LATEST NEWS
ಕಾಬೂಲ್ ನಲ್ಲಿ ಒಂದು ಬಾಟಲ್ ನೀರು ಈಗ 3,000 ರೂಪಾಯಿ

ಕಾಬೂಲ್: ತಾಲಿಬಾನಿಗಳಿಂದ ತಪ್ಪಿಸಿಕೊಂಡು ದೇಶ ತೊರೆಯುತ್ತಿರುವ ಅಪ್ಘಾನಿಗಳಿಗೆ ಈಗ ಮತ್ತೊಂದು ಸಂಕಷ್ಟ ಎದುರಾಗಿದ್ದು, ಕಾಬೂಲ್ ವಿಮಾನ ನಿಲ್ದಾಣದಲ್ಲಿ ಆಹಾರ ಪದಾರ್ಥಗಳ ಬೇಲೆ ಏರಿಕೆಯಾಗಿದ್ದು, 3 ಸಾವಿರ ರೂ ನೀಡಿ ಒಂದು ಬಾಟಲ್ ನೀರು ಖರೀದಿಸುವ ಹಂತಕ್ಕೆ ತಲುಪಿದೆ.
ಅಪ್ಘಾನಿಸ್ತಾನ ತಾಲಿಬಾನ್ ಗಳ ವಶವಾಗುತ್ತಿದ್ದಂತೆ ದೇಶ ತೊರೆಯಲು ಜನ ಮುಂದಾಗಿದ್ದು, ಕಾಬೂಲ್ ವಿಮಾನ ನಿಲ್ದಾಣದಲ್ಲಿ ಸಾವಿರಾರು ಜನರು ತಮ್ಮ ಸರಿದಿಗಾಗಿ ಕಾಯುತ್ತಿದ್ದಾರೆ. ಈ ನಡುವೆ ಕಾಬೂಲ್ ವಿಮಾನನಿಲ್ದಾಣ ತಲುಪಿರುವ ಜನರಿಗೆ ಮೂರು ಸಾವಿರ ರೂಪಾಯಿ ನೀಡಿ ಒಂದು ಬಾಟೆಲ್ ನೀರು ಖರೀದಿಸುವ ಕಠಿಣ ಪರಿಸ್ಥಿತಿ ಎದುರಾಗಿದೆ. ಇತ್ತ ಒಂದು ಪ್ಲೇಟ್ ರೈಸ್‍ಗೆ 7,500 ರೂ. ನೀಡಲಾಗುತ್ತಿದೆ. ಹೇಗಾದ್ರೂ ಮಾಡಿ ಇಲ್ಲಿಂದ ಹೋದ್ರೆ ಸಾಕು ಅಂತಿರುವ ಜನರು ಅನಿವಾರ್ಯವಾಗಿ ಇಷ್ಟು ಹಣ ನೀಡಿ ಅನ್ನಾಹಾರ ಖರೀದಿಸುತ್ತಿದ್ದಾರೆ. ಆದ್ರೆ ಮಧ್ಯಮ ವರ್ಗದ ಜನರ ಸ್ಥಿತಿ ಆ ದೇವರಿಗೆ ಪ್ರೀತಿ ಎಂಬಂತಾಗಿದೆ.

ಮತ್ತೊಂದು ಕಡೆ ವಿಮಾನ ಏರುವ ತಮ್ಮ ಸರದಿಗಾಗಿ ಕಾಯುತ್ತಿರುವ ಜನರ ಸಹಾಯಕ್ಕೆ ಅಮೆರಿಕ ಸೈನಿಕರು ಮುಂದಾಗಿದ್ದು, ಆಹಾರದ ಪೊಟ್ಟಣಗಳನ್ನು ವಿತರಿಸುತ್ತಿದ್ದಾರೆ. ಕಾಬೂಲ್ ವಿಮಾನ ನಿಲ್ದಾಣದ ಹೊರಗಡೆ ನೀರು ಮತ್ತು ಆಹಾರ ಮಾರಾಟ ಮಾಡಲಾಗುತ್ತಿದೆ. ಆರ್ಥಿಕವಾಗಿ ಸಶಕ್ತರಾಗಿರುವವರು ಹಣ ನೀಡಿ ಖರೀದಿಸುತ್ತಿದ್ದಾರೆ. ಇನ್ನು ಕೆಲ ಮಾರಾಟಗಾರರು ಡಾಲರ್ ನೀಡಿದ್ರೆ ಮಾತ್ರ ಆಹಾರ ನೀಡುತ್ತಿದ್ದಾರೆ. ಕೆಲವರು ಆಹಾರವಿಲ್ಲದೇ ಕುಳಿತಲ್ಲಿಯೇ ಕುಸಿದು ಬೀಳುತ್ತಿರುವ ಬಗ್ಗೆ ವರದಿಯಾಗಿವೆ. ದೇಶವನ್ನು ವಶಕ್ಕೆ ಪಡೆದ ತಾಲಿಬಾನಿಗಳು ಪ್ರಜೆಗಳ ಮೇಲೆ ಹಲ್ಲೆ ನಡೆಸುತ್ತಿದ್ದಾರೆ