Connect with us

LATEST NEWS

ಜನಾರ್ಧನ ಪೂಜಾರಿ ಬರೆದಿರುವುದು ಆತ್ಮ ಚರಿತ್ರೆಯ ಅಲ್ಲ, ಅದು ಅವರ ಪಾಪದ ಕೊಡ – ಮಧು ಬಂಗಾರಪ್ಪ

ಜನಾರ್ಧನ ಪೂಜಾರಿ ಬರೆದಿರುವುದು ಆತ್ಮ ಚರಿತ್ರೆಯ ಅಲ್ಲ, ಅದು ಅವರ ಪಾಪದ ಕೊಡ – ಮಧು ಬಂಗಾರಪ್ಪ

ಶಿವಮೊಗ್ಗ ಜನವರಿ 28: ನಿನ್ನೆ ತಾನೆ ಬಿಡುಗಡೆಗೊಂಡ ಮಾಜಿ ಕೇಂದ್ರ ಸಚಿವ ಜನಾರ್ಧನ ಪೂಜಾರಿಯವರು ಬರೆದಿರುವ ಆಟೋ ಬಯೋಗ್ರಫಿ ಪುಸ್ತಕ ದ ವಿರುದ್ಧ ಮಾಜಿ ಮುಖ್ಯಮಂತ್ರಿ ದಿ. ಬಂಗಾರಪ್ಪರ ಪುತ್ರ ಮಧು ಬಂಗಾರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪತ್ರಿಕಾಗೋಷ್ಠಿ ನಡೆಸಿದ ಮಧು ಬಂಗಾರಪ್ಪ ಅವರು ತಮ್ಮ ತಂದೆ ಎಸ್. ಬಂಗಾರಪ್ಪರ ಕುರಿತಾಗಿ ಪೂಜಾರಿಯವರು ತೇಜೋವಧೆ ಮಾಡಿದ್ದಾರೆಂದು ಆರೋಪಿಸಿದರು.

ಜನಾರ್ಧನ ಪೂಜಾರಿಯವರು, ತಮ್ಮ ಪುಸ್ತಕದಲ್ಲಿ ಪ್ರಸ್ತಾಪಿಸಿರುವ ಕೆಲವಾರು ಅಂಶಗಳು, ಸುಳ್ಳುಗಳ ಕಂತೆಗಳಾಗಿವೆ. 1980 ರಲ್ಲಿ ಗುಂಡುರಾವ್ ಮುಖ್ಯಮಂತ್ರಿ ಆಗಿದ್ದಂತಹ ಸಂದರ್ಭದಲ್ಲಿ ನಡೆದಿರುವ ಘಟನೆ ಎಂದು ಪ್ರಸ್ತಾಪಿಸಲಾಗಿದೆ. ಆದರೆ, ಅವೆಲ್ಲವೂ ಶುದ್ಧ ಸುಳ್ಳುಗಳಿಂದ ಕೂಡಿದೆ. ಹೀಗಾಗಿ ಅವರ ಪುಸ್ತಕವನ್ನು ಯಾರು ಕೂಡ ಕೊಂಡು ಓದಬಾರದು ಎಂದು ಕರೆ ನೀಡಿದರು.

ಆಟೋ ಬಯೋಗ್ರಫಿ ಎಂಬುದು, ಮತ್ತೊಬ್ಬರಿಗೆ ಮಾದರಿಯಾಗಿರಬೇಕೇ ವಿನಃ, ಮತ್ತೊಬ್ಬರ ತೇಜೋವಧೆ ಮಾಡುವಂತಾಗಿರಬಾರದು. ಈ ಬಗ್ಗೆ ಕನಿಷ್ಟ ಜಾನ ಕೂಡ ಇಲ್ಲದ ಪೂಜಾರಿಯವರಿಂದ ಸಮಾಜಕ್ಕೆ ತಪ್ಪು ಸಂದೇಶ ಹೋಗುತ್ತಿದೆ .ಅದರಲ್ಲೂ, ಇಂದಿರಾಗಾಂಧಿ ಅವರನ್ನು, ಎಸ್. ಬಂಗಾರಪ್ಪನವರು, ಹೊಡೆಯುವುದಕ್ಕೆ ಹೋಗಿದ್ದಾರೆ ಎಂಬುದು ಶುದ್ಧ ಸುಳ್ಳಿನಿಂದ ಕೂಡಿದ್ದಾಗಿದ್ದು, ಇದರಿಂದ ಪೂಜಾರಿಯವರ ಮನಸ್ಥಿತಿ ಹೇಗಿದೆ ಎಂದು ತಿಳಿಯುತ್ತಿದೆ.

ಜನಾರ್ಧನ್ ಪೂಜಾರಿಯವರಿಗೆ, ವಯಸ್ಸಾಗಿದ್ದು, ಅರಳು-ಮರಳು ಇರಬೇಕು. ಇವರಿಗೆ ಬಂಗಾರಪ್ಪ ಅವರನ್ನು ಭ್ರಷ್ಟಾಚಾರಿ ಎಂದು ಕರೆಯುವ ಹಕ್ಕು ಕೊಟ್ಟಿದ್ದು ಯಾರು ಎಂದು ಮಧು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಂಗಾರಪ್ಪನವರು ಮೂರು ಪ್ರಕರಣದಲ್ಲಿ ನ್ಯಾಯಾಲಯದಿಂದ ಖುಲಾಸೆಗೊಂಡಿದ್ದಾರೆ. ಅವರು ಖುಲಾಸೆಗೊಂಡ ಬಳಿಕವೂ ಕೂಡ ಅವರನ್ನು ಭ್ರಷ್ಟಾಚಾರಿ ಎಂದು ಹೇಳಿರುವುದು ನ್ಯಾಯಾಂಗ ನಿಂದನೆಯಾಗಿದೆ. ಜನಾರ್ಧನ ಪೂಜಾರಿ ವಿರುದ್ಧ ಶೀಘ್ರದಲ್ಲೇ ಪ್ರಕರಣ ದಾಖಲಿಸಲಾಗುವುದೆಂದು ಮಧು ಬಂಗಾರಪ್ಪ ಎಚ್ಚರಿಕೆ ನೀಡಿದ್ದಾರೆ.

ಕರಾವಳಿ ಭಾಗದಲ್ಲಿ ಉಂಟಾಗಿರುವ ಕೋಮುಗಲಭೆಗಳನ್ನು ಕಡಿಮೆಗೊಳಿಸವಲ್ಲಿ ಪೂಜಾರಿ ಎಂದಿಗೂ ಪ್ರಯತ್ನಿಸಿಲ್ಲ, ಜನಾರ್ಧನ ಪೂಜಾರಿ ಬರೆದಿರುವುದು ಅವರ ಆತ್ಮ ಚರಿತ್ರೆಯ ಪುಸ್ತಕ ಅಲ್ಲ. ಅದು ಅವರ ಪಾಪದ ಕೊಡ. ಪೂಜಾರಿ ರವರ ಪಾಪದ ಕೊಡದ ಪುಸ್ತಕವನ್ನು ಅವರ ತಲೆ ಮೇಲೆ ಹೂತ್ತು ತಿರುಗಿದ್ದಾರೆ. ಪೂಜಾರಿರವರು ಮಾಡಿದ ತಪ್ಪನ್ನು ತಿದ್ದಿ ಕೊಂಡರೆ ಒಳ್ಳೆಯದು.

ಇಂದಿಗೂ ಬಂಗಾರಪ್ಪನವರನ್ನು ಎಲ್ಲಾ ಪಕ್ಷದವರು ಗೌರವಿಸುತ್ತಾರೆ. ಇಂತಹವರನ್ನು, ಗೆಲ್ಲಿಸಿದ್ದು, ನಾನೆ ಅಂತಾ ಪೂಜಾರಿ ಹೇಳಿಕೊಂಡಿದ್ದಾರೆ. ಇವರ ಯೋಗ್ಯತೆಗೆ ಎಂಪಿ ಕೂಡ ಆಗಿ ಗೆಲ್ಲಲು ಸಾಧ್ಯವಾಗಿಲ್ಲ ಎಂದು ಮಧು ಬಂಗಾರಪ್ಪ, ಜನಾರ್ಧನ ಪೂಜಾರಿ ವಿರುದ್ಧ ಕಿಡಿ ಕಾರಿದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *