LATEST NEWS
ಬೆಂಕಿ ಆಕಸ್ಮಿಕಕ್ಕೆ ಫಾಸ್ಟ್ ಫುಡ್ ಅಂಗಡಿ ಸುಟ್ಟು ಭಸ್ಮ..ಸ್ನೇಹಿತೆಯರ ಬದುಕನ್ನೆ ಸುಟ್ಟ ಬೆಂಕಿ

ಮಂಗಳೂರು ಫೆಬ್ರವರಿ 11: ಬೆಂಕಿ ಆಕಸ್ಮಿಕಕ್ಕೆ ಫಾಸ್ಟಪುಡ್ ಅಂಗಡಿ ಸುಟ್ಟು ಕರಕಲಾದ ಘಟನೆ ಕುಂಪಲ ಬಾಲಕೃಷ್ಣ ಮಂದಿರದ ಬಳಿ ನಡೆದಿದೆ.
ಕುಂಪಲ ಆಶ್ರಯ ಕಾಲನಿಯ ನಿವಾಸಿಗಳು ಸ್ನೇಹಿತೆಯರಾದ ಮೋಹಿನಿ ಮತ್ತು ದೀಕ್ಷಿತ ಎಂಬವರಿಗೆ ಸೇರಿದ ಫಾಸ್ಟ್ ಪುಡ್ ಅಂಗಡಿ ಇದಾಗಿದ್ದು. ಶಾರ್ಟ್ ಸರ್ಕ್ಯುಟ್ ನಿಂದ ಅಂಗಡಿಗೆ ಬೆಂಕಿ ತಗುಲಿರುವುದಾಗಿ ಶಂಕಿಸಲಾಗಿದೆ. ಫಾಸ್ಟ್ ಫುಡ್ ವ್ಯಾಪಾರದಲ್ಲೇ ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದ ಸ್ನೇಹಿತೆಯರೀಗ ಬೀದಿಗೆ ಬಿದ್ದಿದ್ದಾರೆ. ಅನ್ನದ ಬಟ್ಟಲಿಗೆ ಬೆಂಕಿ ಬಿದ್ದುದನ್ನ ಕಂಡ ಮೋಹಿನಿ ಮತ್ತು ದೀಕ್ಷಾ ಕಣ್ಣೀರಿಟ್ಟಿದ್ದಾರೆ.

ಬೆಂಕಿ ಅನಾಹುತದಲ್ಲಿ ಅಂಗಡಿಯೊಳಗಿದ್ದ ರೆಫ್ರಿಜರೇಟರಿನ ಗ್ಯಾಸ್ ಸಿಲಿಂಡರ್ ಸಿಡಿದಿದ್ದು ಕಟ್ಟಡದ ಗೋಡೆ ಬಿರುಕು ಬಿಟ್ಟಿದೆ. ಸ್ಥಳೀಯರೇ ಸೇರಿ ತಕ್ಷಣ ಬೆಂಕಿಯನ್ನ ಆರಿಸಿದ್ದಾರೆ. ಸ್ಥಳಕ್ಕೆ ಬಂದ ಅಗ್ನಿ ಶಾಮಕದಳದ ಸಿಬ್ಬಂದಿ ಬೆಂಕಿ ವ್ಯಾಪಿಸದಂತೆ ಕಾರ್ಯಾಚರಣೆ ನಡೆಸಿದ್ದಾರೆ. ಘಟನೆಯಿಂದ ಸುಮಾರು ಒಂದು ಲಕ್ಷಕ್ಕೂ ಅಧಿಕ ನಷ್ಟ ಸಂಭವಿಸಿದೆ. ಸೋಮೇಶ್ವರ ಪುರಸಭಾ ಅಧಿಕಾರಿಗಳು ಮತ್ತು ಉಳ್ಳಾಲ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.