LATEST NEWS
ಇಸ್ತ್ರೀ ಪೆಟ್ಟಿಗೆ ಬೆಡ್ ಮೇಲೆ ಇಟ್ಟ ವಿಧ್ಯಾರ್ಥಿನಿಯರು…ಅಪಾರ್ಟ್ ಮೆಂಟ್ ಮ್ಯಾನೆಜರ್ ನಿಂದ ತಪ್ಪಿದ ಬೆಂಕಿ ಅನಾಹುತ
ಉಳ್ಳಾಲ ಡಿಸೆಂಬರ್ 21: ಪ್ಲ್ಯಾಟ್ ಒಂದರಲ್ಲಿ ಬಟ್ಟೆಗಳಿಗೆ ಇಸ್ತ್ರೀ ಹಾಕಿದ ಬಳಿಕ ಇಸ್ತ್ರೀ ಪೆಟ್ಟಿಗೆಯನ್ನು ಬೆಡ್ ಮೇಲೆ ಆನ್ ಮಾಡಿ ವಿಧ್ಯಾರ್ಥಿನಿಯರು ಇಟ್ಟು ಹೋದ ಪರಿಣಾಮ ಬೆಂಕಿ ಅವಘಡ ಸಂಭವಿಸಿದ ಘಟನೆ ದೇರಳಕಟ್ಟೆಯಲ್ಲಿ ನಡೆದಿದೆ.
ದೇರಳಕಟ್ಟೆಯಲ್ಲಿರುವ 13 ಮಹಡಿಗಳ ಪ್ಲ್ಯಾಟ್ ಒಂದರಲ್ಲಿ ಈ ಘಟನೆ ನಡೆದಿದ್ದು, ಫ್ಲ್ಯಾಟ್‌ವೊಂದರ 202 ನಂಬರಿನ ರೂಮಿನಲ್ಲಿ ದಂತ ವೈದ್ಯಕೀಯ ಕಲಿಯುವ ಇಬ್ಬರು ವಿದ್ಯಾರ್ಥಿನಿಯರಿದ್ದು, ಡಿಸೆಂಬರ್ 2೦ ರ ಬೆಳಿಗ್ಗೆ ಕಾಲೇಜಿನಲ್ಲಿ ಕಾರ್ಯಾಗಾರವಿದೆಯೆಂದು ಬೇಗನೇ ತೆರಳಿದ್ದರು. ಆದರೆ ಆತುರದಲ್ಲಿ ಬಟ್ಟೆಗಳಿಗೆ ಇಸ್ತ್ರಿ ಹಾಕಿರುವ ವಿದ್ಯಾರ್ಥಿನಿಯರು, ಸ್ವಿಚ್ ಆಫ್ ಮಾಡಿದರೂ, ಇಸ್ತ್ರಿಪೆಟ್ಟಿಗೆಯನ್ನು ಮಲಗುವ ಬೆಡ್ ನಲ್ಲಿರಿಸಿ ಕಾಲೇಜಿಗೆ ತೆರಳಿದ್ದರು. ಆದರೆ ಬೆಳಗ್ಗಿನಿಂದ ಹೊಗೆಯ ವಾಸನೆ ಫ್ಲ್ಯಾಟ್ ತುಂಬಾ ಬರುತ್ತಿದ್ದು, ಮ್ಯಾನೇಜರ್ ಆಗಿರುವ ಕುತ್ತಾರು ನಿವಾಸಿ ಮಹಮ್ಮದ್ ಶಾಹಿದ್ ಶಫೀಕ್ ಹುಡುಕಲು ಆರಂಭಿಸಿದ್ದರು.
ಒಂದು ಗಂಟೆಯ ನಂತರ ರೂಮಿನಲ್ಲಿ ಹೊಗೆ ಬರುತ್ತಿರುವುದು ಗಮನಕ್ಕೆ ಬಂದಿದೆ. ಆದರೆ ರೂಮಿಗೆ ಬೀಗ ಹಾಕಿರುವುದರಿಂದ ತೆರೆಯಲು ಸಾಧ್ಯವಾಗದೆ, ವಿದ್ಯಾರ್ಥಿನಿಯರಿಗೆ ಮೊಬೈಲ್ ಮೂಲಕ ಸಂಪರ್ಕಿಸಿದ್ದಾರೆ. ರೂಮಿನಿಂದ ಹೊಗೆ ಬರುತ್ತಿರುವುದನ್ನು ತಿಳಿಸಿ ತಕ್ಷಣಕ್ಕೆ ವಾಪಸ್ಸು ಬರುವಂತೆ ಸೂಚಿಸಿದ್ದಾರೆ. ಇಬ್ಬರು ವಿದ್ಯಾರ್ಥಿನಿಯರು ತಕ್ಷಣ ಫ್ಲಾಟ್ ನತ್ತ ಆಗಮಿಸಿದ್ದು, ಬೀಗ ತೆರೆಯುವ ಸಂದರ್ಭ ರೂಮಿನೊಳಕ್ಕೆ ದಟ್ಟವಾದ ಹೊಗೆ ಆವರಿಸಿತ್ತು. ಧೈರ್ಯ ಮಾಡಿದ ಮ್ಯಾನೇಜರ್ ಶಫೀಕ್ ನೇರವಾಗಿ ಒಳನುಗ್ಗಿ ಕಿಟಕಿಯನ್ನು ತೆರೆದಿದ್ದಾರೆ. ತಕ್ಷಣ ಬೆಂಕಿ ಆವರಿಸಿದ ಬೆಡ್ ಅನ್ನು ಹೊರಗೆಸೆದು ಅವಘಢವನ್ನು ತಪ್ಪಿಸಿದ್ದಾರೆ.
ಫ್ಲ್ಯಾಟ್ ಪ್ರಬಂಧಕ ಶಾಹಿದ್ ಶಫೀಕ್ ಅವರು ಸ್ವಲ್ಪ ಹೊತ್ತು ತಡಮಾಡುತ್ತಿದ್ದರೂ ಬೆಂಕಿಯಿಡೀ ಪ್ಲಾಟ್‌ಗೆ ಆವರಿಸುವ ಸಂಭವವಿತ್ತು.