LATEST NEWS
ಉಡುಪಿ ಜಿಲ್ಲೆಯಲ್ಲಿ ಆತಂಕ ಸೃಷ್ಠಿಸಿದ ಆರೋಗ್ಯ ಸೇತು ಆ್ಯಪ್ ನ ತಪ್ಪು ಮಾಹಿತಿ

ಉಡುಪಿ ಜಿಲ್ಲೆಯಲ್ಲಿ ಆತಂಕ ಸೃಷ್ಠಿಸಿದ ಆರೋಗ್ಯ ಸೇತು ಆ್ಯಪ್ ನ ತಪ್ಪು ಮಾಹಿತಿ
ಉಡುಪಿ ಮೇ 02: ಆರೋಗ್ಯ ಸೇತು ಆ್ಯಪ್ ನಲ್ಲಿನ ಸುಳ್ಳು ಮಾಹಿತಿಯಿಂದಾಗಿ ಕೊರೊನಾ ಮುಕ್ತ ಉಡುಪಿ ಜಿಲ್ಲೆಯಲ್ಲಿ ಆಂತಕ ಮನೆ ಮಾಡಿದ ಘಟನೆ ನಡೆದಿದೆ.
ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನಲ್ಲಿರುವ ವ್ಯಕ್ತಿಯೊಬ್ಬರಿಗೆ ಕೋರೋನಾ ಪಾಸಿಟಿವ್ ಇದೆ ಎಂದು ಆರೋಗ್ಯ ಸೇತು ಆ್ಯಪ್ ನಲ್ಲಿ ಈ ಮಾಹಿತಿ ಬಂದಿದ್ದು, ಜನರಲ್ಲಿ ಆತಂಕವನ್ನು ಉಂಟುಮಾಡಿತ್ತು. ಬೆಳಗಾವಿಯಲ್ಲಿ ಗಂಟಲ ದ್ರವ ಪರೀಕ್ಷೆ ನಡೆಸಿ ಬಂದಿದ್ದ ವ್ಯಕ್ತಿಯ ಮಾಹಿತಿ ಆರೋಗ್ಯ ಸೇತು ಆಪ್‌ನಲ್ಲಿ ಪಾಸಿಟಿವ್ ಎಂದು ಅಪ್ ಲೋಡ್ ಆಗಿತ್ತು.

ಪಾಸಿಟಿವ್ ಬಂದ ವ್ಯಕ್ತಿ ಬೈಂದೂರಿನಲ್ಲಿದ್ದಾನೆ ಎಂಬ ಮಾಹಿತಿ ಆಪ್‌ನಲ್ಲಿ ದಾಖಲಾಗಿತ್ತು. ಸ್ಥಳಿಯ ಜನರ ಆತಂಕವನ್ನು ಜಿಲ್ಲಾಡಳಿತದ ಗಮನಕ್ಕೆ ತಂದು ಬೆಳಗಾವಿ ಆರೋಗ್ಯ ಇಲಾಖೆಯಲ್ಲಿ ವಿಚಾರಿಸಿದಾಗ ಈ ವ್ಯಕ್ತಿಯ ಗಂಟಲ ದ್ರವ ಪರೀಕ್ಷೆ ನೆಗೆಟಿವ್ ಬಂದಿದೆ ಎಂಬುದು ಖಾತ್ರಿಯಾಗಿತ್ತು.
ಜನ ನಿರಾಳವಾಗಿದ್ದರೂ ಜಿಲ್ಲಾಡಳಿತ ಮುನ್ನೆಚ್ಚರಿಕೆಯ ಕ್ರಮವಾಗಿ ಉಡುಪಿಯಲ್ಲಿ ಮತ್ತೊಮ್ಮೆ ಪರೀಕ್ಷೆ ನಡೆಸಿದ್ದು ಆ ಶಂಕಿತ ವ್ಯಕ್ತಿಯ ಗಂಟಲ ದ್ರವ ವನ್ನು ತೆಗೆದು ಪರೀಕ್ಷೆಗಾಗಿ ರವಾನೆ ಮಾಡಿದ್ದಾರೆ.