LATEST NEWS
ಪ್ರಕ್ಷುಬ್ದ ಕಡಲು ಉಡುಪಿ ಸಮೀಪ ಮುಳುಗಡೆಯಾದ ಎರಡು ಮೀನುಗಾರಿಕಾ ಬೋಟು
ಪ್ರಕ್ಷುಬ್ದ ಕಡಲು ಉಡುಪಿ ಸಮೀಪ ಮುಳುಗಡೆಯಾದ ಎರಡು ಮೀನುಗಾರಿಕಾ ಬೋಟು
ಉಡುಪಿ ಅಗಸ್ಟ್ 12: ಮಲ್ಪೆಯಿಂದ ಆಳಸಮುದ್ರ ತೆರಳಿದ ಎರಡು ಬೋಟುಗಳು ಗಂಗೊಳ್ಳಿ ಬಳಿ ಸಮುದ್ರದಲ್ಲಿ ಮುಳುಗಡೆಯಾಗಿವೆ,
ಮಲ್ಪೆ ಕಡಲತೀರದಿಂದ ಶನಿವಾರ ಈ ಎರಡು ಮೀನುಗಾರಿಕಾ ಬೋಟುಗಳ ಆಳಸಮುದ್ರ ಮೀನುಗಾರಿಕೆ ತೆರಳಿದ್ದವು. ಮೀನುಗಾರಿಗೆ ಮುಗಿಸಿ ಎರಡು ಪ್ರತ್ಯೇಕ ಬೋಟುಗಳು ಮಲ್ಪೆಗೆ ಮರಳುವಾಗ ಮುಳುಗಡೆಯಾಗಿದ್ದು 16ಮಂದಿಯನ್ನು ರಕ್ಷಣೆ ಮಾಡಲಾಗಿದೆ.
ಕಡಲು ಪ್ರಕ್ಷ್ಯುಬ್ದವಾದ ಹಿನ್ನಲೆಯಲ್ಲಿ ಈ ಒಂದು ಅವಘಡ ನಡೆದಿದೆ ಎಂದು ಹೇಳಲಾಗಿದೆ, ಶನಿವಾರ ಮಲ್ಪೆಯಿಂದ ತೆರಳಿದ 8 ಮಂದಿಯಿದ್ದ ಶಿವಗಣೇಶ ಬೋಟು ಸಂಜೆಯ ಸಮಯದಲ್ಲಿ ಸುರಿದ ಭಾರಿ ಗಾಳಿ ಮಳೆಗೆ ಕಡಲು ಪ್ರಕ್ಷುಬ್ದವಾಗಿತ್ತು. ಈ ನಡುವೆ ಬೋಟಿನಲ್ಲಿ ತೂತು ಬಿದ್ದ ಹಿನ್ನಲೆಯಲ್ಲಿ ಬೋಟು ಮುಳುಗಲು ಪ್ರಾರಂಭವಾಗಿದೆ.
ಕೂಡಲೇ ಮಲ್ಪೆಗೆ ಕರೆಮಾಡಿದ ಬೋಟಿನಲ್ಲಿದ್ದ ಮೀನುಗಾರರು ರಕ್ಷಣೆಗೆ ಕರೆದಿದ್ದಾರೆ. ಸ್ಥಳಕ್ಕೆ ಮಲ್ಪೆಯಿಂದ ತೆರಳಿದ ಬೇರೊಂದು ಬೋಟಿನಲ್ಲಿದ್ದ ಮೀನುಗಾರರು ಮುಳುಗಡೆಯಾಗುತ್ತಿದ್ದ ಬೋಟಿನಲ್ಲಿದ್ದ 8 ಮಂದಿಯನ್ನು ರಕ್ಷಿಸಿ ಮಲ್ಪೆಗೆ ಕರೆ ತಂದಿದ್ದಾರೆ.
ಇನ್ನು ಇಂದು ಬೆಳಿಗ್ಗೆ ಮೀನುಗಾರಿಕೆ ಮುಗಿಸಿ ಮಲ್ಪೆಗೆ ಮರಳುತ್ತಿದ್ದ ಪದ್ಮದಾಸ್ ಬೋಟು ಗಂಗೊಳ್ಳಿ ಭಟ್ಕಳದ ನಡುವೆ ಮುಳುಗಡೆಯಾಗಿದೆ. ಬೋಟಿನಲ್ಲಿದ್ದ ಮೀನುಗಾರರ ಮಾಹಿತಿ ಮೇಲೆ ಸ್ಥಳಕ್ಕೆ ತೆರಳಿದ ಮಲ್ಪೆಯ ಭಜರಂಗಿ ಬೋಟಿನ ಮೀನುಗಾರರು 8 ಮಂದಿ ಮೀನುಗಾರರನ್ನು ರಕ್ಷಿಸಿ ಮಲ್ಪೆಗೆ ಕರೆತಂದಿದ್ದಾರೆ . ಈ ಎರಡು ಮುಳುಗಡೆಯಾಗುವ ಬೋಟಿನಲ್ಲಿದ್ದ ಮೀನುಗಾರರ ರಕ್ಷಣೆ ಲೈವ್ ವೀಡಿಯೋ ಲಭ್ಯವಾಗಿದೆ.