Connect with us

LATEST NEWS

ಟ್ರೈನ್ ನಲ್ಲಿ ಮೊಬೈಲ್ ಕಳ್ಳತನ ಮಾಡ್ಲಿಕ್ಕೆ ಗ್ಯಾಂಗ್ – ಸದಸ್ಯರಿಗೆ ತಿಂಗಳ ಸಂಬಳ ಜೊತೆ ಟ್ರಾವೆಲ್ ಅಲೋಯೆನ್ಸ್

ಲಕ್ನೋ ಡಿಸೆಂಬರ್ 31: ರೈಲ್ವೆ ನಿಲ್ದಾಣಗಳಲ್ಲಿ ರೈಲಿನ ಕಿಟಕಿ ಬಳಿ ಅಥವಾ ರೈಲಿನ ಬಾಗಿಲ ಬಳಿ ನಿಂತು ಮೊಬೈಲ್ ನೋಡುವವರ ಮೊಬೈಲ್ ಕಳ್ಳತನ ಮಾಡುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಬರುತ್ತಾ ಇರುತ್ತವೆ. ಆದರೆ ಇದೀಗ ಅದರ ಹಿಂದೆ ದೊಡ್ಡ ಗ್ಯಾಂಗ್ ಕೆಲಸ ಮಾಡುತ್ತಿದೆ ಎನ್ನುವುದು ಉತ್ತರ ಪೊಲೀಸರಿಂದ ತಿಳಿದು ಬಂದಿದೆ. ಇತ್ತೀಚೆಗೆ ಗೋರಖ್‌ಪುರದ ಸರ್ಕಾರಿ ರೈಲ್ವೆ ಪೊಲೀಸರು ಮೊಬೈಲ್ ಫೋನ್ ಕಳ್ಳರ ಗ್ಯಾಂಗ್ ಅನ್ನು ಭೇದಿಸಿದ್ದಾರೆ. ಈ ವೇಳೆ ವಿಚಾರಣೆ ನಡೆಸಿದಾಗ ಅಚ್ಚರಿಯ ಮಾಹಿತಿಗಳು ತಿಳಿದು ಬಂದಿದೆ.


ಜಾರ್ಖಂಡ್ ಮೂಲದ ಕಿಂಗ್‌ಪಿನ್ ಮನೋಜ್ ಮಂಡಲ್ (35) ಮತ್ತು ಅವನ ಇಬ್ಬರು ಪಾಲುದಾರರಾದ ಕರಣ್ ಕುಮಾರ್ (19) ಮತ್ತು ಕರಣ್‌ನ ಸಹೋದರನಾಗಿರುವ 15 ವರ್ಷದ ಅಪ್ರಾಪ್ತ ನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಈ ವೇಳೆ ಆರೋಪಿಗಳಿಂದ 10 ಲಕ್ಷ ಮೌಲ್ಯದ 44 ಪೋನ್ ಗಳನ್ನು ವಶಕ್ಕೆ ಪಡೆದಿದ್ದರು.

ತನಿಖೆಯ ನೇತೃತ್ವ ವಹಿಸಿದ್ದ ಗೋರಖ್‌ಪುರ ಜಿಆರ್‌ಪಿ ಎಸ್‌ಪಿ ಸಂದೀಪ್‌ ಕುಮಾರ್‌ ಮೀನಾ ಅವರ ನೀಡಿರುವ ಮಾಹಿತಿ ಪ್ರಕಾರ ಈ ಗ್ಯಾಂಗ್ ಸದಸ್ಯರಿಗೆ ತಿಂಗಳಿಗೆ ತಲಾ 15,000 ರೂ.ಗಳ ವೇತನವನ್ನು ನೀಡಿದ್ದು, ಜೊತೆಗೆ ಉಚಿತ ಆಹಾರ ಮತ್ತು ವಸತಿ ಭತ್ಯೆಗಳನ್ನು ನೀಡಿದ್ದರು ಎಂದು ಬಹಿರಂಗಪಡಿಸಿದ್ದಾರೆ. ಈ ಗ್ಯಾಂಗ್ ಜನನಿಬಿಡ ಮಾರುಕಟ್ಟೆ ಮತ್ತು ರೈಲು ನಿಲ್ದಾಣಗಳಲ್ಲಿ ಜನರಿಂದ ಮೊಬೈಲ್ ಫೋನ್ ಕದಿಯುವುದರಲ್ಲಿ ಪರಿಣತಿ ಹೊಂದಿತ್ತು. ಕದ್ದ ಮೊಬೈಲ್ ಫೋನ್‌ಗಳನ್ನು ಬಾಂಗ್ಲಾದೇಶ ಮತ್ತು ನೇಪಾಳಕ್ಕೆ ಕಳುಹಿಸಿಕೊಡುತ್ತಿದ್ದರು. ಗ್ಯಾಂಗ್ ಲೀಡರ್ ಮನೋಜ್ ತನ್ನ ಹಳ್ಳಿ ಸಾಹೇಬ್‌ಗಂಜ್‌ನಲ್ಲಿ ಸ್ವಲ್ಪ ಶಿಕ್ಷಣದೊಂದಿಗೆ ಹಣದ ಅಗತ್ಯವಿರುವ ಯುವಕರನ್ನು ತನ್ನ ಗ್ಯಾಂಗ್ ಗೆ ಸೇರಿಸಿಕೊಳ್ಳುತ್ತಿದ್ದ, ಸದಸ್ಯರಿಗೆ ಒಳ್ಳೆಯ ಬಟ್ಟೆಗಳನ್ನು ಕೊಟ್ಟು ರೈಲು ಹಾಗೂ ಬಸ್ ನಿಲ್ದಾಣಗಳಲ್ಲಿ ನಿಲ್ಲುವಂತೆ ಹೇಳುತ್ತಿದ್ದ, ಅಲ್ಲದೆ ಮೊದಲ ಮೂರು ತಿಂಗಳು ಟ್ರೈನಿಂಗ್ ಕೂಡ ನೀಡಲಾಗುತ್ತಿತ್ತು, ಈ ವೇಳೆ ಸಣ್ಣ ಪುಟ್ಟ ಕಳ್ಳತನ ಮಾಡಿಸುತ್ತಿದ್ದ. ಬಳಿಕ ಅವರಿಗೆ ಸಂಬಳ ನೀಡಿ ಕೆಲಸಕ್ಕೆ ಇಟ್ಟುಕೊಳ್ಳುತ್ತಿದ್ದ ಎಂದು ಹೇಳಿದ್ದಾರೆ.

ರೈಲ್ವೆ ನಿಲ್ದಾಣ ಅಥವಾ ಬಸ್ ನಿಲ್ದಾಣದಲ್ಲಿ ಮೊಬೈಲ್ ಕದ್ದ ಬಳಿಕ ಎಸ್ಕೇಪ್ ಆಗಲು ಹೊರಗಡೆ ವಾಹನಗಳನ್ನು ನಿಲ್ಲಿಸಿರುತ್ತಿದ್ದ, ಕದ್ದ ಮಾಲುಗಳನ್ನು ಪಶ್ಚಿಮಬಂಗಾಳದ ಮೂಲಕ ಬಾಂಗ್ಲಾದೇಶಕ್ಕೆ ಹಾಗೂ ಸ್ಮಗ್ಲರ್ ಗಳ ಮೂಲಕ ನೇಪಾಳಕ್ಕೆ ಕಳುಹಿಸಿ ಅಧಿಕ ಲಾಭ ಪಡೆಯುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಗ್ಯಾಂಗ್ ಮತ್ತು ಅವರ ಸದಸ್ಯರ ಬಗ್ಗೆ ಹೆಚ್ಚಿನ ವಿಚಾರಣೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ

Share Information
Continue Reading
Advertisement
Click to comment

Leave a Reply

Your email address will not be published. Required fields are marked *