DAKSHINA KANNADA
ಬೆಂಕಿಗಾಹುತಿಯಾದ ಗೃಹೋಪಯೋಗಿ ಉಪಕರಣಗಳ ಮಳಿಗೆ – 25 ಲಕ್ಷಕ್ಕೂ ಅಧಿಕ ನಷ್ಟ
ಪುತ್ತೂರು ಎಪ್ರಿಲ್ 07: ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಗೆ ಗೃಹೋಪಯೋಗಿ ಉಪಕರಣಗಳ ಮಳಿಗೆಯಲ್ಲಿ ಸುಟ್ಟು ಭಸ್ಮವಾದ ಘಟನೆ ಪುತ್ತೂರಿನ ಬೈಪಾಸ್ ನಲ್ಲಿದೆ.
ಎರ್ ಕಂಡೀಶನ್ ಮತ್ತು ರೆಫ್ರಿಜಿರೇಟರ್ ಇರುವ ಮಳಿಗೆ ಇದಾಗಿದ್ದು, ಶಾರ್ಟ್ ಸರ್ಕೂಟ್ ನಿಂದಾಗಿ ಬೆಂಕಿ ಹತ್ತಿಕೊಂಡಿದೆ ಎಂದು ಹೇಳಲಾಗಿದೆ. ಸುಮಾರು 25 ಲಕ್ಷಕ್ಕೂ ಹೆಚ್ಚು ಮೌಲ್ಯದ ಉಪಕರಣಗಳು ನಾಶವಾಗಿದ್ದು. ಅಗ್ನಿಶಾಮಕ ದಳದಿಂದ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದೆ.