LATEST NEWS
ನಕಲಿ ಷೇರು ಮಾರ್ಕೆಟ್ ನಂಬಿ 43 ಲಕ್ಷ ಹಣ ಮಂಗಳೂರಿನ ವ್ಯಕ್ತಿ
ಮಂಗಳೂರು ಅಕ್ಟೋಬರ್ 29: ಮಂಗಳೂರಿನ ಜನ ಒಂದೇ ಕ್ಷಣದಲ್ಲಿ ಹಣ ಮಾಡುವ ಆಸೆಗೆ ಬಿದ್ದು ಸೈಬರ್ ಕ್ರೈಂ ಅಪರಾಧಿಗಳಿಗೆ ಸುಲಭ ತುತ್ತಾಗುತ್ತಿದ್ದಾರೆ. ಇದೀಗ ಮತ್ತೊಂದು ಪ್ರಕರಣ ಸೆನ್ ಠಾಣೆಯಲ್ಲಿ ದಾಖಲಾಗಿದ್ದಸ ನಕಲಿ ಷೇರು ಮಾರುಕಟ್ಟೆ ನಂಬಿ ವ್ಯಕ್ತಿಯೊಬ್ಬರು ಬರೋಬ್ಬರಿ 43.32 ಲಕ್ಷ ಹಣ ಕಳೆದುಕೊಂಡಿದ್ದಾರೆ.
ವ್ಯಕ್ತಿ ಸೆನ್ ಠಾಣೆಯಲ್ಲಿ ನೀಡಿದ ದೂರಿನ ಪ್ರಕಾರ ನನ್ನ ವಾಟ್ಸ್ಆ್ಯಪ್‌ಗೆ ಸೆಪ್ಟೆಂಬರ್ 25ರಂದು ಅಪರಿಚಿತ ಸಂಖ್ಯೆಯಿಂದ ಸಂದೇಶ ಬಂದಿತ್ತು. ಸಂದೇಶ ಕಳುಹಿಸಿದ್ದ ವ್ಯಕ್ತಿ ತನ್ನನ್ನು ಮಂಜು ಪಚಿಸಿಯ ಎಂದು ಪರಿಚಯಿಸಿಕೊಂಡಿದ್ದ. ಷೇರು ಮತ್ತು ಐಪಿಒ ವಹಿವಾಟಿನಲ್ಲಿ ಹೆಚ್ಚು ಲಾಭ ಗಳಿಸಬಹುದು ಎಂದು ಒಂದು ಆನ್‌ಲೈನ್ ಕೊಂಡಿಯನ್ನು ಕಳುಹಿಸಿ ಹಣ ಹೂಡಿಕೆ ಮಾಡುವಂತೆ ಪ್ರೇರೇಪಿಸಿದ್ದ. ಇನ್ನೊಂದು ಕೊಂಡಿಯನ್ನು ಕಳುಹಿಸಿದ್ದ. ಈ ಬಗ್ಗೆ ಸಲಹೆ ನೀಡಲು ಟೆಲಿಗ್ರಾಂ ಆ್ಯಪ್‌ನ ಈ ಕೊಂಡಿ ಕಳುಹಿಸಿದ್ದರು. ಅದರಲ್ಲಿ ಅವರು ಸಲಹೆ ನೀಡಿದ ಖಾತೆಗಳಿಗೆ ಸೆ 26ರಿಂದ ಅ. 23ರ ನಡುವೆ ಒಮ್ಮೆ ₹ 22 ಲಕ್ಷ, ಮತ್ತೊಮ್ಮೆ ₹ 19.82 ಲಕ್ಷ, ಇನ್ನೊಮ್ಮೆ * 1.5 ಲಕ್ಷ ಸೇರಿ ಒಟ್ಟು ₹ 43.32 ಹಣ ಪಾವತಿಸಿದ್ದೆ. ಹೂಡಿದ ಹಣವನ್ನು ಹಿಂಪಡೆಯಲು ಯತ್ನಿಸಿದಾಗ ಸಲಹೆ ನೀಡಿದ ವ್ಯಕ್ತಿಗಳು ಶೇ 25ರಷ್ಟು ಕಮಿಷನ್ ನೀಡುವಂತೆ ಒತ್ತಾಯಿಸಿದರು. ಆಗ ವಂಚನೆಗೆ ಒಳಗಾಗಿರುವುದು ಗೊತ್ತಾಯಿತು. ನನಗೆ ವಂಚಿಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಂತ್ರಸ್ತ ವ್ಯಕ್ತಿ ದೂರಿನಲ್ಲಿ ಒತ್ತಾಯಿಸಿದ್ದಾರೆ’ ಎಂದು ಪೊಲೀಸರು ಮಾಹಿತಿ ನೀಡಿದರು.