DAKSHINA KANNADA
ಅನುಮತಿ ಇಲ್ಲದೆ ವಿಜಯೋತ್ಸವ, ಪುತ್ತಿಲ ಪರಿವಾರದ ವಿರುದ್ಧ ಪ್ರಕರಣ ದಾಖಲು

ಪುತ್ತೂರು, ಜುಲೈ 27: ಅನುಮತಿ ಇಲ್ಲದೆ ವಿಜಯೋತ್ಸವ ಮಾಡಿದ್ದಕ್ಕಾಗಿ ಪುತ್ತಿಲ ಪರಿವಾರ ಸಂಘಟನೆ ವಿರುದ್ಧ ಪ್ರಕರಣ ದಾಖಲಾದ ಘಟನೆ ನಡೆದಿದೆ.
ಆರ್ಯಾಪು ಗ್ರಾ.ಪಂ ಉಪ ಚುನಾವಣೆಯಲ್ಲಿ ಪುತ್ತಿಲ ಪರಿವಾರ ಜಯಗಳಿಸಿದ ಹಿನ್ನಲೆಯಲ್ಲಿ ವಿಜಯೋತ್ಸವ ನಡೆಸಲಾಗಿದ್ದು, ಮಿನಿ ವಿಧಾನಸೌಧದಿಂದ ಮುಕ್ರಂಪಾಡಿವರೆಗೆ ಡಿಜೆ ಮೆರವಣಿಗೆ ನಡೆಸಿದ್ದ ಪುತ್ತಿಲ ಪರಿವಾರ ವಿರುದ್ದ ಪುತ್ತೂರು ನಗರ ಪೋಲೀಸ್ ಠಾಣೆಯಲ್ಲಿ ಶಾಂತಿಭಂಗದ ಪ್ರಕರಣ ದಾಖಲಿಸಲಾಗಿದೆ.
