DAKSHINA KANNADA
ಉಳ್ಳಾಲ – ಮುಳುಗಿದ ಹಡಗಿನಿಂದ ತೈಲಸೋರಿಕೆ – ಮೀನುಗಾರಿಕೆ ನಿಷೇಧ

ಮಂಗಳೂರು ಜೂನ್ 29: ಇತ್ತೀಚೆಗೆ ಉಳ್ಳಾಲ ಬಟ್ಟಪ್ಪಾಡಿ ಸಮೀಪ ಸಮುದ್ರದಲ್ಲಿ ಮುಳುಗಡೆಯಾ ಹಡಗಿನಿಂದ ಸಣ್ಣ ಪ್ರಮಾಣದ ತೈಲ ಸೊರಿಕೆ ಹಿನ್ನಲೆ ಉಳ್ಳಾಲ ವಲಯ ಸುತ್ತಮುತ್ತಲಿನ ಸಮುದ್ರದಲ್ಲಿ ಮೀನುಗಾರಿಕೆಯನ್ನು ನಿಷೇಧಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.
ಉಳ್ಳಾಲ ವಲಯದ ಬಟ್ಟಪ್ಪಾಡಿ ಹತ್ತಿರದ ಸಮುದ್ರದಲ್ಲಿ ಪ್ರಿನ್ಸೆಸ್ ಮಿರಾಲ್ ಹೆಸರಿನ ಸರಕು ಸಾಗಾಟದ ಹಡಗು ಮುಳುಗಡೆಯಾಗಿದ್ದು, ಹಡಗಿನ ಡರ್ಟಿ ವಾಟರ್ ಟ್ಯಾಂಕಿನಿಂದ ಸಣ್ಣ ಪ್ರಮಾಣದಲ್ಲಿ ತೈಲ ಸೋರಿಕೆಯಾಗುತ್ತಿದೆ. ಈ ಹಿನ್ನಲೆ ಜಿಲ್ಲಾಡಳಿತ ಈ ಕ್ರಮ ಕೈಗೊಂಡಿದೆ. ಇನ್ನು ಜಿಲ್ಲಾಡಳಿತದ ಆದೇಶ ಉಲ್ಲಂಘಿಸಿ ಯಾರಾದರೂ ಮೀನುಗಾರಿಕೆ ನಡೆಸಿದರೆ ಅವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮೀನುಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.
