DAKSHINA KANNADA
ವೇದಿಕೆ ಏರುವುದೂ ಇನ್ನು ಕಷ್ಟ, ಮುಸ್ಲಿಂ ಹೆಣ್ಣು ಮಕ್ಕಳಿಗೆ ಹೊಸ ಫತ್ವಾ ತಂದ ಸಂಕಷ್ಟ
ವೇದಿಕೆ ಏರುವುದೂ ಇನ್ನು ಕಷ್ಟ, ಮುಸ್ಲಿಂ ಹೆಣ್ಣು ಮಕ್ಕಳಿಗೆ ಹೊಸ ಫತ್ವಾ ತಂದ ಸಂಕಷ್ಟ
ಮಂಗಳೂರು,ಅಕ್ಟೋಬರ್ 21: ಮದ್ರಸಗಳಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳಲ್ಲಿ ಹೆಣ್ಣು ಮಕ್ಕಳು ಭಾಗವಹಿಸಬಾರದು ಎನ್ನುವ ಹೊಸದೊಂದು ಫತ್ವಾವನ್ನು ಇದೀಗ ಸಾಮಾಜಿಕ ಜಾಲತಾಣಗಳ ಮೂಲಕ ಹೊರಡಿಸಲಾಗಿದೆ. ಇಂಡಿಯನ್ ಮುಸ್ಲಿಂ ಎನ್ನುವ ವಾಟ್ಸ್ ಅಪ್ ಗ್ರೂಪ್ ನಲ್ಲಿ ಈ ಫತ್ವಾವನ್ನು ಹೊರಡಿಸಲಾಗಿದೆ. ಮುಸ್ಲಿಂ ಕಾರ್ಯಕ್ರಮಗಳು ಹಾಗೂ ಇತರ ಯಾವುದೇ ಕಾರ್ಯಕ್ರಮಗಳ ವೇದಿಕೆಯಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಭಾಗವಹಿಸಬಾರದು. ಬಹುಮಾನ ಸರ್ಟಿಫಿಕೇಟ್ ಗಳನ್ನು ನೀಡುವ ಸಂದರ್ಭದಲ್ಲಿ ಮುಸ್ಲಿಂ ವಿದ್ಯಾರ್ಥಿಗಳನ್ನು ವೇದಿಕೆ ಕರೆಸಿ ನೀಡಬಾರದು ಎನ್ನುವ ಸಂದೇಶವನ್ನು ಈ ಫತ್ವಾ ಹೊಂದಿದೆ. ಸಮಸ್ತ ಕೇರಳ ಜಂಯ್ಯತುಲ್ ಮುಹಲ್ಲಿಮೀನ್ ಕೇಂದ್ರ ಕೌನ್ಸಿಲ್ ನ ಹೊಸ ಸರ್ಕುಲರ್ ಈ ಆದೇಶವನ್ನು ಹೊರಡಿಸಿದೆ. ಮುಂಬರುವ ರಬೀವುಲ್ ಅವ್ವಲ್ ತಿಂಗಳ ಕಾರ್ಯಕ್ರಮಗಳಲ್ಲಿ ಈ ನಿಯಮ ಅನ್ವಯವಾಗಬೇಕು ನೆನಪಿರಲಿ ಎನ್ನುವ ಎಚ್ಚರಿಕೆಯ ಸಂದೇಶವೂ ಇದರಲ್ಲಿ ಅಡಗಿದೆ. ಇತ್ತೀಚೆಗಷ್ಟೇ ಮಂಗಳೂರಿನ ಮುಸ್ಲಿಂ ಧಾರ್ಮಿಕ ಮುಖಂಡರೊಬ್ಬರು ಉಳ್ಳಾಲ , ಬಿ.ಸಿ.ರೋಡ್ ಹಾಗೂ ಇತರ ಪ್ರದೇಶಗಳಲ್ಲಿ ಕಟ್ಟರ್ ಮುಸ್ಲಿಂ ಮೂಲಭೂತವಾದಿಗಳು ಕಾರ್ಯಚರಿಸುತ್ತಿದ್ದಾರೆ ಎನ್ನುವ ಸ್ಪೋಟಕ ಮಾಹಿತಿ ನೀಡಿದ್ದರು. ಈ ನಡುವೆಯೇ ಇಂಥಹುದೊಂದು ಫತ್ವಾ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದು ಮುಸ್ಲಿಂ ಮುಖಂಡ ನೀಡಿದ ಮಾಹಿತಿಗೆ ಪೂರಕವಾದ ಅಂಶಗಳು ಈ ಫತ್ವಾದಲ್ಲಿ ಅಡಗಿದೆ. ಕೇರಳದ ಬಹುತೇಕ ಮುಸ್ಲಿಂ ಬಾಹುಳ್ಯವಿರುವ ಪ್ರದೇಶಗಳಲ್ಲಿ ಫತ್ವಾದಲ್ಲಿ ಉಲ್ಲೇಖಿಸಲಾದ ಅಂಶಗಳು ಈಗಾಗಲೇ ಜಾರಿಯಾಗಿದ್ದು, ಮುಂದಿನ ದಿನಗಳಲ್ಲಿ ಈ ಕಾನೂನು ಕರಾವಳಿ ಜಿಲ್ಲೆಗಳಲ್ಲೂ ಜಾರಿಗೆ ಬರುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.