LATEST NEWS
ಗಾಂಜಾ ಮಾರಾಟ ಓರ್ವನ ಬಂಧನ

ಗಾಂಜಾ ಮಾರಾಟ ಓರ್ವನ ಬಂಧನ
ಮಂಗಳೂರು ನವೆಂಬರ್ 5: ನಗರದ ವಿವಿದೆಡೆ ವಿದ್ಯಾರ್ಥಿಗಳಿಗೆ ಗಾಂಜಾ ಪೂರೈಸುತ್ತಿದ್ದ ವ್ಯಕ್ತಿಯೊಬ್ಬ ನನ್ನ ಮಂಗಳೂರು ರೌಡಿ ನಿಗ್ರಹ ದಳದ ಪೊಲೀಸರು ಬಂಧಿಸಿದ್ದಾರೆ.
ಕದ್ರಿ ದೇವಾಲಯದ ಸ್ಮಶಾನ ವಠಾರದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ರೌಡಿ ನಿಗ್ರಹ ದಳದ ಪೊಲೀಸರು ದಾಳಿ ನಡೆಸಿದ್ದರು.

ಈ ಸಂದರ್ಭದಲ್ಲಿ ಬಂದರು ನಿವಾಸಿ ಅಮೀರ್ (20) ಎಂಬುವನನ್ನು ಪೊಲೀಸರು ಬಂಧಿಸಿದ್ದು ಬಂಧಿತರಿಂದ 200 ಗ್ರಾಂ ಗಾಂಜಾ, ಮೊಬೈಲ್ ಸೇರಿದಂತೆ 11 ಸಾವಿರ ರೂಪಾಯಿ ಮೌಲ್ಯದ ಸೊತ್ತನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.