Connect with us

FILM

ಕನ್ಯತ್ವ ಪರೀಕ್ಷೆಗೆ ಒತ್ತಾಯಿಸಿದ್ದ ನಟ ನಿರ್ಮಾಪಕನಿಗೆ ನಟಿಯಿಂದ ಚಪ್ಪಲಿ ಪೂಜೆ

ಕನ್ಯತ್ವ ಪರೀಕ್ಷೆಗೆ ಒತ್ತಾಯಿಸಿದ್ದ ನಟ ನಿರ್ಮಾಪಕನಿಗೆ ನಟಿಯಿಂದ ಚಪ್ಪಲಿ ಪೂಜೆ

ಬೆಂಗಳೂರು,ಡಿಸೆಂಬರ್ 31: ಕನ್ಯತ್ವ ಪರೀಕ್ಷೆಗೆ ಒತ್ತಾಯಿಸಿದ್ದ ನಟ ನಿರ್ಮಾಪಕನಿಗೆ ನಟಿಯಿಂದ ಪೋಲಿಸರ ಸಮುಖದಲ್ಲೇ ಚಪ್ಪಲಿ ಪೂಜೆ ನಡೆಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

“ನಿರ್ದೇಶಕನ ಜತೆ ನೀನು ಅಕ್ರಮ ಸಂಬಂಧ ಹೊಂದಿದ್ದು, ನಿನ್ನ ಕನ್ಯತ್ವ ಪರೀಕ್ಷೆ ಮಾಡಿಸುತ್ತೇನೆ’ ಎಂದು ಅಸಭ್ಯವಾಗಿ ವರ್ತಿಸಿದ ಪೋಷಕ ನಟ ಹಾಗೂ ಸಹ ನಿರ್ಮಾಪಕನ ವಿರುದ್ಧ ಅದೇ ಚಿತ್ರದ ನಟಿ ದೂರು ನೀಡಿದ್ದಾರೆ.

ದೂರಿನ ಹಿನ್ನೆಲೆಯಲ್ಲಿ ಮಾಗಡಿ ರಸ್ತೆ ಪೊಲೀಸರು ಆರೋಪಿ ರಾಜಶೇಖರನನ್ನು ಬಂಧಿಸಿದ್ದಾರೆ. ಈತನ ವಿರುದ್ಧ ಸಹನಟಿ ಕೀರ್ತಿ ಭಟ್‌ ಪೋಲಿಸರಿಗೆ ದೂರು ನೀಡಿದ್ದರು.

ಕಿಶೋರ್‌ ಸಿ. ನಾಯಕ್‌ ನಿರ್ದೇಶಿಸುತ್ತಿರುವ “ಐಸ್‌ ಮಹಲ್‌’ ಹೆಸರಿನ ಸಿನಿಮಾದಲ್ಲಿ ಕೀರ್ತಿಭಟ್‌ ನಾಯಕಿ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ಇದೇ ಚಿತ್ರದ ಸಹ ನಿರ್ಮಾಪಕರಾಗಿರುವ ರಾಜಶೇಖರ್‌, ನಾಯಕಿಯ ತಂದೆ ಪಾತ್ರದಲ್ಲಿ ನಟಿಸಿದ್ದಾರೆ.

ಕಳೆದ ಜನವರಿಯಿಂದ 11 ತಿಂಗಳ ಕಾಲ ಚಿತ್ರದ ಚಿತ್ರೀಕರಣ ನಡೆದಿದೆ.

ಈ ನಡುವೆ ಡಿ.25ರಂದು ನಿರ್ದೇಶಕ ಕಿಶೋರ್‌ ಸಿ.ನಾಯಕ್‌ಗೆ ಕರೆ ಮಾಡಿದ ಆರೋಪಿ ರಾಜಶೇಖರ್‌, “ನಾಯಕಿ ಕೀರ್ತಿ ಜತೆ ನಿನಗೆ ಅಕ್ರಮ ಸಂಬಂಧವಿದೆ.

ಶೂಟಿಂಗ್‌ ಸಮಯದಲ್ಲಿ ಇಬ್ಬರೂ ಜತೆಯಲ್ಲೇ ಮಲಗಿದ್ದೀರಿ. ಆಕೆಯ ಕನ್ಯತ್ವ ಪರೀಕ್ಷೆ ಮಾಡಿಸುತ್ತೇನೆ’ ಎಂದು ಹೇಳಿದ್ದಲ್ಲದೆ, ಮೊಬೈಲಿಗೆ ಸಂದೇಶ ಕೂಡ ಕಳುಹಿಸಿದ್ದರು.

ಈ ವಿಚಾರವನ್ನು ಕಿಶೋರ್‌ ಅವರು ನಟಿ ಕೀರ್ತಿ ಭಟ್ ಗೆ ತಿಳಿಸಿದ್ದರು.

ಈ ಸಂಬಂಧ ರಾಜಶೇಖರ್‌ ವಿರುದ್ಧ ಲೈಂಗಿಕ ಕಿರುಕುಳ, ಮಹಿಳೆಯ ಘನತೆಗೆ ಧಕ್ಕೆ ತಂದ ಆರೋಪ ಮತ್ತು ಪ್ರಾಣ ಬೆದರಿಕೆ ಒಡ್ಡಿದ ಆರೋಪದಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಈ ವೇಳೆ ಠಾಣೆಯಲ್ಲೇ ರಾಜಶೇಖರ್ ವಿರುದ್ಧ ಸಿಡಿದೆದಿದ್ದ ನಟಿ ಪೊಲೀಸರ ಎದುರೇ ನಟ ರಾಜಶೇಖರ್ ಅವರಿಗೆ ತಾವು ಧರಿಸಿದ್ದ ಶೂನಿಂದ ಥಳಿಸಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *