DAKSHINA KANNADA
ಫಾರೆಸ್ಟ್ ಗಾರ್ಡ್ ಮೇಲೆ ಮರಗಳ್ಳರಿಂದ ಮಾರಣಾಂತಿಕ ಹಲ್ಲೆ
ಫಾರೆಸ್ಟ್ ಗಾರ್ಡ್ ಮೇಲೆ ಮರಗಳ್ಳರಿಂದ ಮಾರಣಾಂತಿಕ ಹಲ್ಲೆ
ಪುತ್ತೂರು ಅಗಸ್ಟ್ 2: ಅಕ್ರಮ ಮರಸಾಗಾಟ ನಡೆಸುತ್ತಿದ್ದ ಲಾರಿಯೊಂದನ್ನು ನಿಲ್ಲಿಸಿದ ಫಾರೆಸ್ಟ್ ಗಾರ್ಡ್ ಗೆ ಮೇಲೆ ಮರಗಳ್ಳರು ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ನಡೆದಿದೆ.
ದಕ್ಷಿಣಕನ್ನಡ ಜಿಲ್ಲೆಯ ಗುಂಡ್ಯಾ ಎಂಬಲ್ಲಿ ಈ ಘಟನೆ ನಡೆದಿದ್ದು, ನಿನ್ನೆ ತಡರಾತ್ರಿ ಗುಂಡ್ಯಾ ಚೆಕ್ ಪೋಸ್ಟ್ ಬಳಿ ಕರ್ತವ್ಯದಲ್ಲಿದ್ದ ಗಾರ್ಡ್ ರಾಜೇಶ್ ಅಕ್ರಮವಾಗಿ ಬೆಲೆ ಬಾಳುವ ಮರ ಸಾಗಾಟ ನಡೆಸುತ್ತಿದ್ದ ಲಾರಿಯನ್ನು ತಡೆಹಿಡಿದಿದ್ದರು.
ಮರಕ್ಕೆ ಸಂಬಂಧಿಸಿದ ದಾಖಲೆ ಪತ್ರಗಳನ್ನು ಕೇಳಿದ ಸಂದರ್ಭದಲ್ಲಿ ಲಾರಿಯಲ್ಲಿದ್ದ ಮೂವರು ಮರಗಳ್ಳರು ರಾಜೇಶ್ ಅವರಿಗೆ ಗಂಭೀರ ಹಲ್ಲೆ ನಡೆಸಿ ಲಾರಿಯೊಂದಿಗೆ ಪರಾರಿಯಾಗಿದ್ದಾರೆ. ರಾಜೇಶ್ ಅವರ ಸಮವಸ್ತ್ರವನ್ನು ಹರಿದು ಹಾಕಲಾಗಿದೆ.
ಗಂಭೀರವಾಗಿ ಗಾಯಗೊಂಡ ರಾಜೇಶ್ ಇದೀಗ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಮರಗಳ್ಳರ ಹಲ್ಲೆಯಿಂದ ಗಾಯಗೊಂಡ ಆಸ್ಪತ್ರೆಗೆ ಸೇರಿರುವ ಫೋರೆಸ್ಟ್ ಗಾರ್ಡ್ ಅವರನ್ನು ನೋಡಲು ಕೆಳ ಹಂತದ ಅಧಿಕಾರಿಗಳು ಬಿಟ್ಟರೆ ಯಾವುದೇ ಹಿರಿಯ ಅರಣ್ಯಾಧಿಕಾರಿಗಳು ಆಸ್ಪತ್ರೆ ಕಡೆ ಬರದೆ ಇರುವುದು ಆಕ್ರೋಶಕ್ಕೆ ಕಾರಣವಾಗಿದೆ.
ಪ್ರಾಣ ಒತ್ತೆ ಇಟ್ಟು ಅಕ್ರಮ ತಡೆಯಲು ಮುಂದಾಗಿರುವ ಸಿಬ್ಬಂದಿಯ ಆರೋಗ್ಯ ವಿಚಾರಿಸಲು ಬರದೆ ಇರುವ ಹಿರಿಯ ಅಧಿಕಾರಿಗಳ ವಿರುದ್ದ ಅರಣ್ಯ ಇಲಾಖೆಯ ಕೆಳ ಹಂತದ ಸಿಬ್ಬಂದಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.