FILM
ಕಾರ್ಯಕ್ರಮಕ್ಕೆ ತಡವಾಗಿ ಬಂದ ನಟಿ ಮೇಲೆ ಕಲ್ಲು ತೂರಾಟ ನಡೆಸಿದ ಫ್ಯಾನ್ಸ್..!

ನವದೆಹಲಿ: ಜನಪ್ರಿಯ ನಟಿ ಮತ್ತು ಗಾಯಕಿ ಅಕ್ಷರಾ ಸಿಂಗ್ ಅವರು ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಆದರೆ ಅಭಿಮಾನಿಗಳೇ ನಟಿ ವಿರುದ್ಧ ರೊಚ್ಚಿಗೆದ್ದು ಆಕ್ರೋಶ ವ್ಯಕ್ತಪಡಿಸಿದ ಘಟನೆ ಬಿಹಾರದಲ್ಲಿ ನಡೆದಿದೆ.
ಭೋಜ್‌ಪುರಿಯ ಖ್ಯಾತ ನಟಿ ಅಕ್ಷರಾ ಬಿಹಾರದ ಜೌರಂಗಾಬಾದ್ ಜಿಲ್ಲೆಯಲ್ಲಿ ಅಂಗಡಿಯೊಂದರ ಉದ್ಘಾಟನೆಗೆ ತೆರಳಿದ್ದರು. ಅಕ್ಷರಾ ಬರುತ್ತಿದ್ದಾರೆ ಎಂದು ತಿಳಿದ ಅಭಿಮಾನಿಗಳು ಭಾರಿ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಆದರೆ ಅವಳು ಬರಲು ಸ್ವಲ್ಪ ತಡವಾಯಿತು. ಮತ್ತು ಅವಳು ವೇದಿಕೆಯ ಮೇಲೆ ಬಂದು ಹಾಡನ್ನು ಹಾಡಿದಳು. ಇದೇ ವೇಳೆ ಅಭಿಮಾನಿಗಳ ನಡುವೆ ಮಾತಿನ ಚಕಮಕಿ ನಡೆದಿದೆ. ಅವರನ್ನು ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಿದರು. ಆದರೆ, ಜನರನ್ನು ನಿಯಂತ್ರಿಸಲಾಗದೆ ಪೊಲೀಸರು ಆಕೆಯನ್ನು ಅಲ್ಲಿಂದ ಕಳುಹಿಸಲು ಯತ್ನಿಸಿದ್ದಾರೆ. ಈ ಸಂದರ್ಭ ಅಭಿಮಾನಿಗಳು ತಿರುಗಿಬಿದ್ದಿದ್ದಾರೆ. ರೊಚಿಗೆದ್ದ ಅಭಿಮಾನಿಗಳು ನಟಿ ಹಾಗೂ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಕೊನೆಗೆ ಪೊಲೀಸರು ಮೈದಾನಕ್ಕೆ ನುಗ್ಗಿ ಲಾಠಿ ಚಾರ್ಜ್ ಮಾಡಬೇಕಾಯಿತು. ಈ ದಾಳಿಯಲ್ಲಿ ಕೆಲ ಅಭಿಮಾನಿಗಳು ಹಾಗೂ ಪೊಲೀಸರಿಗೆ ಗಾಯಗಳಾಗಿವೆ. ಆಕೆ ತಡವಾಗಿ ಬಂದಿದ್ದರಿಂದ ಅಭಿಮಾನಿಗಳು ತಾಳ್ಮೆ ಕಳೆದುಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
