Connect with us

LATEST NEWS

ಮನೆಯೇ ಫೈವ್ ಸ್ಟಾರ್ ಹೋಟಲ್ ತಪ್ಪಿಸಿಕೊಳ್ಳಲು ನಿಗೂಢ ಕೋಣೆ – ಉದ್ಯಮಿಗಳಿಗೆ 200 ಕೋಟಿ ಪಂಗನಾಮ

ಮಂಗಳೂರು, ಜುಲೈ 17: ಸಾಲ ಕೊಡುವ ನೆಪದಲ್ಲಿ ಉದ್ಯಮಿಗಳಿಗೆ ನೂರಾರು ಕೋಟಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಮಂಗಳೂರು ನಗರ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಗುರುವಾರ ತಡರಾತ್ರಿ ನಡೆದ ಮಹತ್ವದ ಕಾರ್ಯಾಚರಣೆಯೊಂದರಲ್ಲಿ ಅರೆಸ್ಟ್ ಮಾಡಿದ್ದಾರೆ. ಬಂಧಿತ ಆರೋಪಿಯನ್ನು ಜಪ್ಪಿನಮೊಗರು ನಿವಾಸಿ ರೋಶನ್ ಸಲ್ಡಾನ(45) ಎಂದು ಗುರುತಿಸಲಾಗಿದೆ.


ಈತನನ್ನು ಗುರುವಾರ ರಾತ್ರಿ ಮಂಗಳೂರು ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಮತ್ತು ಎಸಿಪಿ ರವೀಶ್ ನಾಯಕ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಬಂಧಿಸಿದೆ ಎಂದು ತಿಳಿದುಬಂದಿದೆ. ರೋಹನ್ ಸಲ್ಡಾನ ಉದ್ಯಮಿಯೆಂದು ಹೇಳಿಕೊಂಡು ಹೊರರಾಜ್ಯ, ಹೊರಜಿಲ್ಲೆಯ ಶ್ರೀಮಂತ ವ್ಯಕ್ತಿಗಳನ್ನು ಗುರಿಯಾಗಿಸಿ ಜಾಗದ ವ್ಯವಹಾರದ ಜೊತೆಗೆ ಸಾಲ ನೀಡುವುದಾಗಿ ಹೇಳಿ ನಂಬಿಸುತ್ತಿದ್ದ. ಈ ರೀತಿಯಾಗಿ ಆರೋಪಿ ಕೇವಲ 3 ತಿಂಗಳಲ್ಲೇ 45 ಕೋಟಿ ರೂ. ವ್ಯವಹಾರ ಮಾಡಿರುವುದು ಪತ್ತೆಯಾಗಿದೆ. ಕಳೆದ ಅನೇಕ ವರ್ಷಗಳಿಂದ 200 ಕೋಟಿ ರೂ.ಗೂ ಅಧಿಕ ವಂಚನೆ ಮಾಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.


ಆರೋಪಿ ರೋಹನ್ ಸಲ್ಡಾನಾ, ಭೂ ವ್ಯವಹಾರ ಸೇರಿ ಉದ್ಯಮಿಯೆಂದು ಬಿಂಬಿಸಿಕೊಂಡು ಶ್ರೀಮಂತರ ವಿಶ್ವಾಸ ಗಳಿಸುತ್ತಿದ್ದ. ಹೊರರಾಜ್ಯ, ಹೊರ ಜಿಲ್ಲೆಯ ಶ್ರೀಮಂತ ವ್ಯಕ್ತಿಗಳಿಗೆ ಗಾಳ ಹಾಕುತ್ತಿದ್ದ. ಮಂಗಳೂರಿನ ಜಪ್ಪಿನಮೊಗರುವಿನ‌ ಐಷಾರಾಮಿ ಬಂಗಲೆಗೆ ಕರೆದು ವ್ಯವಹಾರ ಮಾಡುತ್ತಿದ್ದ. ಈತನ ಬಂಗಲೆ, ಜೀವನಶೈಲಿಗೆ ಉದ್ಯಮಿಗಳು ಮಾರುಹೋಗಿದ್ದರು. ಬಣ್ಣದ ಮಾತಿಗೆ ಮರುಳಾಗಿ ಹಿಂದು-ಮುಂದು ನೋಡದೆ ಕೋಟ್ಯಂತರ ರೂ ಹಣ ನೀಡಿದ್ದಾರೆ.

ಮೊದಲ ಸುತ್ತಿನ ಮಾತುಕತೆ ಬಳಿಕ ಉದ್ಯಮಿಗಳಿಗೆ ತನ್ನ ವಂಚನೆ ಜಾಲದ ಖೆಡ್ಡಾಕ್ಕೆ ಬೀಳಿಸುತ್ತಿದ್ದ ರೋಹನ್, 50 ಕೋಟಿಯಿಂದ 100 ಕೋಟಿ ರೂ. ವ್ಯವಹಾರ ಅಥವಾ ಅದಕ್ಕಿಂತ ದೊಡ್ಡ ಮೊತ್ತದ ಸಾಲ ನೀಡಲು ಹಣಕ್ಕೆ ಬೇಡಿಕೆ ಇಡುತ್ತಿದ್ದ. ತಾನು ನಿರೀಕ್ಷೆ ಮಾಡಿದಷ್ಟು ಹಣ ವಸೂಲಿಯಾದ ಬಳಿಕ ಉದ್ಯಮಿಗಳಿಗೆ ನಾನಾ ನೆಪ ಹೇಳಿ ಎಸ್ಕೇಪ್ ಆಗುತ್ತಿದ್ದ. ಹೀಗೆ ಕೇವಲ 3 ತಿಂಗಳಲ್ಲೇ 45 ಕೋಟಿ ರೂ ವ್ಯವಹಾರ ನಡೆಸಿರುವುದು ಪತ್ತೆ ಆಗಿದೆ.

ಆರೋಪಿ ರೋಹನ್ ಸಲ್ಡಾನಾನ ಐಷಾರಾಮಿ ಬೆಡ್ ರೂಮ್​​ ಬಳಿ ಹೈಡ್ ಔಟ್ ರೂಮ್ ಇದೆ. ಬೆಡ್ ರೂಮ್​​ ಕಬೋರ್ಡ್ ಒಳಗೆ ಒಂದು ಹಿಡನ್ ಡೋರ್​ ಇದೆ. ಅದನ್ನು ತಳ್ಳಿದ್ದರೆ ವಿಶಾಲವಾದ ರೂಮ್​ ಇದೆ. ಪೊಲೀಸರು ಅಥವಾ ಮೋಸ ಹೋದವರು ಬಂದರೆ ಇದೇ ರೂಮ್​ನಲ್ಲಿ ಆತ ಅಡಗಿಕೊಳ್ಳುತ್ತಿದ್ದ. ಇನ್ನು ರೋಹನ್ ಸಲ್ಡಾನಾ ಮನೆ ನೋಡಿ ಪೊಲೀಸರೇ ಶಾಕ್ ಆಗಿದ್ದಾರೆ. ಏಕೆಂದರೆ ಮನೆ ತುಂಬಾ ವಿದೇಶಿ ಮದ್ಯಗಳ ರಾಶಿಯೇ ಇದೆ. ಕೋಟಿ ಕೋಟಿ ಮೌಲ್ಯದ ವಿದೇಶಿ ಮದ್ಯ ಮನೆಯಲ್ಲಿ ಪತ್ತೆ ಆಗಿದೆ. ಬಂದ ಅತಿಥಿಗಳಿಗೆ ರಾಜಾತಿಥ್ಯ ಸುಗುತ್ತಿತ್ತು. ಮನೆಯ ಬಾರ್ ಕೌಂಟರ್ ಐಷಾರಾಮಿ ಪಬ್​​ನ್ನು ಮೀರಿಸುವಂತಿದೆ.

Share Information
Continue Reading
Advertisement
1 Comment

1 Comment

    Leave a Reply

    Your email address will not be published. Required fields are marked *