Connect with us

    FILM

    ನಟಿ ರಮ್ಯಾ ಗೆ ಹಾರ್ಟ್ ಅಟ್ಯಾಕ್ – ವೈರಲ್ ಆದ ಸುಳ್ಳು ಸುದ್ದಿ….!!

    ಬೆಂಗಳೂರು ಸೆಪ್ಟೆಂಬರ್ 06 : ಕನ್ನಡದ ಖ್ಯಾತ ನಟಿ ರಮ್ಯಾ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಲ್ಲದೆ ತಮಿಳಿನ ಕೆಲವು ಸುದ್ದಿ ಚಾನೆಲ್ ಗಳು ರಮ್ಯಾ ಸಾವನಪ್ಪಿದ್ದಾರೆ ಎಂಬ ಸುದ್ದಿಯನ್ನು ಬಿತ್ತರಿಸಿವೆ.


    ರಮ್ಯಾಗೆ ಹಾರ್ಟ್ ಅಟ್ಯಾಕ್ ಆಗಿ ಸಾವಿಗೀಡಾಗಿದ್ದಾರೆ ಎನ್ನುವ ಪೋಸ್ಟ್‌ಗಳು ಬೆಳ್ಳಂಬೆಳಗ್ಗೆ ಟ್ವಿಟರ್‌ನಲ್ಲಿ ಹರಿದಾಡಿದ್ದು, ಭೀತಿ ಸಷ್ಟಿಸಿದ್ದವು. ಹಲವು ಸಿನೆಮಾಗೆ ಸಂಬಂಧಿಸಿದ ಟ್ವೀಟರ್ ಪೇಜ್ ಗಳಲ್ಲೂ ರಮ್ಯಾ ಸಾವನಪ್ಪಿದ್ದಾರೆ ಎಂದು ಶೇರ್ ಮಾಡಲಾಗಿತ್ತು. ಬಳಿಕ ಅದೊಂದು ಸುಳ್ಳು ಸುದ್ದಿ ಎಂದು ತಿಳಿದು ಬಂದಿದೆ.


    ಸದ್ಯ ರಮ್ಯಾ ಯುರೋಪ್ ಪ್ರವಾಸದಲ್ಲಿದ್ದು, ಅಲ್ಲಿ ಆರಾಮಾಗಿದ್ದಾರೆ ಎಂದು ತಿಳಿದು ಬಂದಿದೆ.

    Share Information
    Advertisement
    Click to comment

    You must be logged in to post a comment Login

    Leave a Reply