LATEST NEWS
ರೋಗಿಗಳಿಗೆ ಧನಸಹಾಯ ತಲುಪಿಸದ ವೆನ್ಲಾಕ್ ಆಸ್ಪತ್ರೆ : ವೈದ್ಯಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಜಿ. ಶಂಕರ್
ರೋಗಿಗಳಿಗೆ ಧನಸಹಾಯ ತಲುಪಿಸದ ವೆನ್ಲಾಕ್ ಆಸ್ಪತ್ರೆ : ವೈದ್ಯಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಜಿ. ಶಂಕರ್
ಮಂಗಳೂರು ಅಕ್ಟೋಬರ್ 4: ನಾವು ರೋಗಿಗಳಿಗೆ ನೀಡುವ ಧನಸಹಾಯ ದಯವಿಟ್ಟು ರೋಗಿಗಳಿಗೆ ತಲುಪಿಸಿ, ನಿರ್ಲಕ್ಷ್ಯತೋರಿದರೆ ಆರೋಗ್ಯ ಮಂತ್ರಿಗಳಿದ್ದಲ್ಲಿಗೂ ವಿಷಯ ತೆಗೆದುಕೊಂಡು ಹೋಗಲು ನನಗೆ ಹಿಂಜರಿಕೆ ಇಲ್ಲ ಎಂದು ವೆನ್ಲಾಕ್ ಆಸ್ಪತ್ರೆಯ ವೈದ್ಯಾಧಿಕಾರಿಯನ್ನು ಉದ್ಯಮಿ ಜಿ. ಶಂಕರ್ ತರಾಟೆಗೆ ತೆಗೆದುಕೊಂಡಿದ್ದಾರೆ.
ಇಂದು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ನಡೆದ ಉಡುಪಿ ಮತ್ತು ಮಂಗಳೂರಿನ ಕ್ಯಾನ್ಸರ್, ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ಸುಮಾರು 1000 ರೋಗಿಗಳಿಗೆ 2 ಕೋಟಿ ರೂಪಾಯಿಗಳ ಚೆಕ್ ನ ವಿತರಣಾ ಕಾಯಕ್ರಮದಲ್ಲಿ ಮಾತನಾಡಿದ ಅವರು ಆಸ್ಪತ್ರೆಯ ಸಿಬ್ಬಂದಿಗಳು ಮತ್ತು ವೈದ್ಯಾಧಿಕಾರಿಗಳು ರೋಗಿಗಳಿಗೆ ಸೂಕ್ತವಾದ ವ್ಯವಸ್ಥೆಯನ್ನು ಮಾಡಿಕೊಡಬೇಕು.
ನಾವು ರೋಗಿಗಳಿಗೆ ಸಹಾಯಧನ ನೀಡುವುದನ್ನು ದಯವಿಟ್ಟು ರೋಗಿಗಳಿಗೆ ತಲುಪಿಸುವ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಈ ಹಿಂದೆ ನೀಡಿರುವ ಸಹಾಯಧನನ್ನು ರೋಗಿಗಳಿಗೆ ಸರಿಯಾದ ರೀತಿಯಲ್ಲಿ ತಲುಪಿಸದೇ ನಿರ್ಲಕ್ಷ್ಯ ತೋರಿರುವ ಬಗ್ಗೆ ನನಗೆ ಅಸಮಧಾನವಿದೆ ಎಂದರು. ಆಸ್ಪತ್ರೆಯ ವೈದ್ಯಾಧಿಕಾರಿಗಳು ಸಿಬ್ಬಂದಿಗಳು ರೋಗಿಗಳ ಬಗ್ಗೆ ನಿರ್ಲಕ್ಷ್ಯ ತೋರಿದರೆ ಆರೋಗ್ಯ ಮಂತ್ರಿಗಳಿದ್ದಲ್ಲಿಗೂ ವಿಷಯ ತೆಗೆದು ಕೊಂಡು ಹೋಗಲು ನನಗೆ ಹಿಂಜರಿಕೆ ಇಲ್ಲ ಎಂದು ಆಸ್ಪತ್ರೆಯ ವೈದ್ಯಾಧಿಕಾರಿಯನ್ನು ತರಾಟೆಗೆ ಜಿ ಶಂಕರ್ ತರಾಟೆಗೆ ತೆಗೆದುಕೊಂಡರು.
ಮಾರಕ ಕಾಯಿಲೆ ಕಾನ್ಸರ್ ಗುಣಪಡಿಸುವಂತಹ ಔಷಧಿಗಾಗಿ ಸಂಶೋಧನೆಗಳು ನಡೆಯುತ್ತಲೇ ಇವೆ. ಕ್ಯಾನ್ಸರ್ ಪೀಡಿತರು ಮಾನಸಿಕ ಧೈರ್ಯ ತೆಗೆದುಕೊಂಡರೆ ದೀರ್ಘಾವಧಿ ಜೀವಿಸಲು ಸಾಧ್ಯವಿದೆ ಎಂದು ರೋಗಿಗಳಿಗೆ ಸಾಂತ್ವನ ಹೇಳಿದರು.
ಬಳಿಕ ಕೇಕ್ ಕತ್ತರಿಸುವುದರ ಮೂಲಕ ಜಿ. ಶಂಕರ್ ಅವರ ಹುಟ್ಟುಬ್ಬವನ್ನು ಆಸ್ಪತ್ರೆಯ ಸಿಬ್ಬಂದಿಗಳು ಮತ್ತು ರೋಗಿಗಳೊಂದಿಗೆ ಸರಳವಾಗಿ ಆಚರಿಸಲಾಯಿತು.