹನದಲ್ಲಿ ಬಂದಾಗ ಸಂಶಯಗೊಂಡು ಪರಿಶೀಲಿಸಲಾಯ್ತು.ಆತನ ಬ್ಯಾಗ್ ನಲ್ಲಿದ್ದ 15000 ಮೌಲ್ಯದ ಒಟ್ಟು 520 ಗ್ರಾಂ ಗಾಂಜಾವನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಆರೋಪಿಯನ್ನು ಬಂಧಿಸಲಾಗಿದೆ.

Continue Reading