LATEST NEWS
ಕೊಚ್ಚಿನ್ ಬೇಕರಿಯಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಅವಘಡ

ಮಂಗಳೂರು ಎಪ್ರಿಲ್ 29: ಪಾಂಡೇಶ್ವರ ಬಳಿ ಇರುವ ಕೊಚ್ಚಿನ್ ಬೇಕರಿಯಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಐದು ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿದೆ.
ನಗರದ ಪಾಂಡೇಶ್ವರ ಬಳಿಯ ಇರುವ ಕೊಚ್ಚಿನ್ ಬೇಕರಿಯಲ್ಲಿ ಈ ಅವಘಢ ಸಂಭವಿಸಿದೆ. ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ತಗುಲಿದೆ ಎನ್ನಲಾಗಿದೆ. ಅವಘಡದಿಂದ ಐದು ಲಕ್ಷಕ್ಕೂ ರೂ. ಅಧಿಕ ಮೊತ್ತದ ವಸ್ತು ಬೆಂಕಿಗೆ ಆಹುತಿಯಾಗಿದ್ದು, ಲಕ್ಷಾಂತರ ನಷ್ಟವಾಗಿದೆ ಎನ್ನಲಾಗಿದೆ. ಪಾಂಡೇಶ್ವರ ಅಗ್ನಿಶಾಮಕ ದಳದ ಸಿಬಂದಿಗಳು ಕಾರ್ಯಾಚರಣೆ ಬೆಂಕಿಯನ್ನು ನಂದಿಸಿದ್ದಾರೆ.
