DAKSHINA KANNADA
ಟ್ರಾಫಿಕ್ ಜಾಮ್ ಗೆ ಕಾರಣವಾಯಿತು ಬಸ್ ಸಿಬ್ಬಂದಿಗಳ ಕಿರಿಕ್
ಟ್ರಾಫಿಕ್ ಜಾಮ್ ಗೆ ಕಾರಣವಾಯಿತು ಬಸ್ ಸಿಬ್ಬಂದಿಗಳ ಕಿರಿಕ್
ಮಂಗಳೂರು,ಅಕ್ಟೋಬರ್ 21: ಟೈಮಿಂಗ್ ವಿಚಾರ ಹಾಗೂ ಸೈಡ್ ಕೊಡುವ ವಿಚಾರದಲ್ಲಿ ಎರಡು ಬಸ್ ಸಿಬ್ಬಂದಿಗಳು ಪರಸ್ಪರ ಕಚ್ಚಾಡಿಕೊಂಡ ಘಟನೆ ಮಂಗಳೂರು ನಗರದ ಬಲ್ಮಠ ಸಮೀಪ ಇಂದು ಬೆಳಿಗ್ಗೆ ನಡೆದಿದೆ. ಕೇರಳ ಸರಕಾರಿ ಬಸ್ ಹಾಗೂ ಖಾಸಗಿ ಬಸ್ ಸಿಬ್ಬಂದಿಗಳು ತಮ್ಮ ತಮ್ಮ ಬಸ್ ಗಳನ್ನು ರಸ್ತೆಯಲ್ಲೇ ನಿಲ್ಲಿಸಿ ಪರಸ್ಪರ ಕಚ್ಚಾಡಿಕೊಂಡಿದ್ದಾರೆ. ರಸ್ತೆಯಲ್ಲೇ ನಿಲ್ಲಿಸಿ ಈ ಎರಡು ಬಸ್ ಸಿಬ್ಬಂದಿಗಳ ಕಿರಿಕ್ ನಿಂದಾಗಿ ಸ್ಥಳದಲ್ಲಿ ಟ್ರಾಫಿಕ್ ಜಾಮ್ ಕೂಡಾ ಸಂಭವಿಸಿತ್ತು. ಟ್ರಾಫಿಕ್ ಜಾಮ್ ನಿಂದ ಉಳಿದ ವಾಹನ ಸವಾರರು ತಮ್ಮ ಮೇಲೆ ರೇಗಾಡಬಹುದು ಎನ್ನುವ ಸೂಚನೆ ದೊರೆತ ಎರಡೂ ಬಸ್ ನ ಸಿಬ್ಬಂದಿಗಳು ತಮ್ಮ ತಮ್ಮಷ್ಟಕ್ಕೇ ಬಸ್ ಗಳನ್ನು ರಸ್ತೆಯಿಂದ ತೆರವುಗೊಳಿಸಿದ್ದಾರೆ.
You must be logged in to post a comment Login