DAKSHINA KANNADA
ಪುತ್ತೂರು – ಕೇಸ್ ಡಿಸ್ಮಿಸ್ ಬದಲು ಅಧಿಕಾರಿಯನ್ನೆೇ ಡಿಸ್ಮಿಸ್ ಮಾಡಿದ ಹಿರಿಯ ಅಧಿಕಾರಿಗಳು…!!

ಪುತ್ತೂರು ಅಗಸ್ಟ್ 11: ಪ್ರಕರಣವನ್ನು ಡಿಸ್ಮಿಸ್ ಮಾಡಿದ ಕರ್ನಾಟಕ ಆಡಳಿತ ನ್ಯಾಯಾಧೀಕರಣದ ಆದೇಶವನ್ನು ತಪ್ಪಾಗಿ ಅರ್ಥೈಸಿದ ಹಿರಿಯ ಅಧಿಕಾರಿಗಳು ಕೇಸ್ ಡಿಸ್ಮಿಸ್ ಬದಲು ಅರಣ್ಯ ಅಧಿಕಾರಿಯನ್ನೇ ಡಿಸ್ಮಿಸ್ ಮಾಡಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಹಿರಿಯ ಅರಣ್ಯ ಇಲಾಖೆಯ ಅಧಿಕಾರಿಗಳ ಎಡವಟ್ಟಿಗೆ ಪುತ್ತೂರು ಉಪ ವಲಯ ಅರಣ್ಯಾಧಿಕಾರಿ ಸಂಜೀವ ಪೂಜಾರಿ ಕಾಣಿಯೂರು ಅವರು ಇದೀಗ ಅಮಾನತು ಆಗಿದ್ದಾರೆ. ಕಳೆದ ಏಳು ತಿಂಗಳ ಹಿಂದೆ ಸಂಜೀವ ಪೂಜಾರಿ ಮೇಲೆ ಭಜನೆಯ ಬಗ್ಗೆ ಅವಹೇಳನ ಮಾಡಿದ ಆರೋಪವಿತ್ತು, ಹಾಗಾಗಿ ಇವ್ರನ್ನ ಅರಣ್ಯಾಧಿಕಾರಿಗಳು ಅಮಾನತು ಮಾಡಿ ಅದೇಶ ಹೊರಡಿಸಿದ್ದರು. ಬಳಿಕ ಸಂಜೀವ ಪೂಜಾರಿ ಅವರು ತಮ್ಮ ಅಮಾನತ್ತನ್ನು KSAT ನಲ್ಲಿ ಪ್ರಶ್ನಿಸಿದ್ದರು.

ಆಡಳಿತ ನ್ಯಾಯಾಧೀಕರಣ ಮಂಡಳಿ (KSAT)ಯಲ್ಲಿ ಅಮಾನತಿನ ವಿಚಾರದಲ್ಲಿ ಸಂಜೀವ ಪೂಜಾರಿಗೆ ನ್ಯಾಯ ದೊರಕಿತ್ತು, ಇದಾದ ಬಳಿಕ KSAT ಪ್ರತಿಯಲ್ಲಿ ಕೇಸ್ ಡಿಸ್ಮಿಸ್ ಎಂದು ಬರೆಯಲಾಗಿತ್ತು. ಆದರೆ ಇದನ್ನೇ ತಪ್ಪಾಗಿ ಅರ್ಥೈಸಿದ ಅರಣ್ಯಾಧಿಕಾರಿಗಳು ಮತ್ತೆ ಸಂಜೀವ ಪೂಜಾರಿ ಅವರನ್ನು ಅಮಾನತು ಮಾಡಿ ಎಡವಟ್ಟು ಮಾಡಿದ್ದಾರೆ. ಇದೀಗ ಮತ್ತೆ ತನಗೆ ನ್ಯಾಯಕ್ಕಾಗಿ ಸಂಜೀವ ಪೂಜಾರಿ ಅವರು ಸರಕಾರವನ್ನು ಆಗ್ರಹಿಸಿದ್ದು, ನ್ಯಾಯಾಧಿಕರಣದ ಆದೇಶವನ್ನು ತಪ್ಪಾಗಿ ಅರ್ಥೈಸಿದ ಅಧಿಕಾರಿಗಳ ವಿರುದ್ದ ಕ್ರಮಕ್ಕೆ ಆಗ್ರಹಿಸಿದ್ದಾರೆ.