Connect with us

DAKSHINA KANNADA

ಅರಣ್ಯ ಪ್ರದೇಶಗಳಲ್ಲಿ ಬೆಂಕಿ ಅವಘಡ, ಕಾಡ್ಗಿಚ್ಚು, ಬೆಂಕಿ ಜ್ವಾಲೆ ಕಂಡುಬಂದರೆ ಮಾಹಿತಿ ನೀಡಿ

ಮಂಗಳೂರು ಮಾರ್ಚ್ 4:- ತಾಪಮಾನದ ವೈಪರಿತ್ಯದಿಂದ ಬಿಸಿಲಿನ ಶಾಖ 32 ಡಿಗ್ರಿ ಯಿಂದ 40.7ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವು ಸೂರ್ಯನ ಕಿರಣಗಳು ಸುಡುವಂತೆ ಭಾಸವಾಗುತ್ತಿದೆ.


ಅರಣ್ಯ ಪ್ರದೇಶಗಳಲ್ಲಿ ಹಾದು ಹೋಗುವ ವಿದ್ಯುತ್ ಸರಬರಾಜು ಪರಿವರ್ತಕ, ತಂತಿಗಳ ಮೂಲಕ ಕಿಡಿ ಹಾರಿ ಬೆಂಕಿ ಜ್ವಾಲೆ ಕಂಡು ಬಂದರೆ ಸಾರ್ವಜನಿಕರು ಅರಣ್ಯ ಪ್ರದೇಶದ ಬಳಿ ವಿನಾಕಾರಣ ತ್ಯಾಜ್ಯಗಳಿಗೆ ಬೆಂಕಿ ಹಾಕುವುದರಿಂದ ಬೆಂಕಿ ಜ್ವಾಲೆ ಕಾಡ್ಗಿಚ್ಚಿಗೆ ಕಾರಣವಾಗುತ್ತದೆ. ಆದ್ದರಿಂದ ಮಾರ್ಚ್, ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಎಲ್ಲೆಂದರಲ್ಲಿ ಬೆಂಕಿ ಹಚ್ಚುವುದು, ಅನಗತ್ಯ ಪಟಾಕಿ ಸ್ಟೋಟಿಸುವುದು, ರಸ್ತೆ ಪಕ್ಕದಲ್ಲಿ ಧೂಮಪಾನ ಮಾಡುವುದು ಚಿಕ್ಕ, ಪುಟ್ಟ ಅಂಗಡಿಯವರು ತ್ಯಾಜ್ಯ ಬಿಸಾಡಿ ಬೆಂಕಿ ಹಚ್ಚುವುದು ಅಪರಾಧ ಎಂದು ಪರಿಗಣಿಸಲಾಗಿದೆ.

ಅರಣ್ಯ ವೀಕ್ಷಕರು, ಅಧಿಕಾರಿಗಳು ನಿರಂತರ ಅರಣ್ಯ ಪ್ರದೇಶಗಳ ರಕ್ಷಣೆಗೆ ಕರ್ತವ್ಯ ನಿರ್ವಹಿಸುತ್ತಿದ್ದು ಬೆಂಕಿ ಅವಘಡ, ಕಾಡ್ಗಿಚ್ಚು, ಬೆಂಕಿ ಜ್ವಾಲೆ ಕಂಡು ಬಂದರೆ ಸಾರ್ವಜನಿಕರು ಆಯಾ ವಲಯದ ಉಪ್ಪಿನಂಗಡಿ-9480346249, ಪುತ್ತೂರು-9980808650, ಬೆಳ್ತಂಗಡಿ-9481808105, ಸುಳ್ಯ-9449506304, ಬಂಟ್ವಾಳ-9845732332, ಮಂಗಳೂರು-9620426901, ಸುಬ್ರಹ್ಮಣ್ಯ-9036604975 ಹಾಗೂ ಪಂಜ- 9481390040 ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಮಂಗಳೂರು ವಲಯದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *