LATEST NEWS
ಸಹರಾ ಮರುಭೂಮಿಯಲ್ಲಿ ಪ್ರವಾಹ – ಆರು ವರ್ಷಗಳ ಬಳಿಕ ಬಂದ ಮಳೆ…!!
ಆಫ್ರಿಕಾ ಅಕ್ಟೋಬರ್ 13: ಪ್ರಪಂಚದ ಅತಿದೊಡ್ಡ ಮರುಭೂಮಿ ಸಹಾರದಲ್ಲಿ ಕಳೆದ ಆರು ವರ್ಷಗಳ ಬಳಿಕ ಮಳೆಯಾಗಿದ್ದು, ಅದು ಪ್ರವಾಹ ರೀತಿಯಲ್ಲಿ ಮಳೆ ಸುರಿದಿದೆ.
ಕಳೆದ ಆರು ವರ್ಷಗಳಿಂದ ಮರುಭೂಮಿ ಪ್ರದೇಶದಲ್ಲಿ ಯಾವುದೇ ಮಳೆಯಾಗದೇ ಜನ ಸಂಕಷ್ಟದಲ್ಲಿದ್ದರು. ಆದರೆ ಸುರಿದ ಮಳೆಗೆ ಮೊರಾಕ್ಕೊದ ರಾಜಧಾನಿ ರಬಾಟಾದಿಂದ 450 ಕಿ.ಮೀ ದೂರದಲ್ಲಿ ಆಗ್ನೇಯ ಭಾಗದಲ್ಲಿರುವ ಮೆರ್ಜೌಗಾ ಎಂಬ ಪ್ರದೇಶದಲ್ಲಿ 50 ವರ್ಷದಿಂದ ಒಣಗಿ ಹೋಗಿದ್ದ ಇರಿಕಿ ಸರೋವರ (ಮರಳುಗಾಡಿನ ಲಗೂನ್) ಇದೇ ಮೊದಲ ಬಾರಿಗೆ ಭಾರಿ ಮಳೆಯಿಂದ ತುಂಬಿಕೊಂಡಿದೆ.
ಈ ಭಾಗದಲ್ಲಿ ವರ್ಷದಲ್ಲಿ ಕೇವಲ 250 ಮಿಲಿ ಮೀಟರ್ ಮಳೆಯಾದರೆ ಹೆಚ್ಚು. ಆದರೆ ಮೊನ್ನೆ ಸುರಿದ ಒಂದೇ ದಿನದ ಮಳೆಯ ಪ್ರಮಾಣ 100 ಮಿಲಿ ಮೀಟರ್ ಮಳೆ ಬಂದಿದೆ. 50 ವರ್ಷಗಳಿಂದ ಇಷ್ಟು ಪ್ರಮಾಣದ ಮಳೆಯನ್ನು ಕಂಡಿರಲಿಲ್ಲ. ಉಷ್ಣವಲಯದ ಚಂಡಮಾರುತದ ಪರಿಣಾಮದಿಂದ ದೊಡ್ಡ ಪ್ರಮಾಣದಲ್ಲಿ ಮಳೆ ಸುರಿದಿದೆ. ಇರಿಕಿ ಸರೋವರಕ್ಕೆ ಜೀವ ಕಳೆ ಬಂದಿದೆ ಎಂದು ಮೊರಾಕ್ಕೊದ ಹವಾಮಾನ ಇಲಾಖೆಯ ಪ್ರಧಾನ ನಿರ್ದೇಶಕ ಹೂಸಿನ್ ಯೂಬೇಬ್ ಹೇಳಿದ್ದಾರೆ.
ಕಳೆದ ಆರು ವರ್ಷಗಳಿಂದ ಮಳೆಯೇ ಆಗಿರಲಿಲ್ಲ. ಇದರಿಂದ ಮರುಭೂಮಿ ಪ್ರದೇಶದ ರೈತರು, ಜನಗಳು ಸಂಕಷ್ಟಕ್ಕೆ ಸಿಲುಕಿದ್ದರು. ಈ ಮಳೆ ಜಲಮರುಪೂರಣಕ್ಕೆ ಕಾರಣವಾಗಲಿದೆ ಎಂದು ಅವರು ಹೇಳಿದ್ದಾರೆ. ಸಹರಾ ಮರುಭೂಮಿಯೂ ಜಗತ್ತಿನ ಅತಿದೊಡ್ಡ ಶುಷ್ಕ ಮರುಭೂಮಿಯಾಗಿದ್ದು 92 ಲಕ್ಷ ಚದರ ಕಿ.ಮೀ ವ್ಯಾಪ್ತಿ ಹೊಂದಿದೆ.