LATEST NEWS
ಉದ್ಘಾಟನೆಯಾದ ಮೂರೇ ದಿನಕ್ಕೆ ಸಮುದ್ರ ಪಾಲಾದ ಬ್ರಿಡ್ಜ್ : ಫ್ಲೋಟಿಂಗ್ ಬ್ರಿಡ್ಜ್ ಕಂಪ್ಲೀಟ್ ಫ್ಲೋಟಿಂಗ್
ಉಡುಪಿ, ಮೇ 09: ರಾಜ್ಯದಲ್ಲೇ ಪ್ರಪ್ರಥಮ ಬಾರಿಗೆ ಅಳವಡಿಸಲಾಗಿದ್ದ ಫ್ಲೋಟಿಂಗ್ ಬ್ರಿಡ್ಜ್ (ತೇಲುವ ಸೇತುವೆ) ಉದ್ಘಾಟನೆಯಾದ ಮೂರೇ ದಿನಕ್ಕೆ ಸಮುದ್ರ ಪಾಲಾಗಿದೆ.
ಮಲ್ಪೆ ಬೀಚ್‌ನಲ್ಲಿ ಪ್ರವಾಸಿಗರ ಆಕರ್ಷಣೆಗೆಂದು , ತೊಯ್ದಾಡುವ ಅಲೆಗಳ ಮಧ್ಯೆ ತೇಲುತ್ತಾ, ಪ್ರವಾಸಿಗರಿಗೆ ವಿಶೇಷ ಅನುಭವ ಸುಮಾರು 80 ಲಕ್ಷ ವೆಚ್ಚದಲ್ಲಿ ಈ ಸೇತುವೆ ನಿರ್ಮಿಸಲಾಗಿದ್ದು.ಆದರೆ ಉದ್ಘಾಟನೆಯಾದ ಮೂರೇ ದಿನಕ್ಕೆ ಬ್ರಿಡ್ಜ್ ಭಾಗ ಚದುರಿ ಹೋಗಿ ಸಮುದ್ರಪಾಲಾಗಿದೆ.
ಭಾನುವಾರ ಬೆಳಗ್ಗೆಯಿಂದಲೇ ಕಡಲು ಪ್ರಕ್ಷುಬ್ಧವಾಗಿದ್ದು, ನೂತನ ಅಲೆಗಳಲ್ಲಿ ತೇಲುವ ಸೇತುವೆಯನ್ನು ನೋಡಲು , ಅನುಭವಿಸಲು ಹೆಚ್ಚಿನ ಸಂಖ್ಯೆಯ ಜನರು ಆಗಮಿಸಿದ್ದರೂ ಅಲೆಗಳ ಅಬ್ಬರ ಹೆಚ್ಚಿದ್ದರಿಂದ ಜನರ ಸುರಕ್ಷತೆ ದೃಷ್ಟಿಯಿಂದ ಸೇತುವೆ ಮೇಲೆ ನಡೆದಾಡಲು ಅವಕಾಶ ನೀಡಿರಲಿಲ್ಲ.
ಸುಮಾರು 100 ಮೀ. ಉದ್ದ, 3.50 ಮೀ. ಅಗಲವಿದ್ದಈ ಸೇತುವೆಯನ್ನು ಹೆಚ್ಚಿನ ಸಾಂದ್ರತೆಯ ಫೋಂಟೋನ್ಸ್ ಬ್ಲಾಕ್ ಗಳಿಂದ ಇದನ್ನು ಮಾಡಲಾಗಿತ್ತು. ಆದರೆ ಅಲೆಗಳ ಭೀಕರ ಹೊಡೆತಕ್ಕೆ ಸಿಲುಕಿ ತೀವ್ರವಾಗಿ ಹಾನಿಯಾಗಿದ್ದು, ಸೇತುವೆ ಬಿಡಿಭಾಗಗಳು ಸಮುದ್ರ ಪಾಲಾಗಿದೆ.ಕೇರಳದ ಬೇಪೋರ್ ಬೀಚ್ ಹೊರತುಪಡಿಸಿದರೆ ದೇಶದ ಬೇರೆಲ್ಲೂ ಈ ರೀತಿಯ ತೇಲುವ ಸೇತುವೆ ಇರಲಿಲ್ಲ.