Connect with us

DAKSHINA KANNADA

ಶಾಸಕ ಅಶೋಕ್ ರೈ ಗೆ ಮಾಜಿ ಶಾಸಕ ಸಂಜೀವ ಮಠಂದೂರು ಕೌಂಟರ್

ಪುತ್ತೂರು, ಜುಲೈ 14: ಹಿಂದೂ ಜಾಗರಣ ವೇದಿಕೆ ಮುಖಂಡನ ವಿರುದ್ಧ ಶಾಸಕ ಅಶೋಕ್ ಕುಮಾರ್ ರೈ ಹೇಳಿಕೆಗೆ ಮಾಜಿ ಶಾಸಕ ಸಂಜೀವ ಮಠಂದೂರು ಕೌಂಟರ್ ನೀಡಿದ್ದಾರೆ.

ಹಿಂದೂ ಜಾಗರಣ ವೇದಿಕೆಯ ಪ್ರತಿಭಟನೆಯಲ್ಲಿ ಶಾಸಕರ ವಿರುದ್ಧ ವಾಗ್ದಾಳಿ ನಡೆಸಿದ್ದ ಅಜಿತ್ ಮಡಿಕೇರಿ ವಿರುದ್ಧ ಎಚ್ಚರಿಕೆ ನೀಡಿದ್ದ ಅಶೋಕ್ ಕುಮಾರ್  ಪ್ರತಿಕ್ರಿಯೆಯಾಗಿ ಬುದ್ಧಿ ಕಲಿಸುವ ಎಚ್ಚರಿಕೆ ನೀಡಿದ್ದರು.

ಶಾಸಕರ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಮಾಜಿ ಶಾಸಕ ಸಂಜೀವ ಮಠಂದೂರು, ಅಜಿತ್ ಮಡಿಕೇರಿಯನ್ನು ಪುತ್ತೂರಿನಲ್ಲಿ ಒಂದು ಗಂಟೆ ಮೆರವಣಿಗೆ ಮಾಡುತ್ತೇವೆ. ಪುತ್ತೂರು ಶಾಸಕರಿಗೆ ತಾಕತ್ತಿದ್ದರೆ ಬಂದು ತಡೆಯಲಿ. ಬಿಜೆಪಿ ಕಾರ್ಯಕರ್ತರು ಬಳೆಯಿಟ್ಟು ರಾಜಕೀಯ ಮಾಡಿದವರಲ್ಲ. ಬಿಜೆಪಿ ಕಾರ್ಯಕರ್ತರು ಸ್ವಾಭಿಮಾನಿಗಳು, ಹಣ, ಅಮಿಷಗಳಿಗೆ ಮರುಳಾಗುವವರು ಬಿಜೆಪಿಗರಲ್ಲ.

ಇಂದು ಯಾವುದಾದರೂ ಕೆಲಸಕ್ಕೆ ಶಾಸಕರ ಬಳಿ ಹೋದಲ್ಲಿ ಅವರಿಗೆ ಕಾಂಗ್ರೆಸ್ ಶಾಲು, ಧ್ವಜ ನೀಡಲಾಗುತ್ತಿದೆ. ಸರಕಾರಿ ಕೆಲಸ ಮಾಡಿಸಲು ಮನವಿ ನೀಡಲು ಹೋದಲ್ಲೂ ಇದೇ ಪರಿಸ್ಥಿತಿ. ಪುತ್ತೂರು ಶಾಸಕರು ಎಲ್ಲಾ ಕಡೆಗಳಲ್ಲೂ ಇದನ್ನೇ ಮಾಡುತ್ತಿದ್ದಾರೆ.

ನಾನು ಕೂಡಾ ಶಾಸಕನಾಗಿ ಇದ್ದವ, ನನ್ನ ಬಳಿಯೂ ಕಾಂಗ್ರೇಸ್ ನವರು, ಬೇರೆ ಪಕ್ಷದವರು ನಮ್ಮ ಬಳಿ ಬಂದಿದ್ದರು. ಅವರ ಕೆಲಸಗಳನ್ನು ನಾನು ಮಾಡಿಕೊಟ್ಟಿದ್ದೇನೆ. ನಾನು ಯಾವತ್ತೂ ಅವರಿಗೆ ಬಿಜೆಪಿ ಶಾಲು ಧ್ವಜ ಹಾಕಿಲ್ಲ, ಈಗೀನ ಶಾಸಕರ ಗೋಮುಖ ಮಾತ್ರ ನೀವು ನೋಡಿದ್ದೀರಿ, ವ್ಯಾಘ್ರ ಮುಖವನ್ಮು ನೀವು ನೋಡಿಲ್ಲ, ಪಿಸ್ತೂಲು ತೋರಿಸಿ ಎದುರಿಸಿದವರು, ಇದೇ ಮುಖವನ್ನು ಇಂದು ಜನರಿಗೆ ತೋರಿಸುವ ಪ್ರಯತ್ನದಲ್ಲಿ ಶಾಸಕರಿದ್ದಾರೆ ಎಂದು  ಪುತ್ತೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಸಂಜೀವ ಮಠಂದೂರು ಹೇಳಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *