LATEST NEWS
ಚಲಿಸುತ್ತಿದ್ದ ರೈಲಿನಡಿ ಮಲಗಿ ಜೀವ ಬಿಟ್ಟ ಅಪ್ಪ ಮಗ- ಸಿಸಿಟಿವಿ ವಿಡಿಯೋ ವೈರಲ್
ಮುಂಬೈ, ಜುಲೈ.10: ಅಪ್ಪಮಗ ಚಲಿಸುತ್ತಿದ್ದ ರೈಲಿನಡಿ ಕೈಕೈ ಹಿಡಿದು ಮಲಗಿ ಸಾವನಪ್ಪಿದ ಘಟನೆ ಮುಂಬೈನಲ್ಲಿ ನಡೆದಿದ್ದು, ಘಟನೆಯ ವಿಡಿಯೋ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು ಈ ದೃಶ್ಯದ ವಿಡಿಯೋ ಎದೆ ನಡುಗಿಸುವಂತಿದೆ.
ಸೋಮವಾರ ಬೆಳಗ್ಗೆ 11:30 ರ ಸುಮಾರಿಗೆ ಮೀರಾ ಬಯಾಂದರ್ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಮೃತರನ್ನು ಹರೇಶ್ ಮೆಹತಾ ಹಾಗೂ ಅವರ ಮಗ ಜಯ್ ಮೆಹತಾ ಎಂದು ಗುರುತಿಸಲಾಗಿದೆ.
ಸಿಸಿಟಿವಿ ವಿಡಿಯೋದಲ್ಲಿ ಅಪ್ಪಮಗ ಇಬ್ಬರು ಪ್ಲ್ಯಾಟ್ ಪಾರಂ ನಲ್ಲಿ ಆರಾಮಾಗಿ ನಡೆದುಕೊಂಡು ಹೋಗುತ್ತಿದ್ದು, ಬಳಿಕ ರೈಲಿನ ಟ್ರ್ಯಾಕ್ ಮೇಲೆ ಇಳಿದಿದ್ದಾರೆ. ಈ ವೇಳೆ ಬರುತ್ತಿದ್ದ ಲೋಕಲ್ ರೈಲು ಹತ್ತಿರ ಬರುವವರೆಗೂ ಕಾದ ಇಬ್ಬರು ಬಳಿಕ ಕೈ ಕೈ ಹಿಡಿದು ರೈಲಿನ ಟ್ರ್ಯಾಕ್ ಕೆಳಗೆ ಮಲಗಿದ್ದಾರೆ. ಈ ವೇಳೆ ರೈಲು ಇಬ್ಬರ ಮೇಲೆ ಹರಿದಿದ್ದು, ಸ್ಥಳದಲ್ಲೇ ಸಾವನಪ್ಪಿದ್ದಾರೆ.
ಹರೇಶ್ ಮೆಹತಾ ಪತ್ನಿ ಕೋವಿಡ್ ಸಂದರ್ಭದಲ್ಲಿ ಮೃತಪಟ್ಟಿದ್ದರು ಎನ್ನಲಾಗಿದ್ದು, ಕಳೆದ ವರ್ಷವಷ್ಟೇ ಅವರ ಮಗ ಜೈ ಮೆಹತಾಗೆ ವಿವಾಹವಾಗಿತ್ತು. ಯಾವ ಕಾರಣಕ್ಕೆ ಅಪ್ಪ – ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ಬಹಿರಂಗವಾಗಿಲ್ಲ. ಆದರೆ ಮನೆಯಲ್ಲಿ ಬರೆದಿಟ್ಟಿದ್ದ ಡೆತ್ ನೋಟ್ ನಲ್ಲಿ ನಮ್ಮ ಸಾವಿಗೆ ಯಾರೂ ಕಾರಣರಲ್ಲ ಎಂದು ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.