Connect with us

LATEST NEWS

ಲವ್ ಜಿಹಾದ್ ಗೆ ಬಲಿಯಾದ ನನ್ನ ಮಗಳನ್ನು ಮತ್ತೆ ನನಗೆ ಮರಳಿ ಕೊಡಿಸಿ ಅಂತ ಯುವತಿಯ ತಂದೆ ಕಣ್ಣೀರು

ಮಂಗಳೂರು ಜುಲೈ 11: ಕ್ರಿಮಿನಲ್ ಹಿನ್ನಲೆಯುಳ್ಳ ಮುಸ್ಲಿಂ ಯುವಕನ ಜೊತೆ ತೆರಳಿದ್ದ ನನ್ನ ಮಗಳನ್ನು ಆತನಿಂದ ರಕ್ಷಿಸುವಂತೆ ಮಾಧ್ಯಮ ಪ್ರತಿನಿಧಿಗಳ ಮುಂದೆ ಯುವತಿಯ ತಂದೆ ಕಣ್ಣೀರು ಹಾಕಿದ ಘಟನೆ ನಡೆದಿದೆ. ಮುಹಮ್ಮದ್‌ ಅಶ್ಫಾಕ್‌ ನಿಂದ ಯುವತಿಯ‌ ಅಪಹರಣ ಪ್ರಕರಣಕ್ಕೆ‌ ಸಂಬಂಧಿಸಿದಂತೆ ಯುವತಿಯ ತಂದೆ ವಿನೋದ್ ಕುಮಾರ್ ಅವರು ಮಾಧ್ಯಮದವರ ಜತೆ ಮಾತನಾಡಿ, ನಾನು ಅಲ್ಲಿನ ಜಮಾತ್ ಹೋಗಿ, ನನ್ನ ಮಗಳನ್ನು ಆತನಿಂದ ರಕ್ಷಿಸಿ ಕೊಡುವಂತೆ ಮನವಿ ಮಾಡುತ್ತೇನೆ ಎಂದು ಕಣ್ಣೀರು ಹಾಕಿದ್ದಾರೆ.


ಈ ಕುರಿತಂತೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು ನಗರದ ಖಾಸಗಿ ಕಾಲೇಜಿನಲ್ಲಿ ಬಿಸಿಎ ವ್ಯಾಸಂಗ ಮಾಡುತ್ತಿದ್ದ ಅವಳಿಗೆ ಅಶ್ಪಾಕ್ ಜೊತೆ ಲವ್ ಇರುವುದು ಗೊತ್ತಾಗಿತ್ತು. ಬಳಿಕ ಆಕೆಗೆ ಬುದ್ದಿ ಹೇಳಿ ಉಳ್ಳಾಲದ‌ ಸಂಬಂಧಿಕರ ಮನೆಗೆ ಕಳುಹಿಸಿದ್ದೆವು. ಅದರೆ ಅತ ಅಲ್ಲಿಗೂ ಬಂದು ಜೂನ್ 30 ರಂದು ಆಕೆಯನ್ನು ಅಪಹರಣ ಮಾಡಿದ್ದಾನೆ. ಮಗಳನ್ನು ಕರೆತರಲು ಸಾಕಷ್ಟು ಪ್ರಯತ್ನ ಮಾಡಿದರೂ ಸಾಧ್ಯವಾಗಿಲ್ಲ ಎಂದರು. ಆಶ್ಪಾಕ್ ನನ್ನ ಮಗನಿಗೆ‌ ‌ಕರೆ ಮಾಡಿ ಮಗಳನ್ನು ಕರೆದು ಕೊಂಡು ಓಡಿ ಹೋಗಿರುವುದಾಗಿ ಹೇಳಿದ್ದಾನೆ.‌ ಊರವರು ಹೇಳುವ ಪ್ರಕಾರ ಆತನಿಗೆ ಈಗಾಗಲೇ ಎರಡು ಮದುವೆಯಾಗಿದೆ. ಆತನ‌ ಮೇಲೆ ಹದಿನಾರಕ್ಕೂ ಹೆಚ್ಚು‌ ಕೇಸ್ ಗಳಿವೆ. ಪೊಲೀಸರು ಆತನನ್ನು ಬಂಧಿಸಿ, ಕಠಿನ ಕ್ರಮ‌ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

 

ಈ ಪ್ರಕರಣದಲ್ಲಿ ಪಾಂಡೇಶ್ವರ ಪೊಲೀಸರು ಆರೋಪಿ ಮಹಮ್ಮದ್ ಅಶ್ಫಾಕ್ ಮತ್ತು ಯುವತಿಯನ್ನು ಕಾಸರಗೋಡಿನಲ್ಲಿ ಪತ್ತೆ ಹಚ್ಚಿದ್ದಾರೆ. ಅದೇ ಯುವಕನನ್ನು ಮದುವೆಯಾಗುತ್ತೇನೆಂದು ಹೇಳುತ್ತಿದ್ದ ಯುವತಿಯನ್ನು ಪೊಲೀಸರು ಮಂಗಳೂರಿಗೆ ಕರೆತಂದು ಮುಡಿಪುವಿನ ಪ್ರಜ್ಞಾ ಸಲಹಾ ಕೇಂದ್ರದಲ್ಲಿ ಇಟ್ಟಿದ್ದಾರೆ. ತನ್ನ ಸ್ವಇಚ್ಛೆಯಿಂದ ಹೋಗಿದ್ದಾಗಿ ಯುವತಿ ಹೇಳಿದ್ದರಿಂದ ಪೊಲೀಸರು ಆರೋಪಿ ಅಶ್ಫಾಕ್‌ನನ್ನು ಬಂಧಿಸದೆ ಬಿಟ್ಟಿದ್ದಾರೆ. ಆರೋಪಿ ಮಹಮ್ಮದ್ ಅಶ್ಫಾಕ್ ಕ್ರಿಮಿನಲ್ ಹಿನ್ನೆಲೆಯವನಾಗಿದ್ದು, ಆತನ ಮೇಲೆ ಕಾಸರಗೋಡು ನಗರದ ವಿವಿಧ ಠಾಣೆಗಳಲ್ಲಿ 15 ಪ್ರಕರಣಗಳು ದಾಖಲಾಗಿದೆ.
ಈ ಪ್ರಕರಣ ಕುರಿತಂತೆ ಈಗಾಗಲೇ ಹಿಂದೂ ಪರ ಸಂಘಟನೆಗಳು ಇದೊಂದು ಲವ್ ಜಿಹಾದ್ ಪ್ರಕರಣವಾಗಿದ್ದು, ಈ ಕುರಿತಂತೆ ಕಠಿಣ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿವೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *