LATEST NEWS
ಸಂಸದೆ ಶೋಭಾ ಕರಂದ್ಲಾಜೆ ವಿರುದ್ದ ಕೇಸ್ ದಾಖಲು

ಸಂಸದೆ ಶೋಭಾ ಕರಂದ್ಲಾಜೆ ವಿರುದ್ದ ಕೇಸ್ ದಾಖಲು
ಹೊನ್ನಾವರ ಡಿಸೆಂಬರ್ 23: ಹೊನ್ನಾವರದ ಬಾಲಕಿಯೊಬ್ಬಳ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿದ್ದ ಸಂಸದೆ ಶೋಭಾ ಕರಂದ್ಲಾಜೆ ವಿರುದ್ದ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಹೊನ್ನಾವರದ 9ನೇ ತರಗತಿ ಬಾಲಕಿಯೊಬ್ಬಳ ಮೇಲೆ ಜಿಹಾದಿಗಳು ಅತ್ಯಾಚಾರಕ್ಕೆ ಪ್ರಯತ್ನಿಸಿ, ಕೊಲೆ ಮಾಡಲು ಯತ್ನಿಸಿದ್ದಾರೆ ಎಂದು ಟ್ವೀಟ್ ಮಾಡಿದ್ದರು. ಈ ಹಿನ್ನಲೆಯಲ್ಲಿ ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಪಟ್ಟಣದ ಪೊಲೀಸರು ಶುಕ್ರವಾರ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.
ಡಿಸೆಂಬರ್ 14ರಂದು ಮಾಗೋಡಿನ ಕಾವ್ಯಾ ನಾಯ್ಕ ಎಂಬ ಬಾಲಕಿ ತನ್ನ ಕೈಗೆ ಲಿಂಬೆ ಗಿಡದ ಮುಳ್ಳಿನಿಂದ ಗೀರಿ ಗಾಯಮಾಡಿಕೊಂಡಿದ್ದಳು. ಈ ವಿಚಾರವಾಗಿ ಪಟ್ಟಣದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿತ್ತು.

ಬಾಲಕಿ ನೀಡಿದ ದೂರಿನಲ್ಲಿ ಯಾವುದೇ ಧರ್ಮದ ವಿರುದ್ಧ ಆರೋಪ ಮಾಡಿಲ್ಲ. ಕರಂದ್ಲಾಜೆಯವರು ಶಾಂತಿ ಕದಡುವ ಉದ್ದೇಶದಿಂದ ಇಂಥ ಟ್ವೀಟ್ ಮಾಡಿದ್ದಾರೆ. ಇದರಿಂದ ಪಟ್ಟಣದಲ್ಲಿ ಕೋಮು ಸೌಹಾರ್ದ ಹದಗೆಟ್ಟಿದೆ ಎಂದು ಉಲ್ಲೇಖಿಸಿ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.