LATEST NEWS
ಢೋಂಗಿ ರಾಮನ ಯಶೋಧೆಗೆ ನ್ಯಾಯ ಯಾವಾಗ ಕೊಡಿಸುತ್ತೀರಿ – ಅನುಪಮಾ ಶೆಣೈ

ಢೋಂಗಿ ರಾಮನ ಯಶೋಧೆಗೆ ನ್ಯಾಯ ಯಾವಾಗ ಕೊಡಿಸುತ್ತೀರಿ – ಫೇಸ್ ಬುಕ್ ನಲ್ಲಿ ಪ್ರಧಾನಿ ಮೋದಿ ಪತ್ನಿ ಬಗ್ಗೆ ಅನುಪಮಾ ಶೆಣೈ
ಉಡುಪಿ ಜನವರಿ 26: ಸಾಮಾಜಿಕ ಜಾಲತಾಣ ಫೇಸ್ ಬುಕ್ ಸ್ಟೇಟಸ್ ಮೂಲಕವೇ ಬಳ್ಳಾರಿಯಲ್ಲಿ ಕಾಂಗ್ರೇಸ್ ನ ಪರಮೇಶ್ವರ್ ನಾಯ್ಕ್ ಅವರ ಸಚಿವ ಸ್ಥಾನ ಕಿತ್ತುಕೊಂಡು ಕೊನೆಗೆ ಪೊಲೀಸ್ ಸೇವೆಗೆ ರಾಜೀನಾಮೆ ನೀಡಿದ ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಫೇಸ್ ಬುಕ್ ವಾರ್ ಶುರು ಮಾಡಿದ್ದಾರೆ.
ನಿಮ್ಮ ಸೋ ಕಾಲ್ಡ್ ಢೋಂಗಿ ರಾಮನ ಯಶೋಧೆಗೆ ನ್ಯಾಯ ಯಾವಾಗ ಕೊಡಿಸುತ್ತೀರಿ ಅಂತ ಮೊದಲು ಹೇಳಿ ಎಂದು ಮಾಜಿ ಡಿವೈಎಸ್ಪಿ ಬಿಜೆಪಿ ಬೆಂಬಲಿಗರಿಗೆ ಪ್ರಶ್ನೆ ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಆಡಳಿತದ ಬಗ್ಗೆ ಈವರೆಗೆ ವಿಡಂಬನೆ ಮಾಡುತ್ತಿದ್ದ ಅನುಪಮಾ ಶೆಣೈ, ಈ ಬಾರಿ ಮೋದಿ ಪತ್ನಿ ಯಶೋಧ ಬೆನ್ ಅವರ ಬೆನ್ನು ಬಿದ್ದಿದ್ದಾರೆ. ತನ್ನ ಫೇಸ್ ಬುಕ್ ಖಾತೆಯಲ್ಲಿ
” ಮೋದಿಯವರು ಪತ್ನಿಯನ್ನು ತೊರೆದಿದ್ದಾರೆ. ಅವರ ಪತ್ನಿ ಪೊಲೀಸ್ ಕಂಪ್ಲೆಂಟ್ ಕೊಟ್ಟಿದ್ದಾರಾ? ಅವರಿಗೂ ಮೋದಿಯ ಭಯ ಇರಬೇಕು. ಹಾಗಾಗಿ ಜೀವನಾಂಶ ಕೇಳಲೂ ಕೋರ್ಟಿಗೆ ಹೋಗಿಲ್ಲ ” ಎಂದು ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.
ಇದಕ್ಕೂ ಮೊದಲು ಅನುಪಮಾ ಶೆಣೈ ಮತ್ತೊಂದು ಸ್ಟೇಟಸ್ ಹಾಕಿದ್ದು, ತ್ರಿವಳಿ ತಲಾಖ್ ರದ್ದುಗೊಳಿಸಲು ಹಗಲಿರುಳು ಶ್ರಮಿಸುವ ಮೋದಿಯವರು ತನ್ನ ಮಡದಿಯನ್ನು ದೂರ ಮಾಡಿದ್ದಾರೆ. ಈ ವಿಷಯವೂ ಸಂಸತ್ತಿನಲ್ಲಿ ಚರ್ಚೆಯಾಗಲಿ ಅಂತ ಸವಾಲು ಹಾಕಿದ್ದಾರೆ.
ಶೆಣೈ ಹಾಕಿರುವ ಸ್ಟೇಟಸ್ ಗೆ ಪರ ಮತ್ತು ವಿರೋಧ ಪ್ರತಿಕ್ರಿಯೆಗಳು ಬರುತ್ತಿದ್ದು. ಮೋದಿ ಅಭಿಮಾನಿಗಳು ಶೆಣೈ ವಿರುದ್ಧ ಫೇಸ್ ಬುಕ್ ನಲ್ಲೇ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಧಾನಿಯವರ ಖಾಸಗಿ ಜೀವನದ ಚರ್ಚೆ ಬೇಡ. ಅವರ ಸಂಸಾರದ ವಿಚಾರ ನಿಮಗೆ ಬೇಡ. ಮೊದಲು ನೀವು ನಿಮ್ಮ ಹೊಸ ಪಕ್ಷ ಕಟ್ಟಿ, ಪಕ್ಷ ಸಂಘಟನೆ ಬಗ್ಗೆ ಚಿಂತೆ ಮಾಡಿ. ಪ್ರಧಾನಿ ಕುಟುಂಬದ ಬಗ್ಗೆ ನಿಮಗ್ಯಾಕೆ ಚಿಂತೆ ಅಂತ ಪ್ರಶ್ನೆ ಮಾಡಿದ್ದಾರೆ.
ಮೋದಿಯವರು ತಮ್ಮ ಹೆಂಡತಿಯನ್ನು ಬಿಟ್ಟಿದ್ದು ವೈಯುಕ್ತಿಕ ವಿಚಾರ ಎಂದು ಕೆಲವು ನನಗೆ ಹೇಳ್ತಾರೆ ಹಾಗಾದರೆ ಶಹಾ ಬಾನೋ, ಶಾಯಿರಾ ಬಾನೋ ಅವರವರ ಗಂಡಂದಿರು ಬಿಟ್ಟಿದ್ದು ಅವರ ವೈಯುಕ್ತಿಕ ವಿಚಾರ ಅಲ್ವೇ ಎಂದು ಪ್ರಶ್ನೆ ಮಾಡಿದ್ದಾರೆ.
ಅದನ್ನು ಯಾಕೆ ನ್ಯಾಯಾಲಯ ಹಾಗೂ ಸಂಸತ್ತು ಚರ್ಚೆಗೆ ಎತ್ತಿಕೊಂಡಿದ್ದು, ಅವರನ್ನು ಅವರ ಗಂಡಂದಿರುವ ಬಿಟ್ಟಿದ್ದು ಅವರ ವೈಯುಕ್ತಿಕ ವಿಚಾರ ಅಂತ ಕೋರ್ಟ್ ಆಗಲಿ ಸಂಸತ್ತಾಗಲಿ ತಿರಸ್ಕರಿಸಲಿಲ್ಲ ಯಾಕೇ ಎಂದು ಪ್ರಶ್ನೆ ಮಾಡಿದ್ದಾರೆ.