BANTWAL
ಬಂಟ್ವಾಳ – ಗಾಂಜಾ ಸಾಗಾಟ ಯತ್ನ ಒರ್ವನ ಬಂಧನ

ಬಂಟ್ವಾಳ ಅಕ್ಟೋಬರ್ 2: ಬೈಕ್ ನಲ್ಲಿ ಗಾಂಜಾ ಸಾಗಾಟಕ್ಕೆ ಯತ್ನಿಸಿದ ವ್ಯಕ್ತಿಯೊಬ್ಬನನ್ನು ಬಂಟ್ವಾಳ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಬಂಟ್ವಾಳ ಪರಂಗಿಪೇಟೆ ನಿವಾಸಿ ಮಹಮ್ಮದ್ ಅಜರುದ್ದೀನ್ ಎಂದು ಗುರುತಿಸಲಾಗಿದೆ.
ಆರೋಪಿ ದಿನಾಂಕ 30-09-2020 ಬಂಟ್ವಾಳ ಅಮ್ಮೆಮ್ಮಾರ್ ರೈಲ್ವೇ ಬ್ರಿಡ್ಜ್ ಬಳಿ ಬೈಕ್ ನಲ್ಲಿ ಬರುತ್ತಿದ್ದ ಸಂದರ್ಭ ತಪಾಸಣೆ ಹಿನ್ನಲೆ ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸ್ ಉಪನಿರೀಕ್ಷಕರು ಮತ್ತು ಸಿಬ್ಬಂದಿಗಳು ನಿಲ್ಲಿಸಲು ಸೂಚಿಸಿದ್ದಾರೆ. ಆದರೆ ಆರೋಪಿ ಪೊಲೀಸರನ್ನು ನೋಡಿದ ಕೂಡಲೇ ಪರಾರಿಯಾಗಲು ಪ್ರಯತ್ನಿಸಿದ್ದಾನೆ. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿಯನ್ನು ಬೆನ್ನಟ್ಟಿ ಹಿಡಿದು ವಿಚಾರಣೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಆರೋಪಿಯ ಬೈಕ್ ಪಾಸಣೆ ನಡೆಸಿದ ಸಂದರ್ಭ ಅದರಲ್ಲಿ ಪ್ಲಾಸ್ಟಿಕ್ ಲಕೋಟೆಯಲ್ಲಿ 230 ಗ್ರಾಂ ಗಾಂಜಾ ಪದಾರ್ಥ ಇರುವುದು ಕಂಡು ಬಂದಿರುತ್ತದೆ. ಆರೋಪಿಯನ್ನು 25000/ ರೂ ಮೌಲ್ಯದ ಮೊಟಾರ್ ಸೈಕಲ್ ಮತ್ತು ಅಂದಾಜು ಮೌಲ್ಯ ರೂಪಾಯಿ 3000 ರೂಗಳ 230 ಗ್ರಾಂ ಗಾಂಜಾ ಪದಾರ್ಥದೊಂದಿಗೆ ವಶಕ್ಕೆ ಪಡೆದು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
