LATEST NEWS
ಮಳೆಯಲ್ಲಿ ಕಾದು ಕುಳಿತು ಮುಖ್ಯಮಂತ್ರಿ ಸ್ವಾಗತಿಸಿದ ಮಾಜಿ ಕೇಂದ್ರ ಸಚಿವ ಜನಾರ್ಧನ ಪೂಜಾರಿ

ಮಳೆಯಲ್ಲಿ ಕಾದು ಕುಳಿತು ಮುಖ್ಯಮಂತ್ರಿ ಸ್ವಾಗತಿಸಿದ ಮಾಜಿ ಕೇಂದ್ರ ಸಚಿವ ಜನಾರ್ಧನ ಪೂಜಾರಿ
ಮಂಗಳೂರು ಅಕ್ಟೋಬರ್ 14: ಮಂಗಳೂರು ದಸರಾ 2018ನ್ನು ಉದ್ಘಾಟಿಸಲು ಆಗಮಿಸಿದ ಮುಖ್ಯಮಂತ್ರಿ ಕುಮಾರ ಸ್ವಾಮಿ ಅವರನ್ನು ಮಾಜಿ ಕೇಂದ್ರ ಸಚಿವ ಹಿರಿಯ ಕಾಂಗ್ರೇಸ್ ಮುಖಂಡ ಬಿ. ಜನಾರ್ಧನ ಪೂಜಾರಿ ಸುರಿಯುತ್ತಿರುವ ಭಾರಿ ಮಳೆಯಲ್ಲೂ ಕಾದು ಕುಳಿತು ಸ್ವಾಗತಿಸಿದ ಘಟನೆ ನಡೆದಿದೆ.
ಹಿರಿಯ ಮುಖಂಡ ಜನಾರ್ಧನ ಪೂಜಾರಿ ಅವರು ದೇವಸ್ಥಾನ ಮುಂಭಾಗ ಕುರ್ಚಿ ಹಾಕಿ ಕುಳಿತು ಸಿಎಂ ಅವರ ಆಗಮನಕ್ಕೆ ಕಾದಿದ್ದರು, ಈ ಸಂದರ್ಭದಲ್ಲಿ ಭಾರಿ ಮಳೆ ಸುರಿದರೂ ಲೆಕ್ಕಿಸದೇ ಕುಳಿತಿದ್ದರು, ಜನಾರ್ಧನ ಪೂಜಾರಿ ಕೊಡೆ ಹಿಡಿಯಲು ಬಂದರೂ ಅದನ್ನು ನಿರಾಕರಿಸಿ ಮಳೆಯಲ್ಲೇ ನೆನೆದು ಸಂಪೂರ್ಣ ಒದ್ದೆಯಾಗಿದ್ದರು.

ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಒದ್ದೆ ಬಟ್ಟೆಯಲ್ಲಿ ಜನಾರ್ಧನ ಪೂಜಾರಿ ಅವರು ಸ್ವಾಗತಿಸಿದರು. ದಸರಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ ಕುಮಾರಸ್ವಾಮಿ ಮಂಗಳೂರು ದಸರಾ ಉತ್ಸವದಲ್ಲಿ ಭಾಗವಹಿಸೋದು ನನ್ನ ಜೀವನದ ಅದೃಷ್ಠದ ಕ್ಷಣವಾಗಿದ್ದು, ಜನಾರ್ದನ ಪೂಜಾರಿಯವರು ಹೇಳಿದಾಗ ಅವರ ಮಾತಿಗೆ ಗೌರವ ಕೊಟ್ಟು ಆಗಮಿಸಿದ್ದೇನೆ ಅಲ್ಲದೇ, ಕ್ಷೇತ್ರದ ದೇವರ ಭಕ್ತಿಯಿಂದ ಆಗಮಿಸಿದ ದರ್ಶನ ಮಾಡಿದ್ದೇನೆ.
ಕೆಲವರು ನವರಾತ್ರಿ, ದಸರಾ ಉತ್ಸವಕ್ಕೆ ಅಷ್ಟು ಬೇಕು, ಇಷ್ಟು ಬೇಕು ಎಂದು ಕೇಳುತ್ತಾರೆ. ಮಂಗಳೂರು ದಸರಾವನ್ನು ಯಾವುದೇ ಅನುದಾನ ಪಡೆಯದೇ ನಡೆಸುತ್ತಿರೋದು ಆಶ್ಚರ್ಯಕರ ಎಂದು ಹೇಳಿದ ಸಿಎಂ ಮಂಗಳೂರು ದಸರಾ ವಿಶೇಷವಾಗಿದ್ದು, ಇದು ಜನತಾ ಉತ್ಸವ, ಜನತಾ ದಸರಾವಾಗಿದೆ ಎಂದರು.
ಅಲ್ಲದೆ ನನ್ನನ್ನು ಸ್ವಾಗತಿಸಲು ಖುರ್ಚಿ ಹಾಕಿ ಮಳೆಯಲ್ಲಿ ಕೂತಿದ್ದ ಜನಾರ್ದನ ಪೂಜಾರಿಯವರ ಮೇಲೆ ನನಗೆ ವಿಶೇಷ ಗೌರವವಿದ್ದು, ಈ ಕ್ಷೇತ್ರದ ಮೂಲಕ ಸಮಾಜದಲ್ಲಿ ಬದಲಾವಣೆ ತರಲು ಕೊಡುಗೆ ನೀಡಿದವರು ಪೂಜಾರಿಯವರು ನಾಡು ಕಂಡ ಪ್ರಾಮಾಣಿಕ ರಾಜಕಾರಣಿ ಎಂದರು.