Connect with us

DAKSHINA KANNADA

ದ.ಕ.ದಲ್ಲಿ ಶಾಶ್ವತ ಮರಳು ನೀತಿ ರೂಪಿಸಿ ಮತ್ತು ಅಕ್ರಮ ಮರಳುಗಾರಿಕೆ ಯನ್ನು ಕೂಡಲೇ ನಿಲ್ಲಿಸಿ : ಡಿಸಿಗೆ SDPI ಜಿಲ್ಲಾ ನಿಯೋಗ ಮನವಿ..!

ಮಂಗಳೂರು:  ರಾಜ್ಯದಲ್ಲಿ ಹೊಸ ಸರಕಾರ ಅಸ್ಥಿತ್ವಕ್ಕೆ ಬಂದ ಬಳಿಕ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ರಾಜಕೀಯ ಹಗ್ಗಜಗ್ಗಾಟದಿಂದ ಅದಿಕ್ರತ ಮರಳುಗಾರಿಕೆ ಯನ್ನು ನಿಲ್ಲಿಸಿದ ಪರಿಣಾಮ ಸಾರ್ವಜನಿಕರಿಗೆ ಮತ್ತು ಸಾರ್ವಜನಿಕ ನಿರ್ಮಾಣ ಕೆಲಸಗಳಿಗೆ ಮರಳು ದೊರೆಯದೆ ಜಿಲ್ಲೆಯಲ್ಲಿ ಗಂಭೀರ ಸ್ವರೂಪದ ಮರಳಿನ ಕ್ರತಕ ಅಭಾವ ತಲೆದೋರಿದೆ.

ಸರಕಾರ ಮತ್ತು ಜಿಲ್ಲಾಡಳಿತ ಈ ಬಗ್ಗೆ ಯಾವುದೇ ಪರ್ಯಾಯ ವ್ಯವಸ್ಥೆ ಮಾಡದೆ ಮೌನವಾಗಿ ಕುಳಿತಿದೆ ಇದನ್ನೇ ಬಂಡವಾಳ ಮಾಡಿಕೊಂಡ ರಾಜಕಾರಣಿಗಳ ಮತ್ತು ಜನಪ್ರತಿನಿಧಿಗಳ ಚೇಲಾಗಳು ಜಿಲ್ಲಾದ್ಯಂತ ಅಕ್ರಮವಾಗಿ ರಾತ್ರಿ ಹಗಲೆನ್ನದೆ ರಾಜಾರೋಷವಾಗಿ ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದಾರೆ ಜಿಲ್ಲಾಡಳಿತ ಮತ್ತು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಕಳೆದ ಆರೇಳು ತಿಂಗಳುಗಳಿಂದ ಈ ಬಗ್ಗೆ ಯಾವುದೇ ರೀತಿಯ ಕ್ರಮ ಕೈಗೊಳ್ಳುತ್ತಿಲ್ಲ ಒಂದು ವೇಳೆ ಸಾರ್ವಜನಿಕರು ದೂರು ಕೊಟ್ಟರೆ ಚಿಕ್ಕ ಪುಟ್ಟ ಮರಳು ಗಾರಿಕೆ ನಡೆಸುವ ಒಂದೆರಡು ದೋಣಿಗಳನ್ನು ಅಥವಾ ವಾಹನವನ್ನು ವಶಪಡಿಸಿಕೊಂಡು ಅಧಿಕಾರಿಗಳು ಪೌರುಷ ಮೆರೆಯುತ್ತಿದ್ದಾರೆ ವಿನಃ ದೊಡ್ಡ ದೊಡ್ಡ ಮರಳು ಗಣಿಗಾರಿಕೆ ನಡೆಸುವ ಮಾಫಿಯಾ ಗಳ ಮೇಲೆ ಯಾವುದೇ ರೀತಿಯ ಕ್ರಮ ನಡೆಯುತ್ತಿಲ್ಲ ಈ ಬಗ್ಗೆ ಜಿಲ್ಲಾಡಳಿತ ಕೂಡಲೇ ಸೂಕ್ತ ನಿಲುವು ಕೈಗೊಳ್ಳಬೇಕು ಎಂದು SDPI ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಅನ್ವರ್ ಸಾದತ್ ಬಜತ್ತೂರು ನೇತೃತ್ವದ ನಿಯೋಗ ಅಪರ ಜಿಲ್ಲಾಧಿಕಾರಿ ಸಂತೋಷ್ ಕುಮಾರ್ ಜಿ ರವರನ್ನು ಇಂದು ಬೇಟಿಯಾಗಿ ಒತ್ತಾಯಿಸಿದೆ

ಉಳ್ಳಾಲ ತಾಲೂಕಿನ ವಿವಿಧ ಕಡೆಗಳಲ್ಲಿ ಶಾಸಕರ ಚೇಲಾಗಳು ಅಕ್ರಮವಾಗಿ ದಿನನಿತ್ಯ ನೂರಾರು ಲಾರಿಗಳಲ್ಲಿ ಮರಳುಗಳನ್ನು ಯಾರದೇ ಭಯವಿಲ್ಲದೆ ಸಾಗಿಸುತ್ತಿದ್ದರರೂ ಪೋಲಿಸ್ ಇಲಾಖೆ ಮತ್ತು ಗಣಿ ಇಲಾಖೆ ಅಧಿಕಾರಿಗಳು ಪ್ರಭಾವಿಗಳ ಒತ್ತಡಕ್ಕೆ ಮಣಿದು ಕಣ್ಣು ಮುಚ್ಚಿ ಕುಳಿತಿದದ್ದಾ ರೆ . ಜಿಲ್ಲೆಯಲ್ಲಿ ಮರಳುಗಾರಿಕೆ ನಡೆಸಲು ಸದ್ಯ ಯಾವುದೇ ಅನುಮತಿ ಇಲ್ಲದಿರುವಾಗ ಇಷ್ಟೊಂದು ಪ್ರಮಾಣದಲ್ಲಿ ಅಕ್ರಮವಾಗಿ ಮರಳುಗಾರಿಕೆ ನಡೆಸಿ ಸರಕಾರಕ್ಕೆ ಕೋಟ್ಯಂತರ ರೂಪಾಯಿಗಳ ರಾಜಧನ ವನ್ನು ವಂಚಿಸಿ ದಂದೆ ನಡೆಸುತ್ತಿದ್ದಾರೆ ಇದರಿಂದ ಸರಕಾರದ ಬೊಕ್ಕಸಕ್ಕೆ ದೊಡ್ಡ ಪ್ರಮಾಣದ ನಷ್ಟ ಸಂಭವಿಸುವುದು ಮಾತ್ರವಲ್ಲದೆ ಮರಳು ಮಾಫಿಯಾ ಜಿಲ್ಲೆಯಲ್ಲಿ ಪ್ರಬಲವಾಗಿ ತಲೆಯೆತ್ತಲು ಅಧಿಕಾರಿಗಳು ಕಾರಣ ಕರ್ತರಾಗುತ್ತಿದ್ದಾರೆ.

ಆದ್ದರಿಂದ ಜಿಲ್ಲಾಡಳಿತ ಕೂಡಲೇ ಮಧ್ಯೆ ಪ್ರವೇಶಿಸಿ ಪ್ರಭಾವಿಗಳ ಯಾವುದೇ ಒತ್ತಡಗಳಿಗೆ ಮಣಿಯದೆ ಅಕ್ರಮ ಮರಳುಗಾರಿಕೆ ನಡೆಸುವುದನ್ನು ತಡೆ ಹಿಡಿಯಬೇಕು . ಹಿಂದಿನ ಜಿಲ್ಲಾಧಿಕಾರಿ ಶಶಿಕಾಂತ್ ಸೆಂತಿಲ್ ರವರು ರಚಿಸಿದ ರೀತಿಯಲ್ಲಿ ಸಮಗ್ರವಾದ ಶಾಶ್ವತ ಮರಳು ನೀತಿ ರಚಿಸಿ ಜನಸಾಮಾನ್ಯರಿಗೆ ಮಿತ ದರದಲ್ಲಿ ಮುಕ್ತವಾಗಿ ಮರಳು ಸಿಗುವಂತೆ ಕ್ರಮ ಕೈಗೊಳ್ಳಬೇಕು ಈ ಮೂಲಕ ಸರಕಾರಕ್ಕೆ ಆದಾಯ ಸಿಗುವುದು ಮಾತ್ರವಲ್ಲದೆ ರಾಜಕಾರಣಿಗಳ ಚೇಲಾಗಳು ನಡೆಸುವ ಅಕ್ರಮ ದಂದೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾದ್ಯವಿದೆ ಇಲ್ಲದಿದ್ದರೆ ಜಿಲ್ಲಾದ್ಯಂತ SDPI ತೀವ್ರ ಹೋರಾಟ ಕೈಗೊಳ್ಳಲಿದೆ ಎಂದು ಈ ಸಂದರ್ಭದಲ್ಲಿ ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದರು

ಜಿಲ್ಲಾಧಿಕಾರಿಗಳನ್ನು ಬೇಟಿಯಾದ ನಿಯೋಗದಲ್ಲಿ SDPI ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶ್ರಫ್ ಅಡ್ಡೂರು , ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಉಸ್ಮಾನ್ ಗುರುಪುರ , ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಅಕ್ಬರ್ ರಾಝಾ ಉಪಸ್ಥಿತರಿದ್ದರು

Share Information
Continue Reading
Advertisement
Click to comment

Leave a Reply

Your email address will not be published. Required fields are marked *