Connect with us

LATEST NEWS

ಮೀನುಗಾರಿಕಾ ಬೋಟ್ ಮುಳುಗಿ ಓರ್ವ ನಾಪತ್ತೆ

ಮಂಗಳೂರು ಸೆಪ್ಟೆಂಬರ್ 8: ಕರಾವಳಿಯಲ್ಲಿ ಮೀನುಗಾರಿಕಾ ಬೋಟ್ ಗಳ ಸರಣಿ ದುರಂತ ಮುಂದುವರೆದಿದ್ದು, ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮತ್ತೊಂದು ಬೋಟ್ ದುರಂತ ಸಂಭವಿಸಿದೆ. ಮೀನುಗಾರಿಕೆಗೆ ತೆರಳಿದ ಮೀನುಗಾರಿಕಾ ಬೋಟ್‌ ಮುಳುಗಿ ಓರ್ವ ನಾಪತ್ತೆಯಾಗಿರುವ ಘಟನೆ ಸೋಮವಾರ ನಡೆದಿದೆ.

ಉಳ್ಳಾಲ ಹೊಯ್ಗೆ ನಿವಾಸಿ ಆರ್ಥರ್ ಸುನಿಲ್ ಕುವೆಲ್ಲೋ(50) ನಾಪತ್ತೆಯಾದವರು. ಆರ್ಥರ್ ಸುನಿಲ್ ಕುವೆಲ್ಲೋ ಅವರು ಸೆ.6ರಂದು ಪರ್ಷಿಯನ್ ಬೋಟ್‌‌‌ನಲ್ಲಿ ಮೀನುಗಾರಿಕೆಗೆ ತೆರಳಿದ್ದರು. ಆಳಸಮುದ್ರ ಮೀನುಗಾರಿಕೆ ನಡೆಸುವ ಸಂದರ್ಭ ಬೋಟ್ ಮಗುಚಿಬಿದ್ದು ನಾಪತ್ತೆಯಾಗಿದ್ದಾರೆ.
ಮೀನುಗಾರಿಕಾ ಬೋಟ್ ಮುಳುಗಿ ಮೀನುಗಾರ ನಾಪತ್ತೆ

Facebook Comments

comments