Connect with us

LATEST NEWS

ಕಾರ್ಕಳ ಶ್ರೀ ವೆಂಕಟರಮಣ ದೇವಸ್ಥಾನಕ್ಕೆ ಪುರಸಭೆ ನೋಟಿಸ್ ಖಂಡನೀಯ, ಪ್ರತಿಭಟನೆಯ ಎಚ್ಚರಿಕೆ ನೀಡಿದ ವಿವೇಕ್ ಶೆಣೈ

ಕಾರ್ಕಳ :  ಪಡುತಿರುಪತಿ ಎಂದು ಖ್ಯಾತಿ ಪಡೆದಿರುವ ಕಾರ್ಕಳ ಶ್ರೀ ವೆಂಕಟರಮಣ ದೇವಸ್ಥಾನಕ್ಕೆ ಕಾರ್ಕಳ ಪುರಸಭಾ ಆಡಳಿತವು ನೋಟಿಸ್ ನೀಡಿರುವ ಕ್ರಮ ಖಂಡನೀಯ, ನೀಡಿದ ನೋಟೀಸ್ ತಕ್ಷಣ ಹಿಂಪಡೆಯಬೇಕು ಇಲ್ಲವಾದರೆ ಹೋರಾಟ ಅನಿವಾರ್ಯ ಎಂದು ಮಾಜಿ ಪುರಸಭಾ ಸದಸ್ಯ ವಿವೇಕಾನಂದ ಶೆಣೈ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶ್ರೀ ವೆಂಕಟರಮಣ ದೇವರ ಉತ್ಸವಕ್ಕೆ ರಥಬೀದಿಯಲ್ಲಿ ಗುರ್ಜಿ ನಿರ್ಮಾಣ ಮಾಡುವುದು ತಲ ತಲಾಂತರಗಳಿಂದ ನಡೆದು ಬಂದಿದೆ, ಉತ್ಸವದ ನಂತರ ಗುರ್ಜಿ ತೆಗೆದು ಗುರ್ಜಿಯ ಹೊಂಡವನ್ನು ಪ್ರತೀ ವರ್ಷವೂ ತಕ್ಷಣ ಮುಚ್ಚುವ ಕೆಲಸ ಮಾಡಲಾಗುತ್ತದೆ, ಈ ವರ್ಷವೂ ಅದೇ ಆಗಿದೆ ಇದೆಲ್ಲವೂ ಸರ್ವೆ ಸಾಮಾನ್ಯವಾದರೂ ಏನೂ ತಿಳಿಯದಂತೆ ಪುರಸಭಾ ಆಡಳಿತ ದೇವಸ್ಥಾನಕ್ಕೆ ನೋಟೀಸು ನೀಡಿರುವುದು ಆಶ್ಚರ್ಯ ತಂದಿದೆ ನೋಟೀಸು ನೀಡಿದ ಅಧಿಕಾರಿಯ ವಿರುದ್ಧ ಕ್ರಮ ಜರುಗಿಸಿ ತಕ್ಷಣ ವರ್ಗಾವಣೆ ಮಾಡಬೇಕು, ನೀಡಿದ ನೋಟೀಸ್ ಹಿಂಪಡೆದು ದೇವರಲ್ಲಿ ಕ್ಷಮೆಯಾಚಿಸಬೇಕು ಇಲ್ಲವಾದರೆ ಹೋರಾಟ ಅನಿವಾರ್ಯವಾದಿತು ಎಂದು ವಿವೇಕ್ ಶೆಣೈ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪುರಸಭೆಗೆ ಬರೆದ ಬಹಿರಂಗ ಪತ್ರದ ಸಾರಾಂಶ:

‘ಶ್ರೀ ಶ್ರೀನಿವಾಸ ದೇವರನ್ನು ನಾವು ಸಾಕ್ಷಾತ್ ಭೂ ವೈಕುಂಠದ ತಿರುಪತಿಯ ದೇವರೆಂದು ಪೂಜಿಸುತ್ತಾ ಬಂದಿದ್ದೇವೆ ಈ ಪಡುತ್ತಿರೋಪತಿ ಖ್ಯಾತಿಯ ಚಪರ ಶ್ರೀನಿವಾಸ ಶ್ರೀನಿವಾಸ ದೇವರ ಲಕ್ಷ ದೀಪೋತ್ಸವದ ಸಮಯದಲ್ಲಿ ಏಳು ಗುರ್ಜಿಗಳನ್ನು ಕುರಿಂದ ಗಳನ್ನು ಹಾಕಲಾಗುತ್ತದೆ ಇದು ಮಣ್ಣುಗೋಪುರದಿಂದ ವೆಂಕಟರಮಣ ದೇವಸ್ಥಾನದವರೆಗೆ ಇರುತ್ತದೆ ಪ್ರತೀ ಒಂದು ಗುರ್ಜಿಗಳಿಗೆ ನಾಲ್ಕು ಕಂಬಗಳನ್ನು ಹಾಕಲಾಗುತ್ತದೆ ಇದು ಎಷ್ಟೋ ವರ್ಷಗಳ ಹಿಂದೆಯಿಂದ ಬಂದ ಸಂಪ್ರದಾಯವಿದು ಶ್ರೀ ಶ್ರೀನಿವಾಸ ದೇವರು ವೆಂಕಟರಮಣ ದೇವರು ವನಭೋಜನದ ನಂತರ ಮಣ್ಣ ಗೋಪುರದಲ್ಲಿ ಆಸೀನರಾಗಿ ಭಜಕರ ಇಚ್ಛೆಯನ್ನು ಸ್ವೀಕರಿಸಿ ಪ್ರಾರ್ಥನೆಯನ್ನು ಸ್ವೀಕರಿಸಿ ಅವರಿಗೆ ಇಷ್ಟಾರ್ಥಗಳನ್ನು ನೀಡಿ ಈ ಏಳು ಕುರಿಂದಗಳಲ್ಲಿ ಕುಳಿತು ಆರತಿಯಾಗಿ ಪ್ರಸಾದವನ್ನು ನೀಡಿ ಪೂಜಿಸುತ್ತಾ ಬಂದಿದ್ದೇವೆ ಈ ರಥಬೀದಿಯು ದೇವಸ್ಥಾನಕ್ಕೆ ಸಂಬಂಧಪಟ್ಟದಾಗಿತ್ತು ಕೆಲ ವರ್ಷಗಳ ಹಿಂದೆ ಕಾರ್ಕಳ ಪುರಸಭೆಗೆ ಒಳಪಟ್ಟಿತ್ತು. ವಿಶೇಷವೇನೆಂದರೆ ಪಡು ತಿರುಪತಿ ಎಂಬುದು ವಿಶ್ವ ವಿಖ್ಯಾತ ಇಲ್ಲಿನ ಚಪ್ಪರ ಶ್ರೀನಿವಾಸ ಮತ್ತು ಶ್ರೀ ವೆಂಕಟರಮಣ ದೇವರ ಲೀಲೆ ಅಪಾರವಿದೆ ಹೀಗೆ ಲಕ್ಷ ದೀಪೋತ್ಸವದ ಸಂದರ್ಭದಲ್ಲಿ ಹಾಕುವ ನಾಲ್ಕು ಗುರ್ಜಿಗಳ ಕಂಬವು ಪುರಸಭೆಯ ರಸ್ತೆಯ ಗುಂಡಿಗಳಿಗೆ ಕಾರಣವಾಗುತ್ತದೆ ಎಂಬುದು ಪುರಸಭೆ ಮುಖ್ಯ ಅಧಿಕಾರಿಗಳ ಅಸಹ್ಯವಾದ ಮಾತುಗಳು ಈ ದೇವರ ಲೀಲೆಯು ಅವರಿಗೆ ಇನ್ನೂ ತಿಳಿಯಲು ಸಾಕಷ್ಟಿದೆ ಆದರೆ ಈ ನಿಮ್ಮ ಪತ್ರವೂ ಅಸಹ್ಯವಾದುದು ನಿಮಗೆ ನಿಮ್ಮ ಪುರಸಭೆಯ ಮರ್ಯಾದೆಯ ಪ್ರಶ್ನೆ ಆಗಿರುತ್ತದೆ.

ವಿಶೇಷವೇನೆಂದರೆ ಇವತ್ತು ನೀವು ಕಾರ್ಕಳ ಶ್ರೀದೇವರ ರಥಬೀದಿಯು ದೀಪೋತ್ಸವದ ಸಂದರ್ಭದಲ್ಲಿ ಕಂಬದಿಂದ ರಸ್ತೆಗೆ ಗುಂಡಿಗಳು ಬೀಳುತ್ತದೆ ಎಂದು ಹೇಳಿದಿರಿ ಆದರೆ ವಿಶೇಷವೇನೆಂದರೆ ಇದೇ ರಸ್ತೆಯಲ್ಲಿ ಒಳಚರಂಡಿಯ ಗುಂಡಿಗಳು ಮುಚ್ಚಳಗಳ ಗುಂಡಿಗಳು ಎಷ್ಟೋ ಮಳೆ ನೀರಿನ ಚರಂಡಿಗಳು ಇನ್ನೆಷ್ಟು ಗುಂಡಿಗಳು ನಿಮ್ಮ ಕಣ್ಣಿಗೆ ಕಾಣುವುದಿಲ್ಲವೇ ಇಡೀ ಕಾರ್ಕಳದಲ್ಲಿ ಎಷ್ಟೋ ರಸ್ತೆಗಳು ಹದಗಟ್ಟಿವೆ ಎಷ್ಟೋ ಜನರು ಆ ರಸ್ತೆಗಳಲ್ಲಿ ಬಿದ್ದು ಪೆಟ್ಟು ಮಾಡಿಕೊಳ್ಳುತ್ತಿದ್ದಾರೆ ಉದಾಹರಣೆಗೆ ಕಾರ್ಕಳ ಅನಂತಶಯನದಿಂದ ಬಂಡಿ ಮಠದವರೆಗೆ ಎಷ್ಟೋ ಗುಂಡಿಗಳಿವೆ ಇದು ನಿಮ್ಮ ಕಣ್ಣಿಗೆ ಕಾಣುವುದಿಲ್ಲವೇ ಬೇಡ ಕಾರ್ಕಳ ರಥ ಬೀದಿಯಲ್ಲಿ ನೀವು ಎಷ್ಟು ತೆರಿಗೆಯನ್ನು ಪಡೆಯುತ್ತೀರಿ ಮತ್ತು ಕಾರ್ಕಳ ರಥಬೀಡಿಯನ್ನು ನೀವು ಎಷ್ಟು ಅಭಿವೃದ್ಧಿಯನ್ನು ಕಾಮಗಾರಿಯನ್ನು ಮಾಡಿದ್ದೀರಿ ಉದಾಹರಣೆಗೆ ಕಾರ್ಕಳ ರಥ ಬೀದಿಯ ಒಳಜರಂಗಿಯ ಕೆಲಸವು ಇಡೀ ರಾಜ್ಯಕ್ಕೆ ಗೊತ್ತಿದೆ.
ಕಾರ್ಕಳ ರಥಬೀದಿಯಲ್ಲಿ ಸರಿಯಾಗಿ ಒಂದು ಮಳೆ ನೀರು ಹೋಗಲು ಚರಂಡಿ ಇಲ್ಲ ಇದು ನಿಮಗೆ ಕಾಣಿಸುವುದಿಲ್ಲವೇ ಇನ್ನೊಂದು ವಿಶೇಷವೇನೆಂದರೆ ಸನಾತನ ಹಿಂದೂ ಧರ್ಮದವರು ಏನು ಉತ್ಸವ ಹಬ್ಬದ ಸಂದರ್ಭದಲ್ಲಿ ಏನು ಮಾಡಿದರು ನಿಮ್ಮ ಕಣ್ಣಿಗೆ ತಪ್ಪೇ ಆದರೆ ಇದೇ ಶನಿವಾರದಂದು ಅನ್ಯಮತಿಯರು ಶ್ರೀದೇವರ ದೇವಸ್ಥಾನದ ಹತ್ತಿರ ಮಾರ್ಗದಲ್ಲಿ ಮಾರ್ಗ ಮಧ್ಯದಲ್ಲಿ ತರಕಾರಿಗಳನ್ನು ಇಟ್ಟು ಫಲಗಳನ್ನು ಹಣ್ಣು ಹಂಪಲುಗಳನ್ನು ಇಟ್ಟು ವ್ಯಾಪಾರವನ್ನು ಮಾಡಬಹುದೇ ಈ ಸಮಯದಲ್ಲಿ ರಸ್ತೆಯಲ್ಲಿ ವಾಹನದಟ್ಟಣೆ ಆಗುವುದಿಲ್ಲವೇ, ಇದು ನಿಮಗೆ ನಿಮ್ಮ ಕಣ್ಣಿಗೆ ಕಾಣುವುದಿಲ್ಲವೇ ಪ್ರತಿವರ್ಷ ಶ್ರೀದೇವರ ರಥೋತ್ಸವಕ್ಕೆ ಮತ್ತು ಲಕ್ಷದೀಪೋತ್ಸವಕ್ಕೆ ಎಷ್ಟೋ ಜನರು ರಥಬೀದಿಯ ಎರಡು ಬದಿಗಳಲ್ಲಿ ಅಂಗಡಿ ಗಳನ್ನು ಇಟ್ಟು ವ್ಯಾಪಾರವನ್ನು ಮಾಡುತ್ತಾ ಬಂದಿರುತ್ತಾರೆ.ಇದರಿಂದ ನೀವು ಎಷ್ಟು ಆ ಅಂಗಡಿ ಜನರ ತೆರಿಗೆಯನ್ನು ಏನು ಮಾಡಿದ್ದೀರಿ. ಇಡೀ ಕಾರ್ಕಳದಲ್ಲಿ ಒಂದೇ ಒಂದು ಸರಿಯಾಗಿ ಅಭಿವೃದ್ಧಿಯ ಮಾತು ಕಾರ್ಕಳ ಪುರಸಭೆಯಿಂದ ಇಲ್ಲ ಇದು ಇಡೀ ಊರಿನವರಿಗೆ ಪರವೂರಿನವರಿಗೆ ತಿಳಿದ ವಿಷಯ ಅದರ ಮೇಲು ಈ ರೀತಿಯ ಅಸಹ್ಯವಾದ ಹೀನವಾದ ಪತ್ರವನ್ನು ನೀವು ಶ್ರೀದೇವರ ರಥಬೀದಿಯ ಬಗ್ಗೆ ಬರೆದಿರುವಿರಿ ಇದು ನಿಮಗೆ ಅತಿ ನಾಚಿಕೆಗೇಡಿನ ಪ್ರಶ್ನೆಯಾಗಿದೆ ಆದಷ್ಟು ಬೇಗ ಈ ಪತ್ರವನ್ನು ಹಿಂಪಡಿದು ದೇವರಲ್ಲಿ ಹಾಗೂ ಕಾರ್ಕಳ ರಥಬೀದಿಯ ಶ್ರೀದೇವರ ಭಕ್ತರಲ್ಲಿ ಭಜಕರಲ್ಲಿ ಇದೇ ರೀತಿ ಕಾರ್ಕಳ ಪುರಸಭೆ ಪತ್ರದಲ್ಲಿ ಕ್ಷಮೆಯನ್ನು ಯಾಚಿಸಿ ಇಲ್ಲದಿದ್ದರೆ ಇಡೀ ಕಾರ್ಕಳದ ಜನರು ಪ್ರತಿಭಟನೆ ಮಾಡಬೇಕಾಗುತ್ತದೆ. ಇದು ನಿಮಗೆ ಎಚ್ಚರಿಕೆಯ ಗಂಟೆಯಾಗಿದೆಇವತ್ತು ನಿಮಗೆ ಗುರೂಜಿಯ ನಾಲ್ಕು ಕಂಬಗಳಿಂದ ರಸ್ತೆಗೆ ಗುಂಡಿ ಬೀಳುತ್ತಿದೆ ಎಂದು ಹೇಳಿದಿರಿ ಅದೇ ಪ್ರತಿ ವರ್ಷ ಆರು ತಿಂಗಳು ಶ್ರೀದೇವರ ನಿತ್ಯ ಉತ್ಸವವು ಪ್ರತಿನಿತ್ಯವೂ ನಡೆಯುತ್ತದೆ ಈ ದಾರಿಯಲ್ಲಿ ರಥಬೀದಿಯಲ್ಲಿ ನಿಮ್ಮ ಒಳ ಚರಂಡಿಯಯ ಕಾಮಗಾರಿ ಎಷ್ಟು ಮಟ್ಟಿಗೆ ಉತ್ತಮವಾಗಿದೆ ಎಂದು ನಿಮಗೆ ಮಾತ್ರವಲ್ಲದೆ ಇಡೀ ದೇಶಕ್ಕೆ ರಾಜ್ಯಕ್ಕೆ ಪರವೂರಿಗೆ ಹಾಗೂ ಕಾರ್ಕಳದ ಜನತೆಗೆ ತಿಳಿದಿದೆ ಸರಿಯಾಗಿ ಕಾರ್ಕಳ ರಥ ಬೀದಿ ಎಷ್ಟರಮಟ್ಟಿಗೆ ಅಭಿವೃದ್ಧಿ ಆಗಿದೆ ಎಂದು ಎಲ್ಲರಿಗೂ ತಿಳಿದ ವಿಷಯ ಸರಿಯಾಗಿ ಒಂದು ರಸ್ತೆ ಇಲ್ಲ ಅವಳ ಚರಂಡಿಯ ವ್ಯವಸ್ಥೆಯು ಅವ್ಯವಸ್ಥೆ ಮಳೆ ನೀರು ಹೋಗಲು ಚರಂಡಿ ಇಲ್ಲ ವಿದ್ಯುತ್ ಕಂಬಗಳಲ್ಲಿ ವಿದ್ಯುತ್ ದೀಪವಿಲ್ಲ ಕಾರ್ಕಳದ ಸುತ್ತಮುತ್ತಲಿನ ಎಷ್ಟು ಓಣಿಗಳಲ್ಲಿ ಬೀದಿಗಳಲ್ಲಿ ವಿದ್ಯುತ್ ಕಂಬಗಳಲ್ಲಿ ವಿದ್ಯುತ್ ದೀಪ ಉರಿಯದ ಎಷ್ಟೋ ದೀಪಗಳು ಒಳಚರಂಡಿಯ ನೀರು ರಸ್ತೆಯ ಬೀದಿಗಳಲ್ಲಿ ಹರಿದು ಹೋಗುತ್ತದೆ ಇದು ನಿಮ್ಮ ಕಣ್ಣಿಗೆ ಕಾಣುವುದಿಲ್ಲ ಮತ್ತೆ ಪುರಸಭೆಯ ನೀರು ಮನೆ ಮನೆಗೆ ಹೋಗುವ ನೀರು ಅದು ರಾಮಸಮುದ್ರದಿಂದ ಹೋಗುವ ನೀರು ಆ ರಾಮಸಮುದ್ರದ ನೀರು ಅಲ್ಲಿರುವ ಕೈಗಾರಿಕೆಯ ಮತ್ತು ಎಎಂ ಇದರ ಮತ್ತು ಎಎಂಎಫ್ ಇದರ ಸಾಕುವ ನಾಯಿಯ ಎಲ್ಲಾ ಮಲಿನ ನೀರುಗಳನ್ನು ನೀವು ಆ ರಾಮಸಮುದ್ರಕ್ಕೆ ಬಿಡುತ್ತಿದ್ದೀರಿ ಇದೇ ನೀರನ್ನು ನೀವು ಕಾರ್ಕಳದ ಜನತೆಗೆ ಪುರಸಭೆಯ ನೀರನ್ನು ಬಿಡುತ್ತೀರಿ ಇಂತಹ ನೀಚ ಅವ್ಯವಸ್ಥೆಯ ಅಭಿವೃದ್ಧಿಯ ಕಾರ್ಕಳ ಪುರಸಭೆಗೆ ಕಾರ್ಕಳದ ಜನತೆಯ ದಿಕ್ಕಾರಹಾಗೆಯೇ ಎಲ್ಲಿ ನೋಡಿದರೂ ಮಳೆ ನೀರು ಹೋಗಲು ಚರಂಡಿ ಇಲ್ಲ ಇಂತಹ ನೀಚ ಕಾರ್ಕಳ ಪುರಸಭೆಗೆ ಧಿಕ್ಕಾರ.. ಇನ್ನೊಂದು ನೆನಪಿನಲ್ಲಿರಲಿ ನಿಮಗೆ ಈ ರಥ ಬೀದಿಯು ಆ ಶ್ರೀನಿವಾಸನ ಶ್ರೀ ವೆಂಕಟರಮಣನ ರಥಬೀದಿಯಾಗಿದೆ. ಅವನ ನಿತ್ಯೋತ್ಸವದ ಬೀದಿಯಾಗಿದೆ. ಈ ರಥಬೀದಿಯನ್ನು ಅಭಿವೃದ್ಧಿ ಮಾಡಿ ಅಲ್ಲದೆ ಇಂತಹ ನೀಚ ಕೆಲಸಕ್ಕೆ ಕೈ ಹಾಕಬೇಡಿ ಅಭಿವೃದ್ಧಿಯನ್ನು ಮಾಡಿ ಒಳ್ಳೆಯ ಹೆಸರನ್ನು ಪಡೆಯಿರಿ. ಇಂತಹ ನೀಚ  ಮರ್ಯಾದೆ ಇಲ್ಲದ ಕೆಲಸಗಳನ್ನು ಮಾಡಲು ಹೋಗದಿರಿ ಕೊನೆಯದಾಗಿ ಆದಷ್ಟು ಬೇಗ ಇದೇ ರೀತಿಯ ಕಾರ್ಕಳ ಪುರಸಭೆಯ ಪತ್ರದಲ್ಲಿ ಅಧಿಕಾರಿಗಳು ಕ್ಷಮೆಯನ್ನು ಕೋರಿ , ಶ್ರೀ ದೇವರಲ್ಲಿಯೂ, ಭಜಕರಲ್ಲಿಯೂ ತಪ್ಪನ್ನು ಕೋರಿ ಇಲ್ಲವಾದಲ್ಲಿ ದೊಡ್ಡ ಮಟ್ಟದ ಪ್ರತಿಭಟನೆ ಆಗುವುದರಲ್ಲಿ ಹೆಚ್ಚು ಸಮಯವಿಲ್ಲ ‘……

Share Information
Continue Reading
Advertisement
Click to comment

Leave a Reply

Your email address will not be published. Required fields are marked *