LATEST NEWS
ಆಸಾನಿ ಚಂಡಮಾರುತ ಪರಿಣಾಮ – ಮೀನುಗಾರರ ಬಲೆಗೆ ಟನ್ ಗಟ್ಟಲೆ ಭೂತಾಯಿ ಮೀನು

ಉಡುಪಿ ಮೇ 14: ಉಡುಪಿ ಆಸಾನಿ ಚಂಡ ಮಾರುತದ ಎಫೆಕ್ಟ್ ಗೆ ಕರಾವಳಿಯ ಸಮುದ್ರದಲ್ಲಿ ರಾಶಿ ರಾಶಿ ಭೂತಾಯಿ ಮೀನುಗಳ ಮೀನುಗಾರರ ಬಲೆಗೆ ಬಿದ್ದಿದೆ.
ಕೈಪುಂಜಾಲನ ಓಂ ಸಾಗರ್ ಜೋಡು ದೋಣಿಯ ಮೀನುಗಾರರು ಹಾಕಿದ ಬಲೆಗೆ 30 ಟನ್‌ಗೂ ಅಧಿಕ ಭೂತಾಯಿ ಮೀನು ಬಿದ್ದಿದ್ದು 30 ಲಕ್ಷ ರೂಪಾಯಿ ಮೌಲ್ಯ ಅಂದಾಜಿಸಲಾಗಿದೆ.

ಅಸಾನಿ ಚಂಡ ಮಾರುತದಿಂದ ಕಡಲು ಪ್ರಕ್ಷ್ಯುಬ್ದ ಗೊಂಡಿರುವ ಕಾರಣ ಗಂಗೊಳ್ಳಿಯಿಂದ ಮಂಗಳೂರಿನ ಕರಾವಳಿಯವರೆಗೆ ಹೇರಳವಾಗಿ ಭೂತಾಯಿ ಮೀನು ಕಾಣಿಸಿಕೊಳ್ಳುತ್ತಿವೆ ಎಂದು ಮೀನುಗಾರರು ತಿಳಿಸಿದ್ದಾರೆ.,