LATEST NEWS
ಮಂಗಳೂರು ಭಾರಿ ಪ್ರಮಾಣದಲ್ಲಿ ನಕಲಿ ಮತದಾರರ ಪತ್ತೆ
ಮಂಗಳೂರು ಭಾರಿ ಪ್ರಮಾಣದಲ್ಲಿ ನಕಲಿ ಮತದಾರರ ಪತ್ತೆ
ಮಂಗಳೂರು ಎಪ್ರಿಲ್ 17: ದಕ್ಷಿಣಕನ್ನಡ ಲೋಕಸಭಾ ಕ್ಷೇತ್ರಕ್ಕೆ ಮತದಾನಕ್ಕೆ ಕೆಲವೆ ಗಂಟೆಗಳಿರುವತೆ ಮಂಗಳೂರಿನಲ್ಲಿ ದೊಡ್ಡ ಪ್ರಮಾಣದಲ್ಲಿ ನಕಲಿ ಮತದಾರರ ವಿವರಗಳು ಬಹಿರಂಗಗೊಂಡಿದ್ದು, ಈ ಕುರಿತಂತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮಂಗಳೂರು ಕ್ಷೇತ್ರದಲ್ಲಿ ದೊಡ್ಡ ಪ್ರಮಾಣದಲ್ಲಿ ನಕಲಿ ಮತದಾರರ ವಿವರ ಬಹಿರಂಗವಾಗಿದೆ. ಮಣ್ಣಗುಡ್ಡೆ ಹಾಗೂ ಅಳಪೆ ಪ್ರದೇಶದಲ್ಲಿ ಸುಮಾರು 100 ನಕಲಿ ಮತದಾರರ ವಿವರ ಬಿಜೆಪಿ ಮುಖಂಡರಿಗೆ ಲಭ್ಯವಾಗಿದೆ.ಎರಡೆರಡು ಕಡೆ ಮತದಾರರ ಪಟ್ಟಿಯಲ್ಲಿ ವೈಟ್ ಹೌಸ್ ಹೋಮ್ಸ್‌ನ 100 ಮತದಾರರ ಹೆಸರು ದಾಖಲಾಗಿದೆ.ಈ ಹಿಂದೆ ಮಣ್ಣಗುಡ್ಡೆ ವಾರ್ಡ್ ಬೂತ್ ಸಂಖ್ಯೆ 81ರಲ್ಲಿದ್ದ ವೈಟ್ ಹೌಸ್ ಹೋಮ್ಸ್3 ತಿಂಗಳ ಹಿಂದೆ ವೈಟ್ ಹೌಸ್ ಹೋಮ್ಸ್ ಅಳಪೆ ಗ್ರಾಮಕ್ಕೆ ಸ್ಥಳಾಂತರಗೊಂಡಿತ್ತು. ಆದರೆ, ಮಣ್ಣಗುಡ್ಡ ಹಾಗೂ ಅಳಪೆಯ ಮತದಾರರ ಪಟ್ಟಿಯಲ್ಲೂ ವೈಟ್ ಹೌಸ್ ಹೋಮ್ಸ್‌ನ 100 ಮತದಾರರ ಹೆಸರು ದಾಖಲಾಗಿದ್ದು ಹಾಗೇಯೇ ಇದೆ.ಈ ಹಿನ್ನೆಲೆಯಲ್ಲಿ ಬಿಜೆಪಿಯಿಂದ ಮಂಗಳೂರು ಬರ್ಕೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ. ಪ್ರಕರಣ ಸಂಬಂಧಿಸಿ ಸಂತೋಷ್ ಹಾಗೂ ಇತರ 28 ಮಂದಿಗಳ ವಿರುದ್ಧ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ. ಹಿಂದೂ ಸಂಘಟನೆಯ ಮುಖಂಡ ವಿನಯ್ ಎಲ್.ಶೆಟ್ಟಿ ದೂರು ದಾಖಲು ಮಾಡಿದ್ದಾರೆ. ವೆಲೆನ್ಸಿಯಾ, ಕಂಕನಾಡಿ, ಬಿಕರ್ನಕಟ್ಟೆ, ಮಣ್ಣಗುಡ್ಡೆ,ಅಳಪೆಯಲ್ಲಿ 3000 ನಕಲಿ ಮತದಾರರ ನೋಂದಣಿಯ ಮಾಹಿತಿ ಇದ್ದು ನಕಲಿ ಮತದಾರರು ಪತ್ತೆಯಾದರೆ ಕ್ರಿಮಿನಲ್ ಮೊಕದ್ದಮೆ ಹೂಡುವುದಾಗಿ ಬಿಜೆಪಿ ಎಚ್ಚರಿಕೆ ನೀಡಿದೆ.ಅನ್ಯ ರಾಜ್ಯಗಳ ವಿದ್ಯಾರ್ಥಿಗಳಿಗೆ ಆಮಿಷವೊಡ್ಡಿ ಮತಪಟ್ಟಿಗೆ ಸೇರಿಸಿರುವ ಬಗ್ಗೆಯೂ ಮಾಹಿತಿ ಇದ್ದು, ಇದನ್ನು ತಡೆಯಲು ಎಲ್ಲಾವನ್ನು ಮಾಡಲು ಬಿಜೆಪಿ ಸಿದ್ದ ಎಂದು ಹೇಳಿದೆ.
ಈ ಎಲ್ಲ ವಿವರಗಳನ್ನು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಸಂಬಂಧ ಪಟ್ಟ ಪೊಲೀಸ್ ಠಾಣೆಗೆ ನೀಡಿ ದೂರು ದಾಖಲಿಸಲಾಗುತ್ತಿದೆ.
ಗುರುವಾರ ಮತದಾನ ಸಂದರ್ಭದಲ್ಲಿ ಮಂಗಳೂರು ಲೋಕಸಭಾ ಕ್ಷೇತ್ರದ ಎಲ್ಲಾ ಮತ ಕೇಂದ್ರಗಳಲ್ಲಿ ಪಕ್ಷದ ಕಾರ್ಯಕರ್ತರನ್ನು ನಿಯೋಜನೆ ಮಾಡಿ ನಕಲಿ ಮತದಾರರ ಪತ್ತೆ ಮಾಡಲಾಗುವುದು. ಅಂತಹ ಮತದಾರರು ಪತ್ತೆಯಾದರೆ ಕ್ರಿಮಿನಲ್ ಮೊಕದ್ದಮೆ ಹೂಡುವುದಾಗಿ ಬಿಜೆಪಿ ಎಚ್ಚರಿಸಿದೆ.
ಮಂಗಳೂರು ಲೋಕಸಭಾ ಕ್ಷೇತ್ರದ ಎಲ್ಲ 1861ಮತದಾನ ಕೇಂದ್ರದಲ್ಲಿ ನಕಲಿ ಮತದಾರರ ಪತ್ತೆಗೆಂದೆ ವಿಶೇಷ ಕಾರ್ಯಕರ್ತರ ಪಡೆಯನ್ನು ನಿಯೋಜಿಸಲಾಗುತ್ತಿದೆ. ಯಾವುದೇ ಕಾರಣಕ್ಕೆ ನಕಲಿ ಮತದಾನಕ್ಕೆ ಅವಕಾಶ ನೀಡುವುದಿಲ್ಲ.
ನಕಲಿ ಮತದಾರ ಎಂದು ಸಂಶಯ ಬಂದರೆ ಅವರ ಮೇಲೆ ಕ್ರಿಮಿನಲ್ ಮೊಕದ್ದಮೆಯನ್ನು ದಾಖಲು ಮಾಡಲಾಗುವುದು. ಅದು ಸಾಬೀತಾದರೆ ಜೈಲು ಶಿಕ್ಷೆಯಾಗಲಿದೆ.
ಮುಖ್ಯವಾಗಿ ಇಲ್ಲಿ ಕಲಿಯಲು ಬಂದಿರುವ ಅನ್ಯ ರಾಜ್ಯಗಳ ವಿದ್ಯಾರ್ಥಿಗಳು ಯಾವುದೋ ಅಮಿಷಕ್ಕಾಗಿ ನಕಲಿ ಮತದಾನ ಮಾಡಿ , ಭವಿಷ್ಯವನ್ನು ಪಣಕ್ಕಿಡುವ ಕೆಲಸ ಮಾಡದಂತೆ ಬಿಜೆಪಿ ಎಚ್ಚರಿಕೆ ನೀಡಿದೆ.