LATEST NEWS
ಫೆಂಗಲ್ ಚಂಡಮಾರುತ ಅಬ್ಬರಕ್ಕೆ – ಕೊಚ್ಚಿ ಹೋದ ಮೀನುಗಾರಿಕಾ ಬೋಟ್‌ನ ಬಲೆ ಬೀಸುವ ದೋಣಿಗಳು
ಮಂಗಳೂರು ಡಿಸೆಂಬರ್ 03: ಬಂಗಾಳಕೊಲ್ಲಿಯಲ್ಲಿ ಎದ್ದ ಚಂಡಮಾರುತ ಫೆಂಗಲ್ ಕರ್ನಾಟಕದ ಕರಾವಳಿಯಲ್ಲೂ ಅವಾಂತರ ಸೃಷ್ಠಿಸಿದೆ. ಚಂಡಮಾರುತದ ಎಚ್ಚರಿಕೆ ಹಿನ್ನಲೆ ಬಂದರಿನಲ್ಲಿ ಲಂಗರು ಹಾಕಿದ್ದ ಮೀನುಗಾರಿಕಾ ಬೋಟ್ ಗಳ ಬಲೆ ಬೀಸುವ ದೋಣಿಗಳು ಗಾಳಿ ಅಬ್ಬರಕ್ಕೆ ಕೋಚ್ಚಿ ಹೋದ ಘಟನೆ ನಡೆದಿದೆ.
ಮಂಗಳೂರಿನ ಬಂದರಿನಲ್ಲಿ ಲಂಗರು ಹಾಕಿದ್ದ ಮೀನುಗಾರಿಕಾ ಬೋಟ್ ಗಳಲ್ಲಿರುವ ಬಲೆ ಬೀಸುವ ದೋಣಿಗಳು ಗಾಳಿ ಅಬ್ಬರಕ್ಕೆ ಕೊಚ್ಚಿ ಹೋಗಿವೆ. ನಿನ್ನೆ ರಾತ್ರಿ ವೇಳೆ ಸುರಿದ ಭಾರೀ ಮಳೆ ಹಾಗೂ ಹರಿದು ಬಂದ ನೀರಿನಿಂದಾಗಿ ದೋಣಿಗಳು ಕೊಚ್ಚಿ ಹೋಗಿವೆ ಎಂದು ಹೇಳಲಾಗಿದೆ. ಸುಮಾರು ಹತ್ತು ದೋಣಿಗಳಿಗೆ ಹಾನಿಯಾಗಿದೆ ಎಂದು ತಿಳಿದು ಬಂದಿದೆ. ರಾತ್ರಿ ದೋಣಿಗಳನ್ನು ಮೀನುಗಾರರು ಮತ್ತೆ ಎಳೆದು ತಂದಿದ್ದಾರೆ.