LATEST NEWS
ಕೃಷಿ ಕಾಯ್ದೆ ಪರಿಷ್ಕೃತವಾಗಿ ಮತ್ತೆ ಮರುಮಂಡನೆ ಮಾಡುವ ಸಾಧ್ಯತೆ – ಸಚಿವ ಕೋಟ ಶ್ರೀನಿವಾಸ ಪೂಜಾರಿ
ಉಡುಪಿ ನವೆಂಬರ್ 19: ಪ್ರಧಾನಿ ನರೇಂದ್ರ ಮೋದಿ ವಿವಾದಿತ ಕೃಷಿ ಕಾಯ್ದೆಯನ್ನು ರದ್ದು ಪಡಿಸಲಾಗುವುದು ಎಂದು ಹೇಳಿದ್ದರೂ ಕೂಡ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತ್ರ ಮತ್ತೆ ಕೃಷಿ ಕಾಯ್ದೆಯನ್ನುಪರಿಷ್ಕರಿಸಿ ಮತ್ತೆ ಮರುಮಂಡನೆ ಮಾಡುವ ಸಾಧ್ಯತೆ ಇದೆ ಎಂದಿದ್ದಾರೆ.
ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಕೃಷಿ ಕಾಯ್ದೆ, ಪರಿಷ್ಕೃತವಾಗಿ ಮತ್ತೆ ಮರುಮಂಡನೆ ಮಾಡುವ ಸಾಧ್ಯತೆ ಇದೆ. ಈ ಬಗ್ಗೆ ಪೂರ್ಣ ಅಧ್ಯಯನ ಮಾಡಿದ ಬಳಿಕ ಪ್ರತಿಕ್ರಿಯೆ ನೀಡುತ್ತೇನೆ” ಎಂದಿದ್ದಾರೆ.
ಕೃಷಿಕರು, ಎಪಿಎಂಪಿ ಪರವಾಗಿ ಇದ್ದ ಕಾಯ್ದೆಯಾಗಿತ್ತು. ಕೃಷಿಕರಿಗೆ ಆರ್ಥಿಕ ಶಕ್ತಿ ಕೊಡಲು ಈ ಕಾಯ್ದೆಯನ್ನು ಮಾಡಲಾಗಿತ್ತು. ಇದು ಬಹುತೇಕ ರೈತರ ಹಿತಕ್ಕಾಗಿ ತಂದ ಕಾಯ್ದೆ. ಒಂದಷ್ಟು ಚರ್ಚೆಗಳು ಇರುವ ಹಿನ್ನೆಲೆ ಮರುಮಂಡನೆ ಮಾಡುವ ಸಾಧ್ಯತೆ ಇದೆ” ಎಂದು ತಿಳಿಸಿದ್ದಾರೆ.